ಮದುವೆ, ಸಭೆ, ಸಮಾರಂಭಗಳಲ್ಲಿ ನೂರಕ್ಕಿಂತ ಅಧಿಕ ಜನ ಸೇರುವಂತಿಲ್ಲ: ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮದುವೆ, ಸಭೆ ಹಾಗೂ ಸಮಾರಂಭಗಳಿಗೆ ಸರ್ಕಾರ ನಿಯಂತ್ರಣ ಹೇರಲು ಮುಂದಾಗಿದೆ. ರಾಜ್ಯದಲ್ಲಿ ಸೋಂಕು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಸುಧಾಕರ್, ಒಳಾಂಗಣ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ನೂರಕ್ಕಿಂತ ಅಧಿಕ ಜನ ಸೇರುವಂತಿಲ್ಲ. ಅದೇ ರೀತಿ ಹೊರಗಡೆ ನಡೆಯುವ ಕಾರ್ಯಕ್ರಮಗಳಲ್ಲಿ 200 ಜನಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು. […]

ಕಾರ್ಕಳ ಪುರಸಭಾ ವ್ಯಾಪ್ತಿಯ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ಮುಖ್ಯಾಧಿಕಾರಿ ರೇಖಾಶೆಟ್ಟಿ ಅವರ ನಡೆಗೆ ಸಾರ್ವಜನಿಕರ ಮೆಚ್ಚುಗೆ

ಕಾರ್ಕಳ: ಕಾರ್ಕಳ ಪುರಸಭಾ ಪುರಸಭಾ ವ್ಯಾಪ್ತಿಯಲ್ಲಿ ಕೆಲವು ವರ್ಷಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ,ಒಳಚರಂಡಿ ಸಮಸ್ಯೆ ಸೇರಿದಂತೆ ಕೆಲವು ಸಾರ್ವಜನಿಕರ ಸಮಸ್ಯೆಗಳೇ ಅಧಿಕವಾಗಿದ್ದವು. ಇಲ್ಲಿನ ಹವಾಲ್ದಾರ್ ಬೆಟ್ಟಿನ ಚರಂಡಿ ನೀರು ಸಾರ್ವಜನಿಕರ ಬಾವಿಗಳಿಗೆ ಸೇರಿ ಕಲುಷಿತಗೊಂಡು ಪುರಸಭಾ ವ್ಯಾಪ್ತಿಯ ನೀರು ಬಳಕೆಗೆ ಅಯೋಗ್ಯವಾಗಿತ್ತು. ಮುಖ್ಯ ರಸ್ತೆಯ ಚರಂಡಿ ಕಾಮಗಾರಿಯೂ ಅಪೂರ್ಣ ಸ್ಥತಿಯಲ್ಲಿತ್ತು. ಆದರೆ ಕೆಲವೇ ಸಮಯದಲ್ಲಿ ಮುಖ್ಯಾಧಿಕಾರಿಯವರ ಮುತುವರ್ಜಿಯಿಂದ  ಈ ಎಲ್ಲಾ ಸಮಸ್ಯೆಗಳು ಪುರಸಭಾ ವ್ಯಾಫ್ತಿಯಲ್ಲಿ ಪರಿಹಾರ ಕಂಡಿವೆ. ಹೌದು ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ […]

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ರಾಜ್ಯದಲ್ಲಿ ಈಗಾಗಲೇ ಹೊರಡಿಸಿರುವ ವೇಳಾಪಟ್ಟಿಯಂತೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ. ಚಾಮರಾಜನಗರದ ಹನೂರಿನಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 21 ನಿಗದಿಯಾಗಿದೆ. ಪರೀಕ್ಷೆ ನಡೆಸುವಂತೆ ಎಲ್ಲಾ ಕಡೆಯಿಂದ ಒತ್ತಾಯ ಬರುತ್ತಿದೆ. ಪರೀಕ್ಷೆ ಆರಂಭವಾಗುವ ದಿನಾಂಕ ಇನ್ನೂ ಎರಡು ತಿಂಗಳ ಮೇಲಿದೆ. ಹೀಗಾಗಿ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಪರೀಕ್ಷೆ ನಡೆಸಲು ಕಳೆದ ವರ್ಷ ನೀಡಿದ್ದ ಎಸ್ಒಪಿಯನ್ನೇ ಅಳವಡಿಸಬೇಕಾ ಅಥವಾ ಇನ್ನೂ ಏನಾದರು […]

ಪವರ್ ಲಿಫ್ಟಿಂಗ್: ಕಾರ್ಕಳದ ಸ್ವಾತಿಗೆ ಬೆಳ್ಳಿ ಪದಕ

ಕಾರ್ಕಳ: ದಾವಣಗೆರೆಯ ಕುವೆಂಪು ಭವನದಲ್ಲಿ ಏ. 10 ಮತ್ತು 11ರಂದು ನಡೆದ ಕರ್ನಾಟಕ ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕಾರ್ಕಳದ ಸ್ವಾತಿ ಯು.ಕೆ. ಅವರು 63 ಕೆ.ಜಿ. ದೇಹತೂಕ ಹಿರಿಯ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಇವರು ಬೆಂಚ್ ಪ್ರೆಸ್ ವಿಭಾಗದಲ್ಲಿ 62.5 ಕೆ.ಜಿ ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದಾರೆ. ಸ್ವಾತಿ ಮಂಗಳೂರಿನ ಪ್ರದೀಪ್ಸ್ ಜಿಮ್ ನಲ್ಲಿ ತರಬೇತಿ‌ ಪಡೆಯುತ್ತಿದ್ದಾರೆ. ಇವರು ಕಾರ್ಕಳದ ಎಚ್ ಡಿಎಫ್ ಸಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಉಡುಪಿ, ಮಣಿಪಾಲ ಸಹಿತ ರಾಜ್ಯದ ಎಂಟು ನಗರಗಳಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ: ಸಿಎಂ

ಬೆಂಗಳೂರು: ಉಡುಪಿ, ಮಣಿಪಾಲ ಸೇರಿದಂತೆ ರಾಜ್ಯದ ಎಂಟು ನಗರಗಳಲ್ಲಿ‌ ನಿಗದಿಯಂತೆ ಏ. 20ರ ವರೆಗೆ ನೈಟ್ ಕರ್ಪ್ಯೂ ಮುಂದುವರಿಸುತ್ತೇವೆ. ಉಳಿದಂತೆ ಏ. 20ರ ಬಳಿಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಇಂದು ಸಿಎಂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಸಚಿವರ ಜತೆ ತುರ್ತು ಸಭೆ ನಡೆಸಿದರು. ಕೋವಿಡ್ ಮಹಾಮಾರಿ ಬೆಂಗಳೂರಿನಲ್ಲಿ ಮಿತಿ […]