ಕಾಪು ಮಾರಿ ಪೂಜೆ: ಮದ್ಯ ನಿಷೇಧ ಆದೇಶ ಹಿಂಪಡೆದ ಡಿಸಿ

ಉಡುಪಿ: ಕಾಪುವಿನ ಮೂರು ಮಾರಿಗುಡಿಗಳಲ್ಲಿ ಮಾರ್ಚ್ 23 ಮತ್ತು 24ರಂದು ಸುಗ್ಗಿ ಮಾರಿ ಪೂಜೆ ನಡೆಯುವ ಹಿನ್ನೆಲೆಯಲ್ಲಿ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಹಿಂಪಡೆದಿದ್ದಾರೆ. ಈವರೆಗೆ ಸುಗ್ಗಿ ಮಾರಿ ಪೂಜೆ ದಿನದಂದು (ಎರಡು ದಿನ) ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಹಾಗೂ ಸಾರ್ವಜನಿಕರ ಶಾಂತಿ ಭಂಗ […]

ಹೃದಯಾಘಾತದಿಂದ ಪಿಯುಸಿ ವಿದ್ಯಾರ್ಥಿನಿ ಮೃತ್ಯು

ಪುತ್ತೂರು: ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಎಂಬಲ್ಲಿ ಮಂಗಳವಾರ ನಡೆದಿದೆ. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಕುಂಡಾಪು ಪದ್ಮ ಪಕ್ಕಳ ಹಾಗೂ ಉಮಾವತಿ ದಂಪತಿಯ ಎರಡನೇ ಪುತ್ರಿ ಶ್ರೇಯಾ ಪಕ್ಕಳ (16) ಮೃತ ದುರ್ದೈವಿ. ಈಕೆ ವಿವೇಕಾನಂದ ಕಾಲೇಜಿನ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದಳು. ಆರೋಗ್ಯವಾಗಿದ್ದ ಶ್ರೇಯಾಳಿಗೆ ಇಂದು ಬೆಳಿಗ್ಗೆ ದಿಢೀರ್ ಆಗಿ ಅನಾರೋಗ್ಯ ಕಾಣಿಸಿಕೊಂಡಿದ್ದು, ಮನೆಯವರು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ಕರೆತಂದರು. ಆದರೆ ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಶ್ರೇಯಾ ಈಗಾಗಲೇ […]

ಕಾಪು ಮಾರಿ ಪೂಜೆ: ಎರಡು ದಿನ ಮದ್ಯ ಮಾರಾಟ ನಿಷೇಧ

ಉಡುಪಿ: ಕಾಪು ತಾಲೂಕಿನ ಕಾಪು ಮೂರು ಮಾರಿಗುಡಿಗಳಲ್ಲಿ ಮಾರ್ಚ್ 23 ಮತ್ತು 24ರಂದು ಸುಗ್ಗಿ ಮಾರಿ ಪೂಜೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬಾರ್ ಮತ್ತು ವೈನ್ ಶಾಪ್‌ಗಳು ತೆರೆದಿದ್ದಲ್ಲಿ, ಮದ್ಯಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕಾಪು ಠಾಣಾ ವ್ಯಾಪ್ತಿಯ ಕಾಪು ಪಡು, ಮೂಳೂರು, ಮಜೂರು ಗ್ರಾಮಗಳ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಆ್ಯಂಡ್ […]