ಕಾರ್ಕಳ: ಗುಂಡಿಕ್ಕಿಕೊಂಡು ಯುವಕ ಆತ್ಮಹತ್ಯೆ

ಕಾರ್ಕಳ: ನಾಡಕೋವಿಯಿಂದ ಗುಂಡಿಕ್ಕಿಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ಇಂದು ನಡೆದಿದೆ. ಕುಂಟಾಡಿಯ ಅಡ್ಕುಂಜ ವಿಶಾಕ್‌ ಪೂಜಾರಿ (30) ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ತೋಟಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಣಿಪಾಲದಲ್ಲಿ ಹೆಚ್ಚಿದ ಕೊರೊನಾ ಭೀತಿ: 106 ಎಂಐಟಿ ವಿದ್ಯಾರ್ಥಿಗಳಿಗೆ ಪಾಸಿಟಿವ್

ಮಣಿಪಾಲ: ಕಳೆದ ಒಂದು ವಾರದಿಂದ ಮಣಿಪಾಲದ ಎಂಐಟಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಕೊರೊನಾ ಪಾಸಿಟಿವ್ ಕೇಸ್ ಅಧಿಕ ಸಂಖ್ಯೆಯಲ್ಲಿ ಕಂಡುಬಂದಿದ್ದು, ಇದು ವಿದ್ಯಾರ್ಥಿಗಳ ಆತಂಕ‌ ಹೆಚ್ಚಿಸಿದೆ. ಮಣಿಪಾಲ ಹಾಗೂ ಎಂಐಟಿ ಕ್ಯಾಂಪಸ್‌ನಲ್ಲಿ ಇಂದು ಸಂಜೆಯವರೆಗೆ ಒಟ್ಟು 106 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಯಲ್ಲಿ 5000 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಡಿಸಿ ಜಗದೀಶ್ ತಿಳಿಸಿದ್ದಾರೆ. ಎಂಐಟಿಯಲ್ಲಿ ಇನ್ನು ಆಫ್‌ಲೈನ್ ಕ್ಲಾಸ್‌ಗಳು ನಡೆಯುವುದಿಲ್ಲ. ಕೇವಲ ಆನ್‌ಲೈನ್ ಕ್ಲಾಸ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳಲ್ಲಿ ರೋಗದ ಲಕ್ಷಣಗಳಿಲ್ಲದ […]

ಉಡುಪಿ: ಅವಿವಾಹಿತ ವ್ಯಕ್ತಿ ನೇಣಿಗೆ ಶರಣು

ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವಿವಾಹಿತ ವ್ಯಕ್ತಿಯೊಬ್ಬರು‌ ಹಾಡಿಯಲ್ಲಿ ನೇಣುಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಕುತ್ಪಾಡಿ ಗ್ರಾಮದ ನಿತ್ಯಾನಂದ ಐಸ್‌  ಪ್ಲಾಂಟ್‌ ಸಮೀಪ ಇಂದು ನಡೆದಿದೆ. ಕುತ್ಪಾಡಿ ಗ್ರಾಮದ ಬೋಳ ಪೂಜಾರಿ ಅವರ ಮಗ ವಿಠ್ಠಲ್‌ ಪೂಜಾರಿ (36) ನೇಣುಬಿಗಿದುಕೊಂಡ ವ್ಯಕ್ತಿ. ಇವರು ಕಳೆದ 10 ವರ್ಷಗಳಿಂದ ಮಾನಸಿಕ  ಖಾಯಿಲೆಯಿಂದ ಬಳಲುತ್ತಿದ್ದು, ಇದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮಾ.18ರಂದು ಬೆಳಿಗ್ಗೆ  9ರಿಂದ 10.15ರ ಅವಧಿಯಲ್ಲಿ‌ ಮನೆಯ  ಬಳಿಯ ಮನೋಹರ ಶೆಟ್ಟಿ ಅವರಿಗೆ ಸೇರಿದ ಹಾಡಿಯಲ್ಲಿ ನೇಣು […]

ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬದಿಂದ ತುಲಾಭಾರ ಸೇವೆ

ಉಡುಪಿ: ಮುಸ್ಲಿಂ ಕುಟುಂಬವೊಂದು ದೇವಸ್ಥಾನದಲ್ಲಿ ತುಲಾಭಾರ ಸೇವೆ ನೀಡುವ ಮೂಲಕ ಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಕೋಟದ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬವೊಂದು ಹರಕೆ ಸಲುವಾಗಿ ಇಂದು ತುಲಾಭಾರ ಸೇವೆ ಸಲ್ಲಿಸಿದೆ. ಈ ಭಾಗದ ಶಕ್ತಿ ಕ್ಷೇತ್ರವಾಗಿರುವ ಅಮೃತೇಶ್ವರಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅದರಂತೆ ಈ ಕುಟುಂಬವು ತುಲಾಭಾರ ಹರಕೆ ಸೇವೆ ಸಲ್ಲಿಸಿದೆ.

ಕಾರ್ಕಳದಲ್ಲಿ ಮಾ.21 ರಂದು “ಬೇಕ್ ಲೈನ್” ಕೇಕ್ ಶಾಪ್ ಶುಭಾರಂಭ: ಜನತೆಗೆ ಸಿಗಲಿದೆ ರುಚಿ ರುಚಿ ಕೇಕ್ ನ ಸಿಹಿ

ಕಾರ್ಕಳ: ತಾಜಾ ರುಚಿ ರುಚಿ ಕೇಕ್ ಗಳನ್ನು ಗ್ರಾಹಕರಿಗೆ ನೀಡಿ ಜಿಲ್ಲೆಯಾದ್ಯಂತ  ಮುಂಚೂಣಿಯಲ್ಲಿರುವ ಕೇಕ್ ಶಾಪ್,ಬೇಕರಿ ಬೇಕ್ ಲೈನ್  ಮಾ.21 ರಂದು ಬೆಳಗ್ಗೆ 10 ಗಂಟೆಗೆ  ಕಾರ್ಕಳದ ಬಂಡೀಮಠ ಬಸ್ ಸ್ಸ್ಟ್ಯಾಂಡ್ ನಲ್ಲಿ ಶುಭಾರಂಭಗೊಳ್ಳಲಿದೆ. ಈಗಾಗಲೇ ಉಡುಪಿ, ಕಟಪಾಡಿ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆಯಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬೇಕ್ ಲೈನ್, ರುಚಿಕರ ವೆರೈಟಿ ಕೇಕ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ನಿಮ್ಮ ಮನೆ ಬಾಗಿಲಿಗೆ ರುಚಿಕರ ಕೇಕ್: ಕರೆ ಮಾಡಿದರೆ ಕ್ಲಪ್ತ ಸಮಯದಲ್ಲಿ ಮನೆಬಾಗಿಲಿಗೆ ರುಚಿಕರ ಕೇಕ್ ಗಳನ್ನು […]