ಉಡುಪಿ, ಮಣಿಪಾಲ ಸಹಿತ ರಾಜ್ಯದ 8 ನಗರಗಳಲ್ಲಿ ನೈಟ್ ಕರ್ಫ್ಯೂ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 10 ರಿಂದ 20 ರವರೆಗೆ ಉಡುಪಿ, ದ.ಕ. ಜಿಲ್ಲೆ ಸಹಿತ ರಾಜ್ಯದ 8 ಜಿಲ್ಲಾ ಕೇಂದ್ರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಇಂದು ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡಿದ್ದ ಸಿಎಂ, ಬಳಿಕ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ ನಗರ, ಬೀದರ್ ನಗರ, ತುಮಕೂರು ನಗರ, ಉಡುಪಿ ಮತ್ತು […]
ಮೇ 24ರಿಂದ ಪಿಯುಸಿ, ಜೂನ್ 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: ಸಚಿವ ಸುರೇಶ್ ಕುಮಾರ್
ವಿಜಯಪುರ: ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಸರ್ಕಾರ ದಿನಾಂಕ ನಿಗದಿಪಡಿಸಿದೆ. ಮೇ 24ರಿಂದ ಪಿಯುಸಿ ಹಾಗೂ ಜೂನ್ 21 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ತಿಳಿಸಿದ್ದಾರೆ. 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಪರೀಕ್ಷೆ ನಡೆಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.
ಕಟಪಾಡಿಯಲ್ಲಿ “ಬೇಕ್ ಲೈನ್” ಶುಭಾರಂಭ
ಕಟಪಾಡಿ: ಕರಾವಳಿಯ ಪ್ರಸಿದ್ಧ ಕೇಕ್ ಶಾಪ್, ಬೇಕರಿ “ಬೇಕ್ ಲೈನ್” ಸಂಸ್ಥೆಯ ನೂತನ ಬೇಕರಿ ಶಿರ್ವ-ಮಂಚಕಲ್ ರೋಡ್ ನ ಬ್ಯಾಂಕ್ ಆಫ್ ಬರೋಡಾದ ಬಳಿ ಬುಧವಾರ ಶುಭಾರಂಭಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಗಂಗಾಧರ ಸುವರ್ಣ, ಕಟಪಾಡಿ ಗ್ರಾಪಂ ಸದಸ್ಯ ದಯಾನಂದ ಶೆಟ್ಟಿ ಕಟಪಾಡಿ, ಬೇಕ್ ಲೈನ್ ಸಂಸ್ಥೆಯ ಮಾಲೀಕ ಪ್ರಶಾಂತ್ ಕೋಟ್ಯಾನ್, ಸದಾನಂದ ಪಾತ್ರಿ, ಜಯ ಪೂಜಾರಿ ಉಪಸ್ಥಿತರಿದ್ದರು. ಈಗಾಗಲೇ ಉಡುಪಿ, ಕಾರ್ಕಳ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆಯಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬೇಕ್ […]
ಭಾಗ್ಯಲಕ್ಷ್ಮಿ ಅಡಿಗರ ‘ಕ್ಯಾಲ್ಕುಲಸ್ ಎಂಡ್ ಲೀನಿಯರ್ ಆಲ್ಜಿಬ್ರಾ’ ಪುಸ್ತಕ ಅನಾವರಣ
ಉಡುಪಿ: ಶ್ರೀಮನ್ ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇದರ ಸಹಯೋಗದಲ್ಲಿ ಭಾಗ್ಯಲಕ್ಷ್ಮಿ ಅಡಿಗ ಅವರು ಬರೆದಿರುವ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ “ಕ್ಯಾಲ್ಕುಲಸ್ ಎಂಡ್ ಲೀನಿಯರ್ ಆಲ್ಜಿಬ್ರಾ” ಪುಸ್ತಕ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಭೀಮ ಸಭಾಂಗಣದಲ್ಲಿ ಗುರುವಾರ ನಡೆಯಿತು. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಎಸ್.ಎಮ್.ಎಸ್.ಪಿ ಸಭಾದ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಎಲ್ಲಾ ಕ್ಷೇತ್ರದಲ್ಲಿ ಗಣಿತದ ಅವಶ್ಯಕತೆ ಇದ್ದು, ಗಣಿತ ಭಾಗ್ಯವನ್ನು ತರುವ ವಿದ್ಯೆಯಾಗಿದೆ ಎಂದರು. ಲೇಖಕಿ ಭಾಗ್ಯಲಕ್ಷ್ಮಿ ಅಡಿಗ ಮಾತನಾಡಿ, ಗಣಿತ ಎಂಬುವುದು […]
ಹೆಬ್ರಿ: ಬಸ್ ನಿಲ್ದಾಣದಲ್ಲೇ ನೇಣಿಗೆ ಕೊರಳೊಡ್ಡಿದ ಯುವಕ
ಹೆಬ್ರಿ: ಇಲ್ಲಿನ ಚಾರ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಹೆಬ್ರಿಯ ಚಾರಗ್ರಾಮದ ಯುವಕ ಪ್ರಶಾಂತ್ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಒಂದು ವರ್ಷದ ಹಿಂದೆ ವಿವಾಹವಾಗಿದ್ದು, ಹೆಬ್ರಿಯ ಖಾಸಗಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನು. ಈತನ ಪತ್ನಿ ಕೂಡ ಹೆಬ್ರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೌಟುಂಬಿಕ ಕಲಹದಿಂದ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.