ಉಡುಪಿ: ಮಕ್ಕಳ ಅಚ್ಚುಮೆಚ್ಚಿನ ಸರೋಜ ಟೀಚರ್ ನಿಧನ

ಉಡುಪಿ: ಒಳಕಾಡು ಅಂಗನವಾಡಿ ಶಾಲೆಯ ನಿವೃತ್ತ ಶಿಕ್ಷಕಿ ಸರೋಜ (64 ) ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. ನಿವೃತ್ತಿ ಬಳಿಕ‌ ಕುಕ್ಕಿಕಟ್ಟೆ ವಿದ್ಯಾರ್ಥಿ ನಿಲಯದಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಂತೆ, ತಕ್ಷಣ ಸ್ಪಂದಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ತಮ್ಮ ಆಂಬುಲೆನ್ಸ್ ವಾಹನದಲ್ಲಿ ಶವಸಾಗಿಸಿ ಶವಗಾರದಲ್ಲಿ ರಕ್ಷಿಸಿ ಇಡಲು ವ್ಯವಸ್ಥೆಗೊಳಿಸಿದ್ದಾರೆ. ಯಶೋಧಾಮ ಆಟೋ ಯೂನಿಯನ್ ನ ಆಟೊ ಚಾಲಕರು ಸಹಕರಿಸಿದರು.

ಲಾಕ್ ಡೌನ್ ಹಿನ್ನಲೆ: ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರವನ್ನು ಒದಗಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೋವಿಡ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯಾದ್ಯಂತ 14 ದಿನ ಮೇ 24ರವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಇದರಿಂದ ಬಡವರು ಹಾಗೂ ಕೂಲಿಕಾರ್ಮಿಕರು ಆಹಾರ ಸಿಗದೇ ಪರದಾಡುವಂತಾಗಿತ್ತು. ಹೀಗಾಗಿ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಪೊರೈಸಲು ಸರ್ಕಾರ ತೀರ್ಮಾನಿಸಿದೆ‌. ಬೆಂಗಳೂರಿನ ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಚಾಲನೆಯಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಈ ವ್ಯವಸ್ಥೆ ಜಾರಿಯಲ್ಲಿ ಇರಲಿದೆ. ಬೆಳಗ್ಗಿನ ಉಪಹಾರ, […]

ಕೋವಿಡ್ ಹೆಚ್ಚಳ: ಶಿವಮೊಗ್ಗ ನಗರ 4 ದಿನ ಸಂಪೂರ್ಣ ಬಂದ್; ಅಗತ್ಯ ವಸ್ತು ಖರೀದಿಗೂ ಅವಕಾಶವಿಲ್ಲ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಕಟ್ಟುನಿಟ್ಟಿನ ಲಾಕ್‌ ಡೌನ್‌ಗೆ ಘೋಷಣೆ ಮಾಡಲಾಗಿದೆ. ಇಂದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದರು. ಮೇ 13ರಿಂದ ಮೇ 16 ರವೆಗೆ ಶಿವಮೊಗ್ಗ ನಗರಕ್ಕೆ ಸೀಮಿತವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಸ್ಥಳೀಯ ಏರಿಯಾವನ್ನು ಬಿಟ್ಟು ಯಾರು ಹೊರಬರುವಂತಿಲ್ಲ . ದಿನಸಿ ಸೇರಿದಂತೆ ಏನೇ ಅಗತ್ಯ ವಸ್ತು ಬೇಕಾದರೂ ನಾಳೆಯೇ ಖರೀದಿ ಮಾಡಿಟ್ಟುಕೊಳ್ಳಿ ಎಂದು […]

ನಿಮಗೆ ಸನ್ ಬರ್ನ್ ಸಮಸ್ಯೆ ಇದ್ಯಾ: ಇಲ್ಲಿದೆ ಸುಲಭ ಮನೆಮದ್ದು!

ಬಿಸಿಲಿಗೆ ಮೈ ಯೊಡ್ಡಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ ಅಲ್ವಾ? ಆದರೆ ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ತಿಳಿಬಿಸಿಲಿಗೆ ಮೈಯೊಡ್ಡಬೇಕು ಅನ್ನೋದು ನಿಮಗೆ ಗೊತ್ತಿರಲಿ. ಯಾಕೆಂದರೆ ಬೇರೆ ಸಮಯದಲ್ಲಿ ಬಿಸಿಲಿನಲ್ಲಿ ಇರುವಂತಹ ಯುವಿ ಕಿರಣಗಳು ದೇಹಕ್ಕೆ ಹಾನಿ ಉಂಟು ಮಾಡುವುದು. ದೀರ್ಘಕಾಲ ತನಕ ಸೂರ್ಯನ ಬಿಸಿಲಿಗೆ ಮೈಯೊಡ್ಡುವ ಪರಿಣಾಮವಾಗಿ ತ್ವಚೆಯಲ್ಲಿ ಸುಟ್ಟ ಸಮಸ್ಯೆಯು ಕಾಣಿಸಬಹುದು. ಇವುಗಳನ್ನೇ ನಾವು ಸನ್ ಬರ್ನ್ ಎಂದು ಕರೆಯುತ್ತೆವೆ. ಇದರ ಸಮಸ್ಯೆ ಚರ್ಮ ಎದ್ದು […]

ಉಡುಪಿ ಜಿಲ್ಲೆ:ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಅವಕಾಶ

ಉಡುಪಿ : ರಾಜ್ಯಾದ್ಯಂತ ಕೋವಿಡ್-19 ಸೊಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸೊಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿ ಮೇ 10 ರಿಂದ 24 ರ ವರೆಗೆ ಕೊರೋನಾ ಕರ್ಫ್ಯೂ ವಿಧಿಸಿಲಾಗಿರುತ್ತದೆ. ಸರ್ಕಾರದ ಮುಖ್ಯಕಾರ್ಯದರ್ಶಿಯವರ ಮಾರ್ಗಸೂಚಿಯಂತೆ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕ ಪಡಿತರ ವ್ಯವಸ್ಥೆ ಮಾಡಲು ನ್ಯಾಯಬೆಲೆ ಅಂಗಡಿಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ತಮ್ಮ ವ್ಯಾಪ್ತಿಗೆ ಒಳಪಡುವ ನ್ಯಾಯಬೆಲೆ ಅಂಗಡಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಿ ಪಡಿತರ ವಿತರಣೆ ವ್ಯವಸ್ಥೆ […]