ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿ 8 ವರ್ಷದ ಬಾಲಕ ಮೃತ್ಯು
ಬೆಳ್ತಂಗಡಿ: ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿಗೆ 8 ವರ್ಷದ ಪುತ್ರ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಮೂಡುಬಿದಿರೆಯಲ್ಲಿ ಸಂಭವಿಸಿದೆ. ಉಜಿರೆ ಅತ್ತಾಜೆ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ, ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ (8) ಮೃತ ಬಾಲಕ. ತಂದೆ ಮೂಡುಬಿದಿರೆಯ ಕಲ್ಲಿನಕೋರೆಗೆ ಹೋಗುವಾಗ ಬಾಲಕನೂ ಜತೆಗೆ ತೆರಳಿದ್ದನೆಂದು ಎನ್ನಲಾಗಿದೆ. ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ನಡೆದ ತಕ್ಷಣ ಮೂಡುಬಿದಿರೆ ಆಸ್ಪತ್ರೆಗೆ ಬಾಲಕನ್ನು ಸಾಗಿಸಲಾಗಿತ್ತಾದರೂ ಅದಾಗಲೇ ಬಾಲಕ […]