ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ಎನ್ಎಬಿಎಚ್ ಮಾನ್ಯತಾ ಪ್ರಮಾಣಪತ್ರ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಕೇಂದ್ರಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಎಚ್) ಮಾನ್ಯತಾ ಪ್ರಮಾಣ ಪತ್ರ ಲಭಿಸಿದೆ. ರಕ್ತದ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಈ ಪ್ರಮಾಣಪತ್ರ ದೊರೆತಿದ್ದು, ಇದರಿಂದ ಆಸ್ಪತ್ರೆಯ ಗುಣಮಟ್ಟ ಮತ್ತು ಮಾನ್ಯತೆಗಳ ಕಿರೀಟಕ್ಕೆ ಇನ್ನೊಂದು ಗರಿ ಸೇರ್ಪಡೆಯಾಗಿದೆ. ಮಾಹೆ (ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ)ಯ ಸಹ ಕುಲಾಧಿಪತಿ ಡಾ.‌ ಎಚ್.ಎಸ್. ಬಲ್ಲಾಳ್ ಅವರು ಎನ್ಎಬಿಎಚ್ ಮಾನ್ಯತೆ ಪ್ರಮಾಣ ಪತ್ರವನ್ನು ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ನಿರ್ದೇಶಕಿ ಡಾ. ಶಮೀ ಶಾಸ್ತ್ರಿ ಅವರಿಗೆ ಹಸ್ತಾಂತರಿಸಿದರು. […]

ದಳಪತಿಗಳಿಗೆ ಬಿಗ್ ಶಾಕ್: ಜೆಡಿಎಸ್ ತೊರೆದು ಕೈ ಸೇರಿದ ಹಿರಿಯ ಮುಖಂಡ

ಬೀದರ್: ಬಸವಕಲ್ಯಾಣ ಉಪಚುನಾವಣೆ ಹೊಸ್ತಿಲಲ್ಲೇ ಜೆಡಿಎಸ್ ಗೆ ಆಘಾತ ಉಂಟಾಗಿದೆ. ಜೆಡಿಎಸ್ ಹಿರಿಯ ಮುಖಂಡ ಪಿಜಿಆರ್ ಸಿಂಧ್ಯಾ ಜೆಡಿಎಸ್ ಗೆ ಗುಡ್ ಬೈ ಹೇಳಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಇಂದು ಬಸವಕಲ್ಯಾಣ ಉಪಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿರೋ ಮಾಲಾ ಅವರು ನಾಮಪತ್ರ ಸಲ್ಲಿಸಿದ್ದು, ಇದಕ್ಕೂ ಮುನ್ನಕಾಂಗ್ರೆಸ್​ ನಾಯಕರಿಂದ ಬೃಹತ್ ಸಮಾವೇಶ ನಡೆಯಿತು. ಈ ವೇಳೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಿಂಧ್ಯಾ […]

ವಿದ್ಯಾರ್ಥಿಗಳ ಪಾರ್ಟಿಯಿಂದ ಮಣಿಪಾಲದಲ್ಲಿ ಕೊರೊನಾ ಹೆಚ್ಚಳ: ಸಚಿವ ಡಾ. ಸುಧಾಕರ್

ಉಡುಪಿ: ಜಿಲ್ಲೆಯಲ್ಲಿ‌ ಕೊರೊನಾ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಮಣಿಪಾಲದ ಎಂಐಟಿ ಕ್ಯಾಂಪಸ್ ಗೆ ಇಂದು ಆರೋಗ್ಯ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೋವಿಡ್ ನಿಯಮವನ್ನು ಸರಿಯಾಗಿ ಪಾಲಿಸದೇ ಇರುವುದು ಹಾಗೂ ಪರೀಕ್ಷೆ ಮುಗಿದ ಬಳಿಕ ಪಾರ್ಟಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರಿಂದ ಕೋವಿಡ್ ಹೆಚ್ಚಾಗಿರುವ ಸಾಧ್ಯತೆಗಳಿವೆ ಎಂದು ಹೇಳಿದರು. ಈ ವಿದ್ಯಾಸಂಸ್ಥೆಯಲ್ಲಿ 8 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮೂರು ಸಾವಿರದಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದರಿಂದ ಕೊರೊನಾ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ […]

ಉಡುಪಿ: ನವವಿವಾಹಿತ ಮಹಿಳೆ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುಂಡಿಬೈಲು ನಿವಾಸಿ ಸುನೀತಾ (21) ಎಂಬುವವರು ಮಾರ್ಚ್ 23 ರಿಂದ ಕಾಣೆಯಾಗಿದ್ದಾರೆ. ಚಹರೆ: 4 ಅಡಿ 6 ಇಂಚು ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ತಿಂಗಳೊಳಗೆ 2 ಸಾವಿರಕ್ಕೂ ಅಧಿಕ ವೈದ್ಯರು, 800 ಮಂದಿ ಪ್ಯಾರಾ ಮೆಡಿಕಲ್, ನರ್ಸಿಂಗ್ ಸ್ಟಾಫ್ ಗಳ ನೇರ ನೇಮಕಾತಿಗೆ ನಿರ್ಧಾರ: ಸಚಿವ ಡಾ. ಸುಧಾಕರ್

ಉಡುಪಿ: ರಾಜ್ಯದಲ್ಲಿ‌ ಆರೋಗ್ಯ ಸೇವೆಯನ್ನು ಬಲಪಡಿಸುವ ಉದ್ದೇಶದಿಂದ ಒಂದು ತಿಂಗಳೊಳಗೆ 2 ಸಾವಿರಕ್ಕೂ ಅಧಿಕ ವೈದ್ಯರನ್ನು ಹಾಗೂ 700ರಿಂದ 800 ಮಂದಿ ಪ್ಯಾರಾ ಮೆಡಿಕಲ್ , ಲ್ಯಾಬ್ ಟೆಕ್ನಿಷನ್ ಹಾಗೂ ನರ್ಸಿಂಗ್ ಸ್ಟಾಫ್ ಗಳನ್ನು ನೇರ ನೇಮಕಾತಿ ಮೂಲಕ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಶೇ. 70ರಷ್ಟು ಮಂದಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುತ್ತಿಲ್ಲ. ಗ್ರಾಮೀಣ […]