ಗಿಳಿಯಾರಿನಲ್ಲಿ ಅಭಿಮತ ಸಂಭ್ರಮ; ಅಪ್ಪಣ್ಣ ಹೆಗ್ಡೆ ಅವರಿಗೆ ಕೀರ್ತಿಕಲಶ ಪ್ರಶಸ್ತಿ ಪ್ರದಾನ

ಕೋಟ: ಕಲಿಯುಗದಲ್ಲಿ ತಂತ್ರಜ್ಞಾನಗಳು ಹೆಚ್ಚು-ಹೆಚ್ಚು ಬೆಳವಣಿಗೆಯಾಗಿದೆ. ಬಡತನ, ಸಾಮಾಜಿಕ ಅಸಮಾನತೆಗಳು ಪರಿಹಾರವಾಗಿದೆ. ಆದ್ದರಿಂದ ಕಲಿಯುಗ ಕೆಟ್ಟದಲ್ಲ, ಇಲ್ಲಿರುವ ಕೆಟ್ಟದನ್ನೇ ಸ್ವೀಕರಿಸುವ ನಮ್ಮ ಮನಃಸ್ಥಿತಿ ಕೆಟ್ಟದ್ದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು. ಅವರು ಮೂಡುಗಿಳಿಯಾರು ಅಲ್ಸಕೆರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜನಸೇವಾ ಟಸ್ಟ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ ಅಭಿಮತ ಸಂಭ್ರಮ ಹಾಗೂ ಮಹಾಮೃತ್ಯಂಜಯ ಯಾಗ ಕಾರ್ಯಕ್ರಮದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಅಪ್ಪಣ್ಣ ಹೆಗ್ಡೆಯವರಿಗೆ ಕೀರ್ತಿ ಕಲಶ ಪ್ರಶಸ್ತಿ ಪ್ರದಾನಮಾಡಿ ಮಾತನಾಡಿದರು. ಸಂಘ-ಸಂಸ್ಥೆಗಳು ಬದುಕಲ್ಲಿ ಭರವಸೆ […]

ಸಿಡಿ ಪ್ರಕರಣದ ಸಂತ್ರಸ್ತ ಯುವತಿ‌ ಭೇಟಿಯಾದರೆ ಸಹಾಯ ಮಾಡಲು ಸಿದ್ಧ: ಡಿಕೆಶಿ

ಬೆಂಗಳೂರು: ಸಿ.ಡಿ ಪ್ರಕರಣದಲ್ಲಿನ ಸಂತ್ರಸ್ತ ಯುವತಿ ಇದುವರೆಗೆ ನನ್ನನ್ನು ಭೇಟಿಯಾಗಿಲ್ಲ. ಆದರೆ ನನ್ನನ್ನು ಭೇಟಿಯಾದರೆ ಆಕೆಗೆ ಸಹಾಯ ಮಾಡಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಶನಿವಾರ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಮನೆ, ಕಚೇರಿಗೆ ಸಾವಿರಾರು ಜನ ನನ್ನನ್ನು ಭೇಟಿಯಾಗಲು ಬರುತ್ತಾರೆ. ಆ ಯುವತಿ ಕೂಡಾ ಭೇಟಿ ಮಾಡಲು ಯತ್ನಿಸಿರಬಹುದು ಎಂದರು. ನರೇಶ್ ನನ್ನ ಆಪ್ತ. ಮಾಧ್ಯಮದಲ್ಲಿ ಇದ್ದವನು. ನನಗೆ ಬಹಳ ಪರಿಚಯ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ನನ್ನನ್ನು ಸಂಪರ್ಕಿಸಿಲ್ಲ. ಸಹಾಯ […]

ಹಿರಿಯಡಕ: ಅವಿವಾಹಿತ ಯುವಕ ನೇಣಿಗೆ ಶರಣು

ಹಿರಿಯಡಕ: ಆರ್ಥಿಕ ಸಂಕಷ್ಟದಿಂದ ಖಿನ್ನತೆಗೆ ಒಳಗಾಗಿದ್ದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡಕ ಕೊಂಡಾಡಿ ಭಜನೆ ಕಟ್ಟೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಕೊಂಡಾಡಿ ಭಜನೆಕಟ್ಟೆ ನಿವಾಸಿ ಶ್ರೀನಿವಾಸ ಆಚಾರ್ಯರ ಮಗ ದೇವೇಂದ್ರ ಆಚಾರ್ಯ( ಮುನ್ನ) ನೇಣಿಗೆ ಶರಣಾದ ವ್ಯಕ್ತಿ. ಇವರು ಮರದ ಕೆಲಸ ಮಾಡಿಕೊಂಡಿದ್ದು, ಕೋವಿಡ್ ಲಾಕ್ ಡೌನ್ ಬಳಿಕ ಸರಿಯಾಗಿ ಕೆಲಸ ಇರಲಿಲ್ಲ. ಈ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಿಯಾಯಿತಿ ಮಾರಾಟ ಮೇಳ: ಗಾರ್ಮೆಂಟ್ಸ್, ಶೂಗಳ ಬೃಹತ್ ಪ್ರದರ್ಶನ, ಮಾರಾಟ

ಉಡುಪಿ: ಉಡುಪಿಯ ಕರಾವಳಿ ವೃತ್ತದ ಬಳಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಪ್ರಥಮ ಬಾರಿಗೆ ನೂರಕ್ಕೂ ಹೆಚ್ಚು ಪ್ರಸಿದ್ಧ ಕಂಪನಿಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಮಾರಾಟ ಮೇಳ ಮಾರ್ಚ್ 26ರಿಂದ 28ರ ವರೆಗೆ ನಡೆಯಲಿದೆ. ಈಗಾಗಲೇ ಮಂಗಳೂರಿನ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಮೂರು ದಿನಗಳ ಮೇಳ ಆಯೋಜಿಸಿ ಯಶಸ್ವಿಯಾದ ಬಳಿಕ ಉಡುಪಿಯ ಕರಾವಳಿ ವೃತ್ತದ ಬಳಿಯ ಮಣಿಪಾಲ್ ಇನ್ ನಲ್ಲಿ ಆಯೋಜಿಸಲಾಗಿದೆ. ಎಲ್ಲ ರೀತಿಯ ಸಾರ್ವಜನಿಕರಿಂದ ಸಹಕಾರವಾಗಬೇಕು, ಶಾಪಿಂಗ್ ಗೆ ಪೂರಕವಾಗಬೇಕು ಎಂಬ ಉದ್ದೇಶದಿಂದ […]

ಕಾರು-ಆಟೊ ರಿಕ್ಷಾ ಮಧ್ಯೆ ಭೀಕರ ಅಪಘಾತ: ಆಟೊ ಚಾಲಕ ಸ್ಥಳದಲ್ಲೇ ಮೃತ್ಯು

ಮಾಣಿ: ಕಾರು ಮತ್ತು ಆಟೊ ರಿಕ್ಷಾ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೊ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ತಿರುವಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ‌. ಕೊಡಾಜೆ ಪಂತ್ತಡ್ಕ ನಿವಾಸಿ ಅಮ್ಮಿ ಮೃತ ದುರ್ದೈವಿ. ಮಾಣಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಕೊಡಾಜೆ ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದ ಆಟೊ ರಿಕ್ಷಾ ನಡುವೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಅಮ್ಮಿ ಅವರ ಪತ್ನಿಯ ಕಾಲಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು […]