ಕುಂದಾಪುರ: ನಾಳೆ ‘ಕೇಕ್ ವಾಲ, ಈಶಾನ್ಯ’ ಸ್ಟ್ರೀಟ್ ಫುಡ್ ಕೆಫೆಯ ಉದ್ಘಾಟನೆ

ಕುಂದಾಪುರ: ಕುಂದಾಪುರ ಪುರಸಭೆ ರಸ್ತೆಯ ಎರಡನೇ ಬ್ಲಾಕ್ ನಲ್ಲಿ ನೂತನ ‘ಕೇಕ್ ವಾಲ, ಈಶಾನ್ಯ’ ಸ್ಟ್ರೀಟ್ ಫುಡ್ ಕೆಫೆಯ ಉದ್ಘಾಟನಾ ಸಮಾರಂಭವು ನಾಳೆ (ಮಾ.19) ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ, ಕುಂದಾಪುರ ವಿನಯ ಆಸ್ಪತ್ರೆಯ ಡಾ. ಎಸ್. ವಿಶ್ವನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಯೂರ […]

ಕಂಬಳ ಪ್ರಿಯರಿಗೆ ಗುಡ್ ನ್ಯೂಸ್: ಸರ್ಕಾರದಿಂದ ₹1 ಕೋಟಿ ಸಹಾಯಧನ ಬಿಡುಗಡೆ

ಬೆಂಗಳೂರು: ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ಇನ್ನಷ್ಟು ಉತ್ತೇಜನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ನಡೆಸಲು ಒಂದು ಕೋಟಿ ರೂ. ಸಹಾಯಧನ ನೀಡಲು ಆದೇಶ ಹೊರಡಿಸಿದೆ. ಪ್ರತಿ ಕಂಬಳಕ್ಕೆ 5 ಲಕ್ಷ ರೂ.ಗಳನ್ನು ಸಹಾಯಧನ ನೀಡಲು ಸರ್ಕಾರ ತೀರ್ಮಾನಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು 5 ಲಕ್ಷ ರೂ. ಗಳಂತೆ 50 ಲಕ್ಷ ರೂ. ಮತ್ತು ಉಡುಪಿ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು 5 […]

ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ: ಅವಧಿ ಮೀರಿ ತೆರೆಯುವ ಪಬ್, ಬಾರ್ ಗಳ ವಿರುದ್ಧ ಕ್ರಮಕೈಗೊಳ್ಳಿ- ಡಿಸಿ

ಉಡುಪಿ: ಮಣಿಪಾಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಅವಧಿ ಮೀರಿ ಪಬ್ ಮತ್ತು ಬಾರ್ ಗಳು ತೆರೆದಿದ್ದು, ಇದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಇಂತಹ ಪಬ್ ಬಾರ್ ಗಳ ವಿರುದ್ಧ ಅಬಕಾರಿ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳುವಂತೆ ಜಿ. ಜಗದೀಶ್ ಸೂಚನೆ ನೀಡಿದರು. ಬುಧವಾರ ನಡೆದ ಕೋವಿಡ್ 2ನೇ ಅಲೆ ಹರಡುವಿಕೆಯನ್ನು ನಿಯಂತ್ರಿಸುವ ಕುರಿತ ಸಭೆಯಲ್ಲಿ ಮಾತನಾಡಿದರು. ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಣಿಪಾಲ: ಮಾ.20-21ಕ್ಕೆ ಕೊಂಕಣಿ ಸಾಹಿತ್ಯ ಸಮ್ಮೇಳನ

ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಮಾರ್ಚ್ 20 ಮತ್ತು 21ರಂದು ಎರಡು ದಿನಗಳ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮಾ. 20 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಕೊಂಕಣಿ ಶೋಭಾಯಾತ್ರೆಗೆ ಮಣಿಪಾಲದ ಟಿ. ಅಶೋಕ್ ಪೈ ಚಾಲನೆ ನೀಡುವರು. ಬಳಿಕ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೊಂಕಣಿ ಭಾಷೆ ಮಾತನಾಡುವಂತಹ ಸುಮಾರು 42 ಪಂಗಡಗಳ ಪ್ರತಿನಿಧಿಗಳಾಗಿ, ದೇಶ ವಿದೇಶಗಳಲ್ಲಿ ಹಲವಾರು ಸಾಧನೆ ಮಾಡಿದಂತಹ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಟ […]

ಮಾ.20, 21: ಎಂಜಿಎಂ ಕೃಷಿ ಸಮ್ಮಿಲನ ಸ್ಥಳೀಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನ ಕಾರ್ಯಕ್ರಮ

ಉಡುಪಿ: ಇಲ್ಲಿನ ಎಂ.ಜಿ.ಎಂ ಕಾಲೇಜಿನ ಮಾನವಿಕ ಹಾಗೂ ಭಾಷಾ ವಿಭಾಗಗಳು, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಮತ್ತು ಐ.ಕ್ಯು.ಎ.ಸಿ ಮಾರ್ಚ್ 20 ಮತ್ತು 21ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಎರಡು ದಿನಗಳ ಎಂ.ಜಿ.ಎಂ ಕೃಷಿ ಸಮ್ಮಿಲನ, ಸ್ಥಳೀಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನ ಎಂಬ ವಿಶೇಷ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಕೃಷಿ ಆಸಕ್ತಿ ಹೆಚ್ಚಿಸುವ ಸಲುವಾಗಿ ಏರ್ಪಡಿಸುವ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕೃಷಿಕರಿಂದ ಕೃಷಿ […]