ಇಂದಿನಿಂದ ದ.ಕ. ಜಿಲ್ಲೆಯಾದ್ಯಂತ ಸಾರ್ವಜನಿಕ ಜಾತ್ರೆ, ಉತ್ಸವ, ಸಭೆ, ಸಮಾರಂಭ ನಿಷೇಧ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಜಾತ್ರೆ, ಉತ್ಸವ, ಸಭೆ, ಸಮಾರಂಭ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಕಳೆದ 15 ದಿನಗಳಿಂದ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮುಂಬರುವ ಹಬ್ಬಗಳಾದ ಯುಗಾದಿ, ಹೋಳಿ ಹಬ್ಬ, ಷಬ್-ಎ-ಬರಾತ್, ಗುಡ್‌ಫ್ರೈಡೆ ಇತ್ಯಾದಿ ಸಂದರ್ಭಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸದಂತೆ ಮತ್ತು ಧಾರ್ಮಿಕ ಉತ್ಸವಗಳೊಂದಿಗೆ ಜಾತ್ರೆ/ಮೇಳಗಳನ್ನು ನಡೆಸದಂತೆ ಆದೇಶಿಸಲಾಗಿದೆ […]

ಬಿಸಿಲಿನ ಬೇಗೆಯಿಂದ ಧಣಿವರಿಸಿಕೊಳ್ಳಲು ಮನೆಯಲ್ಲೇ ತಯಾರಿಸಿ ರುಚಿಕರವಾದ ಬಾದಾಮಿ ಮಿಲ್ಕ್ ಶೇಕ್!

ಬೇಸಿಗೆ ಬಂದರೆ ಸಾಕು ಬಿಸಿಲಿನ ತಾಪದಿಂದ ಧಣಿವರಿಸಿಕೊಳ್ಳಲು ಹೆಚ್ಚಿನವರು ಕೋಲ್ಡ್ ಜ್ಯೂಸ್, ಕೋಲ್ಡ್ ಡ್ರಿಂಕ್ಸ್ ಮೊರೆಹೋಗುತ್ತಾರೆ. ಆದ್ರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಾದಾಮಿ ಮಿಲ್ಕ್ ಶೇಕ್ ಕುಡಿದ್ರೆ ದಾಹವೂ‌ ನೀಗುತ್ತೆ, ಆರೋಗ್ಯಕ್ಕೂ ಉತ್ತಮ. ಹಾಗಿದ್ರೆ ಇದನ್ನು‌ ತಯಾರಿಸುವ ವಿಧಾನ ತಿಳಿಯೋಣ ಬನ್ನಿ. ಬೇಕಾಗುವ ಪದಾರ್ಥಗಳು. ಬಾದಾಮಿ-  25 (ನೆನೆಸಿ ಸಿಪ್ಪೆ ತೆಗೆದದ್ದು) ಹಾಲು – 1 ಲೀಟರ್ ಕಂಡೆನ್ಸ್ಡ್ ಮಿಲ್ಕ್ – ಅರ್ಧ ಬಟ್ಟಲು ಸಕ್ಕರೆ- ಸ್ವಲ್ಪ ಕೇಸರಿ- ಸ್ವಲ್ಪ ವೆನಿಲಾ ಐಸ್ ಕ್ರೀಮ್ – ಸ್ವಲ್ಪ […]

ಕೊರೊನಾ ಹೆಚ್ಚಳ ಹಿನ್ನಲೆ: ಕಠಿಣ ನಿಯಮ ಜಾರಿಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಯಾವುದೇ ಲಾಕ್ ಡೌನ್, ನೈಟ್ ಕರ್ಫ್ಯೂ ಮೊರೆಹೋಗದೆ, ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಬಗ್ಗೆ ಮಾಹಿತಿ ನೀಡಿ, ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಇಲ್ಲ. ನೈಟ್ ಕರ್ಫ್ಯೂ ಸಹ ಜಾರಿಗೊಳಿಸುವುದಿಲ್ಲ. ಆದರೆ ಇಂದಿನಿಂದ (ಮಾ. 30) 15 ದಿನ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಪ್ರತಿಭಟನೆ, ಸತ್ಯಾಗ್ರಹಗಳಿಗೆ ಅವಕಾಶ ಇಲ್ಲ ಎಂದರು. ಅಪಾರ್ಟ್ ಮೆಂಟ್ ಗಳಲ್ಲಿ […]