ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ: ನಾಳೆಯಿಂದ ಸಂತೆ, ವಾರದ ಸಂತೆ ಸಂಪೂರ್ಣ ನಿಷೇಧ: ದಿನಸಿ ಅಂಗಡಿಗಳನ್ನು ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ವರೆಗೆ ತೆರೆಯಲು ಅವಕಾಶ

ಉಡುಪಿ: ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ‌ ಪರಿಷ್ಕರಿಸಲಾಗಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ . ಮಂಜುನಾಥ್ ಪ್ರಸಾದ್ ಈ ಕೆಳಕಂಡಂತೆ ಆದೇಶ ಹೊರಡಿಸಿದ್ದಾರೆ. ಅದರಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ ಹಾಗೂ ನೂಕು ನುಗ್ಗಲುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಇದೇ ಮೇ 2ರಿಂದ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿಷೇಧಿಸಲಾಗಿದೆ. ಇದರ ಬದಲಿಗೆ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹಾಮ್ ಕಾಮ್ಸ್, ಎಲ್ಲಾ ಹಾಲಿನ ಬೂತುಗಳು, ತಳ್ಳುವಗಾಡಿ ಮೂಲಕ […]

ಉಡುಪಿ: ಇಂದು 430 ಮಂದಿಗೆ ಕೊರೊನಾ ಪಾಸಿಟಿವ್; ಮೂವರು ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದು (ಮೇ 30) ಇಳಿಕೆಯಾಗಿದ್ದು, 430 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 2,643ಕ್ಕೆ ಏರಿಕೆಯಾಗಿದೆ. ಉಡುಪಿ ತಾಲ್ಲೂಕಿನಲ್ಲಿ 226, ಕುಂದಾಪುರ 162, ಕಾರ್ಕಳ 39 ಹಾಗೂ ಹೊರ ಜಿಲ್ಲೆಯ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಏ. 30ರಂದು 2565 ಮಂದಿಯನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ. 300 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದು, ಉಡುಪಿ ತಾಲೂಕಿನ 64 ವರ್ಷದ ಪುರುಷ, […]

ದೂರದರ್ಶನ ನಿರೂಪಕಿ ಕಾನುಪ್ರಿಯಾ ಕೋವಿಡ್ ಸೋಂಕಿನಿಂದ ಮೃತ್ಯು

ನವದೆಹಲಿ: ದೂರದರ್ಶನ ವಾಹಿನಿ ಟಿವಿ ನಿರೂಪಕಿ ಕಾನುಪ್ರಿಯಾ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೋವಿಡ್‍ನಿಂದ ಅಸ್ವಸ್ಥರಾಗಿದ್ದ ಕಾನುಪ್ರಿಯಾಳನ್ನು 11 ಸೆಕ್ಟರ್ ನೋಯ್ಡಾದಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೋವಿಡ್ ಸೋಂಕು ಶ್ವಾಸಕೋಶಕ್ಕೆ ತಗುಲಿತ್ತು. ಹೀಗಾಗಿ ಕಡಿಮೆ ಆಮ್ಲಜನಕ ಮಟ್ಟ ಮತ್ತು ತೀವ್ರ ಜ್ವರದಿಂದಾಗಿ ಕಾನುಪ್ರಿಯಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಾನುಪ್ರಿಯ ಕೇವಲ ನ್ಯೂಸ್ ಆ್ಯಂಕರ್ ಮಾತ್ರವಲ್ಲ, ನಟಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಆಧ್ಯಾತ್ಮಿಕ ಗುರು ಮತ್ತು ಬ್ರಹ್ಮ ಕುಮಾರಿ ಸೋದರಿ ಬಿ.ಕೆ. ಶಿವಾನಿ ಕಾನುಪ್ರಿಯಾ ನಿಧನ […]

ಕುಂಜಾಲು ನಿವಾಸಿ ರಾಮಚಂದ್ರ ರಾಯರ ಮಾದರಿ ಗೋಸೇವೆ; 13 ವರ್ಷದಿಂದ ಲಾರಿ ಒಣಹುಲ್ಲು ಗೋಶಾಲೆಗೆ ಹಸ್ತಾಂತರ

ಉಡುಪಿ: ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದ  ಕುಂಜಾಲು ನಿವಾಸಿ ರಾಮಚಂದ್ರ ರಾವ್ ಎಂಬವರು ಕಳೆದ ಹದಿಮೂರು ವರ್ಷಗಳಿಂದ ಒಂದು ಲಾರಿ ಲೋಡ್ ಒಣ ಹುಲ್ಲನ್ನು ಖರೀದಿಸಿ ನೀಲಾವರ ಗೋಶಾಲೆಗೆ ಸದ್ದಿಲ್ಲದೇ ಒಪ್ಪಿಸುತ್ತಿರುವ ಮಾದರಿ ಕಾರ್ಯದ ಬಗ್ಗೆ ಗೋಶಾಲೆಯ ಅಧ್ವರ್ಯು ಪೇಜಾವರ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಮೂರನೇ ದರ್ಜೆಯ ಆರೋಗ್ಯ ಸಹಾಯಕ ಹುದ್ದೆಯ ನಿವೃತ್ತ ನೌಕರ ರಾಮಚಂದ್ರ ರಾವ್  ಅವರು ತನ್ನೂರಿನ‌ಲ್ಲೇ ಈ ಗೋಶಾಲೆ ಇದ್ದರೂ ಒಮ್ಮೆಯೂ ನೋಡಿರಲಿಲ್ಲ .‌ ಒಮ್ಮೆ […]

ಕಾರ್ಕಳ ಆನೆಕೆರೆ ಜಾಗ ಒತ್ತುವರಿಗೊಳಿಸಿ ಅಕ್ರಮ ಕಟ್ಟಡ ನಿರ್ಮಾಣ:ಪುರಸಭಾ ಅಧ್ಯಕ್ಷೆಯ ಮೌನ, ಅಧ್ಯಕ್ಷೆಯ ನಡೆಗೆ ಆಕ್ರೋಶ!

ಕಾರ್ಕಳ: ಪುರಸಭೆ ವ್ಯಾಪ್ತಿಯ ಆನೆಕರೆ ಪಾಕ್೯ ಸಮೀಪದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಆನೆಕರೆ ಜಾಗವನ್ನು ಒತ್ತುವರಿಗೊಳಿಸಿ ರಾತ್ರೋ ರಾತ್ರಿ ಆಕ್ರಮ ಕಟ್ಟಡವೊಂದು ತಲೆ ಎತ್ತಿದೆ. ಈ ಬಗ್ಗೆ ಪುರಸಭಾ ಅಧ್ಯಕ್ಷೆ  ಹಾಗೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಕ್ಕೆ ‌ಕಾರಣವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕಾರ್ಕಳ ಶಾಸಕರ ನೇತೃತ್ವದಲ್ಲಿ ಲಕ್ಷ ಗಟ್ಟಲೆ ಹಣವನ್ನು ಖರ್ಚು ಮಾಡಿ ಕೆರೆಯ ಹೂಳು ಎತ್ತಲಾಗಿತ್ತು. ಇದೇ  ಸಂದರ್ಭದಲ್ಲಿ ಕೆರೆಯ ಸುತ್ತಲೂ ತಡೆಬೇಲಿಯನ್ನು ನಿರ್ಮಿಸಿ ಕೆರೆಯ ಸಂರಕ್ಷಣಾ ಕಾರ್ಯವನ್ನು ನಡೆಲಾಗಿತ್ತು.ಆದರೆ […]