ಏ. 21ಕ್ಕೆ ಈದು ಶ್ರೀ ಮೂಜಿಲ್ನಾಯ ದೈವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಕಾರ್ಕಳ: ಇಲ್ಲಿನ ಈದು ಶ್ರೀ ಮೂಜಿಲ್ನಾಯ ದೈವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಇದೇ ಬರುವ ಏ.21ಕ್ಕೆ ನೆರವೇರಿಸಲು ತೀರ್ಮಾನಿಸಲಾಗಿದೆ. ಇಂದು ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ತಂತ್ರಿಗಳು ರಾಶಿ ಪ್ರಶ್ನೆ ಹಾಕಿದ್ದು, ಅದರ ಮೂಲಕ ಏ. 21ರಂದು ಜಾತ್ರ ಮಹೋತ್ಸವ ನೆರವೇರಿಸಲು ತೀರ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರು ಹಾಗೂ ಧಾರ್ಮಿಕ ಮುಖಂಡ ಭಾಸ್ಕರ ಕೋಟ್ಯಾನ್, ದೈವಸ್ಥಾನದ ಆಡಳಿತ ಮೊಕ್ತೇಸರ ಡಾ. ವಿಜಯ ಕುಮಾರ್ ಕಾಜವ, ಅಶೋಕ್ ಕುಮಾರ್ ಜೈನ್, ಮಹಾವೀರ ಹೆಗ್ಡೆ ಮತ್ತು ಗ್ರಾಮದ […]

ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಗ್ರಾಮಸ್ಥರಿಂದ ಮುಷ್ಟಿ ಕಾಣಿಕೆ ಸಮರ್ಪಣೆ

ಉಡುಪಿ: ಬ್ರಹ್ಮಾವರ ಬಿಲ್ಲಾಡಿ ಗ್ರಾಮದ ನೈಲಾಡಿ ಕದ್ರಂಜೆಯ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಗುರುವಾರ ಗ್ರಾಮಸ್ಥರಿಂದ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನೆರವೇರಿತು. ಪ್ರಾಯಶ್ಚಿತ್ತ ಹೋಮ ಹವನ ಕಲಶಾಭಿಷೇಕಗಳಂತಹ ಧಾರ್ಮಿಕ ವಿಧಿವಿಧಾನಗಳನ್ನು ವೈದಿಕರು ನೆರವೇರಿಸಿದರು. ಬಳಿಕ ಸರ್ವಾಪರಾಧ ಪ್ರಾಯಶ್ಚಿತ್ತಕ್ಕಾಗಿ ಮತ್ತು ರುದ್ರ ಸನ್ನಿಧಿಯ ಉತ್ಥಾನಕ್ಕಾಗಿ ಪೂರ್ಣಶ್ರದ್ಧೆ, ಪೂರ್ಣ ತನುಮನಧನ ಸಹಿತ ಒಗ್ಗಟ್ಟಿನಿಂದ ದೇವಳ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಸಂಕೇತವಾಗಿ ಮುಷ್ಟಿ ಕಾಣಿಕೆ ಸಲ್ಲಿಸುವ ವಿಧಿಯನ್ನು ನೆರವೇರಿಸಲಾಯಿತು. ಮಹಾಲಿಂಗೇಶ್ವರನ ಮುಂಭಾಗದಲ್ಲಿ ಇಟ್ಟ ದೊಡ್ಡ ಪಾತ್ರೆಗೆ ಸಮಸ್ತ ಗ್ರಾಮಸ್ಥರು […]

ಕಾರ್ಕಳ: ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದ ನಾಲ್ಕೂವರೆ ತಿಂಗಳ ಮಗು ಮೃತ್ಯು; ಆರೋಪ

ಕಾರ್ಕಳ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಲಾದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದ ನಾಲ್ಕೂವರೆ ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮನೆಯವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶ್ರೀಯಾನ್ ಮೃತ ಮಗು. ಮಗುವಿಗೆ ಕಾರ್ಕಳ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಎ. 7ರಂದು ಮಧ್ಯಾಹ್ನ 12.30ರ ಸುಮಾರಿಗೆ ತಿಂಗಳ ಚುಚ್ಚು ಮದ್ದು ನೀಡಿದ್ದರು. ನಂತರ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದು, ಮಧ್ಯಾಹ್ನ 3 ಗಂಟೆಯ ವೇಳೆ ಮಗುವಿನ ಬಾಯಿಯಲ್ಲಿ ನೊರೆ ಬಂದು ತೀವ್ರ […]

ಅಜ್ಜರಕಾಡು ಮಹಿಳಾ ಕಾಲೇಜಿಗೆ 6 ರ‍್ಯಾಂಕ್

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯವು 2020ನೆ ಸಾಲಿನಲ್ಲಿ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಉಡುಪಿ ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು 6 ರ‍್ಯಾಂಕ್ ಮತ್ತು 2 ಚಿನ್ನದ ಪದಕಗಳನ್ನು ಗಳಿಸಿದೆ. ಎಂ.ಎ ಇತಿಹಾಸ ವಿಭಾಗದಲ್ಲಿ ಸುಕನ್ಯ ಪ್ರಥಮ ರ‍್ಯಾಂಕ್ ಮತ್ತು 2 ಚಿನ್ನದ ಪದಕ, ಎಂ.ಕಾಂ ವಿಭಾಗದಲ್ಲಿ ಸುಚಿತ್ರ ಶೆಟ್ಟಿ 2ನೆ ರ‍್ಯಾಂಕ್, ಸ್ವಾತಿ 6ನೆ ರ‍್ಯಾಂಕ್, ಸಮಿತಾ ಆರ್. ದೇವಾಡಿಗ 8ನೆ ರ‍್ಯಾಂಕ್, ಶಿಲ್ಪಾ 8ನೆ […]

ಸರ್ಕಾರ ನಡೆಸಲು ನಮಗೆ ಗೊತ್ತಿದೆ, ನೀವು ತಲೆಕೆಡಿಸಿಕೊಳ್ಳಬೇಡಿ: ಸಿಎಂ

ಹುಬ್ಬಳ್ಳಿ: ಪತ್ರಕರ್ತರ ಪ್ರಶ್ನೆಗೆ ಸಿಎಂ ಯಡಿಯೂರಪ್ಪ ಸಿಡಿಮಿಡಿಗೊಂಡ ಘಟನೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ‌ಇಂದು ನಡೆಯಿತು. ಸಾರಿಗೆ ನೌಕರರ ಮುಷ್ಕರ ಸಂಬಂಧಿಸಿ ಬೆಂಗಳೂರಿಗೆ ಹೋಗಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದು ಸಿಎಂ ಹೇಳಿದರು. ಈ ವೇಳೆ ‘ಖಾಸಗಿ ವಾಹನಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆಯಲ್ಲ ಎಂದು‌ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಖಾಸಗಿ ವಾಹನಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ, ನಾವು ನಿಗದಿ ಮಾಡಿದ ಹಣ ಮಾತ್ರ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದರು. ಒಂದು ವೇಳೆ […]