ಹಿರಿಯ ಅಪೇಕ್ಷೆ ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ: ಪುತ್ತಿಗೆ ಶ್ರೀ

ಉಡುಪಿ: ನಮ್ಮ ಪೂರ್ವಜರನ್ನು ಸ್ಮರಿಸಿ ಅವರ ಅನುಗ್ರಹ ಪಡೆಯಲು ಶ್ರಾದ್ಧಾದಿ ಶಾಸ್ತ್ರೀಯ ಕರ್ತವ್ಯಗಳನ್ನು ನಡೆಸುತ್ತೇವೆ. ಅದೇ ರೀತಿ ಅವರ ಸಾತ್ವಿಕ ಅಪೇಕ್ಷೆಗಳನ್ನು ಈಡೇರಿಸುವುದು ಅಥವಾ ಅವರ ಆಶಯದಂತೆ ನಡೆದುಕೊಳ್ಳುವುದು ಸಹ ಶ್ರಾದ್ಧ ಕಾರ್ಯಕ್ಕೆ ಸಮ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ. ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರಿಂದ ಸ್ಥಾಪಿತವಾದ ಈಶಾವಾಸ್ಯ ಪ್ರತಿಷ್ಠಾನ ಉಡುಪಿ- ಬೆಂಗಳೂರು ಇದರ ವತಿಯಿಂದ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ನಡೆದ ಹಿರಿಯರ ನೆನಪು-2021 ಸಂಸ್ಕೃತಿ ಸಂಭ್ರಮ‌ […]

ಕೋವಿಡ್ ಮಾರ್ಗಸೂಚಿಯಲ್ಲಿ ಸಡಿಲಿಕೆ: ಜಿಮ್ ಗಳಲ್ಲಿ ಶೇ. 50ರಷ್ಟು ಜನರಿಗೆ ಅವಕಾಶ

ಬೆಂಗಳೂರು: ರಾಜ್ಯ ಸರ್ಕಾರವು ಏ. 2ರಂದು ಹೊರಡಿಸಿದ ಮಾರ್ಗಸೂಚಿಯಲ್ಲಿ ಕೆಲ ಸಡಿಲಿಕೆ ಮಾಡಿದ್ದು, ಅದರಂತೆ ಜಿಮ್‌ಗಳಲ್ಲಿ ಶೇ. 50ರಷ್ಟು ಜನರಿಗೆ ಅವಕಾಶ ಕಲ್ಪಿಸಲು ಅನುಮತಿ ನೀಡಿ ಭಾನುವಾರ ಆದೇಶ ಹೊರಡಿಸಿದೆ. ‌ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಏ. 2ರಂದು ಪ್ರಕಟಿಸಲಾಗಿದ್ದ ಮಾರ್ಗಸೂಚಿಯಲ್ಲಿ ಜಿಮ್‌ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿತ್ತು. ಇದೀಗ ಜಿಮ್‌ಗಳಿಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಹಲವು ಮನವಿಗಳು ಬಂದಿರುವ ಬೆನ್ನಲ್ಲೇ ಈ ಆದೇಶ ಪ್ರಕಟಿಸಲಾಗಿದೆ.

ನಿವೇಶನ ಸಂತ್ರಸ್ತರಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಮನವಿ

ಉಡುಪಿ: ಉಡುಪಿ ನಗರ ವ್ಯಾಪ್ತಿಯ ನಿವೇಶನ ಸಂತ್ರಸ್ತರು ಇಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಭೇಟಿಯಾಗಿ ನಿವೇಶನ ಖರೀದಿಯಲ್ಲಿ ಆಗಿರುವ ಕಾನೂನು ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು. ಎರಡು ದಶಕಗಳ ಹಿಂದೆ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದೆ ಪರಿವರ್ತಿತ ಜಮೀನಿನಲ್ಲಿ ನಿವೇಶನಗಳನ್ನು ಸರ್ಕಾರದ ನೋಂದಣಿ ಪ್ರಕ್ರಿಯೆಯ ಪ್ರಕಾರ ಖರೀದಿಸಿದ್ದು, ಇಂದು ಆ ನಿವೇಶನಗಳಲ್ಲಿ ಮನೆಕಟ್ಟಲಾಗದೆ ಜನರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇವರ ನಿವೇಶನಗಳನ್ನು 2010-13ರಲ್ಲಿ ಅಕ್ರಮವೆಂದು ಘೋಷಿಸಿ ಸಕ್ರಮಗೊಳಿಸಲು ಸರ್ಕಾರ […]

ಎಕ್ಸ್ಪ್ರೆಸ್ ಮೋಡ ಕಂಬಳ ಕೋಣಕ್ಕೆ ಹುಟ್ಟೂರ ಸನ್ಮಾನ

ಅಜೆಕಾರು: ಹೆರ್ಮುಂಡೆ ಶ್ರೀ ವಿಷ್ಣು ಕ್ರಿಕೆಟರ್ಸ್ ವತಿಯಿಂದ ಹೆರ್ಮುಂಡೆ ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟವು ಇಂದು ನಡೆಯಿತು. ವಿಷ್ಣು ಮೂರ್ತಿ ದೇವಸ್ಥಾನದ ಅರ್ಚಕ ರಾಘವೇಂದ್ರ ಭಟ್ ಪಂದ್ಯಾಟವನ್ನು ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಆನಂದ ಹೆಗ್ಡೆ, ಅಜೆಕಾರು ವ್ಯವಸಾಯ ಸಹಕಾರಿ ಸಂಘಸೊಸೈಟಿಯ ಅಧ್ಯಕ್ಷ ಭವಾನಿಶಂಕರ್, ಮಂಜುನಾಥ್ ಹೆಗ್ಡೆ, ಉದಯ ನಾಯಕ್ , ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧ್ಯಕ್ಷ ಮಹೇಶ್ ನಾಯಕ್, ಸುಧಾಕರ ಶೆಟ್ಟಿ ಕಲ್ಲಬೆಟ್ಟು, ಶ್ಯಾಮ್ ನಾಯಕ್, ಅನೀಸ್ , ಅನೂಪ್, ಮೋಡ ಅಭಿಮಾನಿ ಬಳಗದ ಅಧ್ಯಕ್ಷ ಅನಿಲ್ […]

ಶಿವಾಜಿ ಮಹಾರಾಜ್ ಯುವಜನಾಂಗಕ್ಕೆ ಆದರ್ಶ ಪ್ರಾಯರಾಗಿದ್ದಾರೆ: ದಿನೇಶ್ ಸಿ ನಾಯ್ಕ್

ಉಡುಪಿ: ಸನಾತನ ಹಿಂದೂ ಧರ್ಮದ ಬಗ್ಗೆ ಎಲ್ಲೂ ರಾಜಿ ಮಾಡಿಕೊಳ್ಳದೆ ಹಿಂದೂ ಧರ್ಮದ ಉಳಿವಿಗಾಗಿ ಅವಿರತ ಹೋರಾಟ ನಡೆಸಿದ ಶಿವಾಜಿ ಮಹಾರಾಜ್ ಇಂದಿನ ಯುವ ಜನಾಂಗಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಉಡುಪಿ ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ವಕೀಲ ದಿನೇಶ್ ಸಿ. ನಾಯ್ಕ್ ಹೇಳಿದ್ದಾರೆ. ಉಡುಪಿ ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘ ಪ್ರಧಾನ ಕಚೇರಿಯಲ್ಲಿ ತಿಥಿಯನುಸಾರ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿವಾಜಿ ಜಯಂತಿಯನ್ನು ಸರಕಾರ ಹಾಗೂ […]