ಕೋವಿಡ್ ನಿಯಮ ಉಲ್ಲಂಘಿಸುವ ಬಸ್ ಗಳ ವಿರುದ್ಧ ಕ್ರಮ: ಡಿಸಿ
ಉಡುಪಿ: ಮಾಸ್ಕ್ ಧರಿಸದ ನಿಯಮ ಉಲ್ಲಂಘಿಸುವ ಬಸ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಬಸ್ಸುಗಳಲ್ಲಿ ಚಾಲಕರು, ನಿರ್ವಾಹಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೆ ಇರುವ ಪ್ರಯಾಣಿಕರಿಗೆ ಬಸ್ ಗಳಲ್ಲಿ ಪ್ರವೇಶ ನೀಡಬಾರದು. ಒಂದು ವೇಳೆ ಬಸ್‌ಗಳಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸದಿರುವುದು ಕಂಡು ಬಂದಲ್ಲಿ ಬಸ್ಸುಗಳ ಪರವಾನಿಗೆಯನ್ನು ರದ್ದು ಮಾಡಲಾಗುವುದು ಹಾಗೂ ಸಂಬಂಧಪಟ್ಟ ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕುರ್ಕಾಲು: ಇಸ್ಪೀಟು ಜುಗಾರಿಯಲ್ಲಿ ತೊಡಗಿದ್ದ 9 ಮಂದಿಯ ಬಂಧನ
ಶಿರ್ವಾ: ಕುರ್ಕಾಲು ಗ್ರಾಮದ ಗಿರಿನಗರ ಎಂಬಲ್ಲಿರುವ ಸ್ವಂದನ ಬಿಲ್ಡಿಂಗ್ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟದಲ್ಲಿ ತೊಡಗಿದ್ದ 9 ಮಂದಿಯನ್ನು ಶಿರ್ವಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹7250 ನಗದು ವಶಪಡಿಸಿಕೊಂಡಿದ್ದಾರೆ. ಬೆಳ್ಳೆ ಗ್ರಾಮದ ಮುಖೇಶ (33), ಕುರ್ಕಾಲು ತೋಟದ ಮನೆಯ ವಿತೇಶ್(33), ಮೂಡುಬೆಟ್ಟು ಗ್ರಾಮದ ಕಿಶೋರ್(28), ಕುರ್ಕಾಲು ಗ್ರಾಮದ ಪವನ್ (28), ಪ್ರದೀಪ (22), ವಿಶಾಲ್(30), ಮ್ಯಾಕ್ಸನ್ (27), ಎಲ್ಲೂರು ಗ್ರಾಮದ ರೋಶನ್(29), ಕುರ್ಕುಲು ಗ್ರಾಮದ ಪ್ರಶಾಂತ್(35) ಬಂಧಿತ ಆರೋಪಿಗಳು. ಈ ಬಗ್ಗೆ […]