ಉಡುಪಿ: ನಾಳೆ ಫಸ್ಟ್- ಸೆಕೆಂಡ್ ಡೋಸ್ ಲಸಿಕೆ ಪಡೆಯಬಹುದು

ಉಡುಪಿ : ಕೋವ್ಯಾಕ್ಸಿನ್ ಪ್ರಥಮಡೋಸ್‌ ಜಿಲ್ಲೆಯಲ್ಲಿ ಲಭ್ಯವಿರುವುದಿಲ್ಲ. ಮೇ 21 ರಂದು ಗ್ರಾಮೀಣ ಪ್ರದೇಶದಲ್ಲಿ 45 ವರ್ಷ ಮೇಲ್ಪಟ್ಟವರು  ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನಗಳು ಪೂರ್ಣಗೊಂಡು , 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು. ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಚ್ 30 ಅಥವಾ ಅದಕ್ಕಿಂತ […]

ಹೋಂ ಐಸೋಲೇಶನ್ ನಲ್ಲಿರುವವರನ್ನು ಕೋವಿಡ್ ಸೋಂಕಿತರ ಕೈ ಗೆ ಸೀಲ್ ಹಾಕಿ : ಡಾ. ಎಂ.ಟಿ.ರೇಜು

ಉಡುಪಿ: ಕೋವಿಡ್ ಪಾಸಿಟಿವ್ ಆಗಿ, ಹೋಂ ಐಸೋಲೇಷನ್ ನಲ್ಲಿರುವವರು, ಅನಗತ್ಯವಾಗಿ ಮನೆಯಿಂದ ಹೊರಬಂದು , ಸಾರ್ವಜನಿಕವಾಗಿ ಸ್ಥಳಗಳಲ್ಲಿ ತಿರುಗಾಡಿ, ಆರೋಗ್ಯವಂತರಿಗೆ ಕೋವಿಡ್ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ, ಹೋಂ ಐಸೋಲೇಷನ್ ನಲ್ಲಿರುವವರನ್ನು ಗುರುತಿಸಲು ಸಾಧ್ಯವಾಗುವಂತೆ, ಅವರ ಕೈ ಗೆ ಸೀಲ್ ಹಾಕುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ. ರೇಜು ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ […]

ಕಾರ್ಕಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ:ಲಾಕ್ ಡೌನ್ ಪರಿಸ್ಥಿತಿ ಅವಲೋಕನ

ಕಾರ್ಕಳ: ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕಾರ್ಕಳಕ್ಕೆ ಭೇಟಿ ನೀಡಿ ಲಾಕ್ ಡೌನ್ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್ ಪುರಂದರ ಹೆಗ್ಡೆ,ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕಂದಾಯ ಅಧಿಕಾರಿ ಸಂತೋಷ್ ಮುಂತಾದವರು ಹಾಜರಿದ್ದರು.

ಉಡುಪಿ: ಕೊರೊನಾ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಕ್ಲಿನಿಕ್, ವೈದ್ಯರ ಮೇಲೆ ಸೂಕ್ತ ಕ್ರಮದ ಜತೆಗೆ ಲೈಸನ್ಸ್ ರದ್ದುಗೊಳಿಸಲಾಗುವುದು; ಡಿಸಿ ಜಿ. ಜಗದೀಶ್ ಎಚ್ಚರಿಕೆ

ಉಡುಪಿ: ಜಿಲ್ಲೆಯ ಸ್ಥಳೀಯ ಕ್ಲಿನಿಕ್ ಅಥವಾ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳಲ್ಲಿ ಕೊರೊನಾ ಲಕ್ಷಣ ಕಂಡುಬಂದಲ್ಲಿ ಅವರಿಗೆ ತಾತ್ಕಾಲಿಕ ಉಪಶಮನದ ಚಿಕಿತ್ಸೆ, ಔಷಧ ನೀಡಬಾರದು. ಅವರನ್ನು‌ ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಸ್ಥಳೀಯ ಕ್ಲಿನಿಕ್ ಅಥವಾ ವೈದ್ಯರು ಕೊರೊನಾ ಸೋಂಕಿನ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಿ, ಬಳಿಕ‌ ರೋಗ ಉಲ್ಬಣಗೊಂಡು‌ ರೋಗಿಗಳು ಮೃತಪಟ್ಟ ಪ್ರಕರಣಗಳು ಕಂಡುಬಂದಲ್ಲಿ ಅಂತಹ ವೈದ್ಯರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005 […]

ಪುತ್ತಿಗೆ ಮಠ, ಗುರ್ಮೆ ಫೌಂಡೇಶನ್ ವತಿಯಿಂದ ನಾಲ್ಕು ಆ್ಯಂಬುಲೆನ್ಸ್ ಹಸ್ತಾಂತರ

ಕಾಪು: ಪುತ್ತಿಗೆ ಮಠ ಹಾಗೂ ಗುರ್ಮೆ ಫೌಂಡೇಶನ್ ವತಿಯಿಂದ ಕೊರೊನಾ ತುರ್ತು ಚಿಕಿತ್ಸೆಗಾಗಿ ನೀಡಿರುವ ನಾಲ್ಕು ಆ್ಯಂಬುಲೆನ್ಸ್ ಗಳ ಹಸ್ತಾಂತರ ಕಾರ್ಯಕ್ರಮ ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆಯಿತು. ಆ್ಯಂಬುಲೆನ್ಸ್ ಗೆ ಚಾಲನೆ ನೀಡಿ ಮಾತನಾಡಿದ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥರು, ಕೊರೊನಾ ಸಮಸ್ಯೆಯಿಂದಾಗಿ ಮನುಕುಲ ತತ್ತರಿಸಿ ಹೋಗಿದೆ‌‌. ಆಕಸ್ಮಿಕವೋ ಅಥವಾ ವ್ಯವಸ್ಥಿತ ಪಿತೂರಿಯೋ ಅರಿಯದೇ ಭಾರತ ಕೊರೊನಾದಿಂದ ಮುಕ್ತವಾಗಲು ಹೆಣಗಾಡುತ್ತಿದೆ. ಇಂತಹ ಕಠಿಣ ಸಮಯದಲ್ಲಿ ಉಳ್ಳವರು ಸೇವೆ ನೀಡಬೇಕು. ನಾವೆಲ್ಲರೂ ಒಟ್ಟಾಗಿ ಸೇವೆ ಮಾಡೋಣ ಎಂದು […]