ಪೌರಕಾರ್ಮಿಕರ ಮೇಲೆ ಹಲ್ಲೆ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷರಿಂದ ಕ್ಷಮೆಯಾಚನೆ

ಉಡುಪಿ: ನನ್ನ ಅಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯ ಉದ್ಯೋಗಿಯೊಬ್ಬರು ಶುಕ್ರವಾರ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಡುಪಿ ಜಿಲ್ಲಾಧ್ಯಕ್ಷರು ಆಗಿರುವ ಅಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲೀಕ ದಾವೂದ್ ಅಬೂಬಕರ್ ಹೇಳಿದ್ದಾರೆ. ನಾನು ದೇಶದ ಕಾನೂನನ್ನು ಗೌರವಿಸುವವನಾಗಿದ್ದು, ಯಾವುದೇ ವ್ಯಕ್ತಿಯು ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಹಾಗಾಗಿ […]

ಜಮೀನು ವಿವಾದ: ನಟ ಯಶ್ ವಿರುದ್ಧ ದೂರ ದಾಖಲಿಸಿದ ರೈತ ಸಂಘ

ಬೆಂಗಳೂರು: ಚಿತ್ರನಟ ಯಶ್ ಹಾಸನ ಜಿಲ್ಲೆಯ ದುದ್ದ ಹೋಬಳಿಗೆ ಸೇರಿದ ತಿಮ್ಮಲಾಪುರ ಗ್ರಾಮದಲ್ಲಿ ಖರೀದಿಸಿರುವ ಜಮೀನಿನ ವಿವಾದ ತಾರಕಕ್ಕೇರಿದ್ದು, ಯಶ್ ವಿರುದ್ಧ ಸಿಡಿದೆದ್ದಿರುವ ರೈತರ ಸಂಘವು ಶನಿವಾರ ಹಾಸನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ. ಜಮೀನಿಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಪೋಷಕರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ನಡೆದಿತ್ತು. ಗಲಾಟೆಗೆ ಸಂಬಂಧಿಸಿದಂತೆ ನಟ ಯಶ್ ಕುಟುಂಬ ದುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಇದರ ಬೆನ್ನಲ್ಲೇ ಯಶ್ ವಿರುದ್ಧ ರೈತ ಸಂಘ ಕೂಡ ದೂರು ದಾಖಲಿಸಿದೆ. ರೈತರಿಗಾಗಿ […]

28ನೇ ವರ್ಷದ ಪುತ್ತೂರು “ಕೋಟಿ-ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಪುತ್ತೂರು: 28ನೇ ವರ್ಷದ ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾoಶ ಹೀಗಿದೆ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 7 ಜೊತೆ ಅಡ್ಡಹಲಗೆ: 6 ಜೊತೆ ಹಗ್ಗ ಹಿರಿಯ: 12 ಜೊತೆ ನೇಗಿಲು ಹಿರಿಯ: 26 ಜೊತೆ ಹಗ್ಗ ಕಿರಿಯ: 17 ಜೊತೆ ನೇಗಿಲು ಕಿರಿಯ: 86 ಜೊತೆ ಒಟ್ಟು ಕೋಣಗಳ ಸಂಖ್ಯೆ : 155 ಜೊತೆ —————- ಕನೆಹಲಗೆ:  ಬಾರ್ಕೂರು ಶಾಂತಾರಾಮ ಶೆಟ್ಟಿ “ಬಿ” ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು […]

ಪಂಚಾಯತ್‌ ರಾಜ್, ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ‘ಹೊಳಪು ಕ್ರೀಡಾಕೂಟ’ಕ್ಕೆ ಚಾಲನೆ

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಜಂಟಿ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಅಂಗವಾಗಿ ಕೋಟ ವಿವೇಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಉಡುಪಿ ಮತ್ತು ದ. ಕನ್ನಡ ಜಿಲ್ಲೆಗಳ ಪಂಚಾಯತ್‌ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ‘ಹೊಳಪು 2021- ಕ್ರೀಡೋತ್ಸವ -ಸಾಂಸ್ಕೃತಿಕ ಸ್ಪರ್ಧೆಗಳಿಗೆ ಶನಿವಾರ ಚಾಲನೆ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲು ಅವರು ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ […]

ಕಾರ್ಕಳ: ನದಿ ತೀರದಲ್ಲಿ ಬಿಸಾಕಿದ್ದ ಹಿಟ್ಟು ತಿಂದು ನಾಲ್ಕು ದನ ಸಾವು; 30ಕ್ಕೂ ಹೆಚ್ಚು ಅಸ್ವಸ್ಥ

ಕಾರ್ಕಳ: ನದಿ ತೀರದಲ್ಲಿ ಎಸೆಯಲ್ಪಟ್ಟಿದ್ದ ಹಿಟ್ಟು ತಿಂದು ನಾಲ್ಕು ಹಸುಗಳು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ದನಗಳು ಅಸ್ವಸ್ಥಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಜೋಗಲ್‌ಬೆಟ್ಟು ನದಿ ತೀರದಲ್ಲಿ ನಡೆದಿದೆ. ಅವಧಿ ಮೀರಿದ ಹಾಳಾಗಿರುವ ಸುಮಾರು 25 ಗೋಣಿ ಚೀಲ ಹಿಟ್ಟನ್ನು ನದಿ ತೀರದಲ್ಲಿ ಬಿಸಾಡಿದ್ದರು. ಇಲ್ಲಿಯೇ ಮೇಯುತ್ತಿದ್ದ ನಾಲ್ಕು ದನಗಳು ಈ ಹಿಟ್ಟನ್ನು ತಿಂದು ಸಾವನ್ನಪ್ಪಿವೆ. ಮಾ. 9ರಂದು ಒಂದು ದನ ಸ್ಥಳದಲ್ಲೇ ಮೃತಪಟ್ಟರೆ, ಮರುದಿನ ಉಳಿದ ಮೂರು ದನಗಳು ಅಸುನೀಗಿವೆ. ಅಲ್ಲದೆ, ಮೂವತ್ತಕ್ಕೂ ಹೆಚ್ಚು ದನಗಳು ಅಸ್ವಸ್ಥಗೊಂಡಿವೆ […]