ಪೋಷಕರ ಮೇಲೆ ಒತ್ತಡ ಹೇರಿ ಹೇಳಿಕೆ ಪಡೆಯಲಾಗಿದೆ: ಸಿಡಿಲೇಡಿಯ ಸ್ಫೋಟಕ ಹೇಳಿಕೆ
ಬೆಂಗಳೂರು: ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇಂದು (ಶನಿವಾರ) ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಹಾಗೂ ಸಿಡಿಲೇಡಿಯ ಪೋಷಕರು ವಾಗ್ದಾಳಿ ನಡೆಸಿದ ಬೆನ್ನಲ್ಲೆ ಯುವತಿಯಿಂದ ಮತ್ತೊಂದು ವಿಡಿಯೋ (5ನೇ) ರಿಲೀಸ್ ಆಗಿದೆ. ಇಂದಿನ ಬೆಳವಣಿಗೆಯಿಂದ ಭಯ ಆಗ್ತಿದೆ. ನಮ್ಮ ಅಪ್ಪ-ಅಮ್ಮನಿಗೆ ಏನು ಗೊತ್ತಿಲ್ಲ. ಪ್ರಕರಣವನ್ನು ಬೇರೆ ಕಡೆ ತಿರುಗಿಸುತ್ತಿದ್ದಾರೆ. ನಮ್ಮವರನ್ನು ಬ್ಲಾಕ್ಮೇಲ್ ಮಾಡಲಾಗಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಮಗಳನ್ನು ಡಿ.ಕೆ. ಶಿವಕುಮಾರ್ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಪೋಷಕರ ಹೇಳಿಕೆಯ ಬೆನ್ನಲ್ಲೇ ಯುವತಿ ವಿಡಿಯೋ ಹರಿಬಿಟ್ಟಿದ್ದಾಳೆ. […]
ಅಪಪ್ರಚಾರ, ಷಡ್ಯಂತ್ರ ಮಾಡಿದವರಿಗೆ ಸರಿಯಾದ ಶಿಕ್ಷೆ ಕೊಡುತ್ತೇನೆ: ಕಲ್ಕುಡ ದೈವದ ಎಚ್ಚರಿಕೆ
ಕಟಪಾಡಿ: ಕಟಪಾಡಿ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಅವರ ವಿರುದ್ಧ ಆರ್ ಟಿಐ ಕಾರ್ಯಕರ್ತ ಶಂಕರ ಶಾಂತಿ ಮಾಡಿರುವ ಅಪಪ್ರಚಾರ ವಿಚಾರಕ್ಕೆ ಸಂಬಂಧಿಸಿ ಶನಿವಾರ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕಲ್ಕುಡ ದೈವ ನುಡಿಕೊಟ್ಟಿದ್ದು, ಕ್ಷೇತ್ರಾಡಳಿತ ಮಂಡಳಿ ಮತ್ತು ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡುವ ವ್ಯಕ್ತಿಗಳನ್ನು ನಾನು ನೋಡಿಕೊಳ್ಳುತ್ತೇನೆ. ಅಂತಹವರಿಗೆ ಅವರವರ ಯೋಗ್ಯತೆ ಮತ್ತು ಕರ್ಮಕ್ಕೆ ಅನುಗುಣವಾದ ಶಿಕ್ಷೆಯನ್ನು ನಾನು ನೀಡುತ್ತೇನೆ ಎಂದು ದೈವ ಹೇಳಿದೆ. ತನ್ನ ವಿರುದ್ಧ ಅಪಪ್ರಚಾರ, ಷಡ್ಯಂತರ […]
ಕಾರ್ಕಳ: ಖತರ್ನಾಕ್ ಗೋಕಳ್ಳನ ಬಂಧನ
ಕಾರ್ಕಳ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ದನಗಳನ್ನು ಕಳವು ಮಾಡಿ ಕಾಡಿನಲ್ಲಿ ಕಟ್ಟಿ ಹಾಕಿದ ಆರೋಪಕ್ಕೆ ಸಂಬಂಧಿಸಿ ಕಾರ್ಕಳ ಗ್ರಾಮಾಂತರ ಪೊಲೀಸರು ಓರ್ವ ಆರೋಪಿಯನ್ನು ಇಂದು ಬಂಧಿಸಿದ್ದು, ಆತನಿಂದ 15 ಸಾವಿರ ಮೌಲ್ಯದ ಒಂದು ದನ ಹಾಗೂ ಎರಡು ಕರುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ರೆಂಜಾಳ ಗ್ರಾಮದ ಕಾಪು ಹೌಸ್ ಎಂಬಲ್ಲಿ ಇಂದು ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ […]
ಉಡುಪಿ: 156 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಕೇಸ್ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ಶನಿವಾರ ಜಿಲ್ಲೆಯಲ್ಲಿ 156 ಕೊರೊನಾ ಕೇಸ್ ದಾಖಲಾಗಿದ್ದು, ಕಂಟೈನ್ ಮೆಂಟ್ ಝೋನ್ ಆಗಿರುವ ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲಿ 126 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ನನ್ನ ಅಕ್ಕನನ್ನು ಡಿ.ಕೆ. ಶಿವಕುಮಾರ್ ಒತ್ತೆಯಾಳಾಗಿಸಿಕೊಂಡಿದ್ದಾರೆ: ಸಂತ್ರಸ್ತ ಯುವತಿಯ ಸಹೋದರ ಆರೋಪ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನನ್ನ ಅಕ್ಕನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂದು ಸಿಡಿಲೇಡಿಯ ಸಹೋದರ ಆರೋಪಿಸಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ವಿಚಾರವಾಗಿ ಸಿಡಿ ಯುವತಿಯ ಪೋಷಕರು ಇಂದು ಸುದ್ದಿಗೋಷ್ಠಿ ನಡೆಸಿದರು. ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ, ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಒಬ್ಬ ಹೆಣ್ಣುಮಗಳನ್ನ ಇಟ್ಟುಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಸಂತ್ರಸ್ತೆ ಸಹೋದರ ಹೇಳಿದರು. ಮಾರ್ಚ್ 2ರಂದು ಸಿಡಿ ಪ್ರಕರಣದ ಬೆಳಕಿಗೆ ಬಂದಾಗ ನನ್ನ ಅಕ್ಕನ ಜತೆ ಮೊಬೈಲ್ನಲ್ಲಿ ಚರ್ಚಿಸಿದ್ದ ಆಡಿಯೋ ವೈರಲ್ ಆಗಿದೆ. […]