ಮಣಿಪಾಲ: ಹಂದಿಗೆ ತೋಡಿದ್ದ ಖೆಡ್ಡಾಕ್ಕೆ ಬಿದ್ದು ಚಿರತೆ ಮೃತ್ಯು

ಉಡುಪಿ: ಹಂದಿಗೆ ಇಟ್ಟಿದ್ದ ಉರುಳಿಗೆ ಚಿರತೆಯೊಂದು ಮೃತಪಟ್ಟ ಘಟನೆ ಮಣಿಪಾಲದ ಹಿರೇಬೆಟ್ಟು ಗ್ರಾಮದ ಕಂಚಿನಬೈಲು ಎಂಬಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಭೂಮಿಯಲ್ಲಿ ಹಂದಿಯ ಬೇಟೆಗಾಗಿ ತಂತಿಯ ಉರುಳನ್ನು ಕಟ್ಟಿದ್ದರು. ಆದರೆ ಅದರಲ್ಲಿ ಚಿರತೆ ಸಿಕ್ಕಿಹಾಕಿಕೊಂಡು ಒದ್ದಾಡಿ ಮೃತಪಟ್ಟಿದೆ. ಉರುಳು ಸೊಂಟಕ್ಕೆ ಬಿಗಿದ ಪರಿಣಾಮ ತಗ್ಗಿನಲ್ಲಿ ನೇತಾಡುತ್ತಾ ನೆಲ ಮುಟ್ಟುವುದಕ್ಕೆ ಶತಪ್ರಯತ್ನ ಮಾಡಿ, ಕೊನೆಗೆ ಪ್ರಾಣ ಬಿಟ್ಟಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದು, ಚಿರತೆಯನ್ನು ಸ್ಥಳವನ್ನು ಮಹಜರು ಮಾಡಿದ್ದಾರೆ. ಇಲಾಖೆಯ ನಿಯಮಗಳಂತೆ ಚಿರತೆಯನ್ನು ಬೇರೆಡೆಗೆ ತೆಗೆದುಕೊಂಡು ಧಪನ ಮಾಡಿದ್ದಾರೆ. […]

ಉದುರಿದ್ದು ಎಲೆ, ಕನಸಲ್ಲ: ಜ್ಯೋತ್ಸ್ನಾ ಶೆಣೈ ಕ್ಲಿಕ್ಕಿಸಿದ ಚಿತ್ರ

ಎಲೆಗಳನ್ನು ಉದುರಿಸಿ ನವವಸಂತಕ್ಕಾಗಿ ಕಾಯುತ್ತಿರುವ ಈ ಮರವೊಂದರ ಕಲಾತ್ಮಕ ಚಿತ್ರವನ್ನು ಸೆರೆಹಿಡಿದವರು ಕಾರ್ಕಳದ ವಿದ್ಯಾರ್ಥಿನಿ ಜ್ಯೋತ್ಸ್ನಾ ಶೆಣೈ. ಸೃಜನಶೀಲ ಯುವ ಕಲಾಗಾರ್ತಿಯಾಗಿರುವ ಇವರಿಗೆ ಚಿತ್ರ ಬಿಡಿಸೋದು ನೆಚ್ಚಿನ ಹವ್ಯಾಸವಾಗಿದ್ದರೂ. ಫೋಟೋಗ್ರಫಿಯೂ ಸೃಜನಶೀಲತೆಗೊಂದು ದಾರಿಯಾಗಿದೆ.   (ಉಡುಪಿ xpress.com ZOOM ಇನ್  ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರಕಟಿಸುತ್ತೇವೆ. ಇಲ್ಲಿಗೆ ಕಳಿಸಿ-ಇ ಮೇಲ್: newsudupixpress@gmail.com, ನಮ್ಮ ವಾಟ್ಸಾಪ್: 7483419099)  

ಶೀಘ್ರದಲ್ಲೇ ಸಿದ್ದರಾಮಯ್ಯ ರಾಜೀನಾಮೆ: ನಳಿನ್

ಮಸ್ಕಿ: ಬಿಜೆಪಿ ಗೆಲ್ಲುವ ಪಕ್ಷವಾಗಿದೆ. ಕಾಂಗ್ರೆಸ್ ಸೋಲಿನ ಪಕ್ಷವಾಗಿದೆ. ಸಿದ್ದರಾಮಯ್ಯ ಈ ಹಿಂದೆ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಇದೀಗ ಕಾಂಗ್ರೆಸ್ ನಲ್ಲಿ ತನ್ನ ಅಸ್ವಿತ್ವ ಕಳೆದುಕೊಳ್ಳುತ್ತಿದ್ದು, ತಿಂಗಳೊಳಗೆ ಪಕ್ಷ ಬಿಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. ಮಸ್ಕಿಯಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಕಾಂಗ್ರೆಸ್ ನಲ್ಲಿ ಒಳಜಗಲ ಭುಗಿಲೆದಿದ್ದು, ಎಲ್ಲಿಯೂ ಸಲ್ಲದ ಸಿದ್ದರಾಮಯ್ಯ ಶೀಘ್ರದಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆಂದು ಭವಿಷ್ಯ ನುಡಿದರು.

ಬ್ರಹ್ಮಾವರ: ಆಹಾರ ಹುಡುಕಿಕೊಂಡು ಬಂದ ಚಿರತೆ ಮನೆಯ ಕೋಣೆಯಲ್ಲಿ ಬಂಧಿ

ಉಡುಪಿ: ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾದ ಘಟನೆ ಬ್ರಹ್ಮಾವರ ತಾಲೂಕಿನ ನೈಲಾಡಿ ಸಮೀಪ ಇಂದು ನಸುಕಿನಲ್ಲಿ ನಡೆದಿದೆ. ಆಹಾರ ಹುಡುಕತ್ತಾ ಬಂದಿದ್ದ ಚಿರತೆ ಸಾಕು ನಾಯಿಯ ಭೇಟಿಗೆ ಮುಂದಾಗಿದೆ. ಈ ವೇಳೆ ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿದೆ‌. ನಾಯಿಯನ್ನೇ ಬೆನ್ನಟ್ಟಿ ಚಿರತೆ ಕೊಠಡಿಗೆ ಹೋಗಿ ಬಂಧಿಯಾಗಿದೆ ಎನ್ನಲಾಗಿದೆ. ಈ ವೇಳೆ ಸದ್ದು ಕೇಳಿ ಎಚ್ಚರಗೊಂಡ ಮನೆಯವರು ಕೂಡಲೇ ಕೋಣೆ ಬಾಗಿಲು ಹಾಕಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ‌ ನೀಡಿದ್ದು, ಸ್ಥಳಕ್ಕೆ ಬಂದ […]

ಶಿಕ್ಷಣದಿಂದ ಹೆಣ್ಣು ಮಕ್ಕಳು ಸಾಧನೆ ಮಾಡಲು ಸಾಧ್ಯ: ಮಮ್ತಾಜ್‌

ಕೋಟ: ಇಂದು ಬ್ಯಾರಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಬ್ಯಾರಿ ಹೆಣ್ಣು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇದೆ. ಅದನ್ನು ಪೋಷಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ನಮ್ಮಾಂದಿಗೆ ಇತರರನ್ನು ಕರೆದುಕೊಂಡು ಹೋಗುವುದೇ ನಿಜವಾದ ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲೆಯ ಸಹಾಯಕ ಅಭಿಯೋಗ ನಿರ್ದೇಶಕ ಮಮ್ತಾಜ್ ಹೇಳಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೋಟ ಡಾ.ಕಾರಂತ ಪ್ರತಿಷ್ಠಾನದ ಸಹಕಾರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ಶನಿವಾರ ಆಯೋಜಿಸಲಾದ ಅಕಾಡೆಮಿಯ […]