ಉಡುಪಿ: ಮಾ. 20ರಿಂದ ಜಿಲ್ಲಾ ಬಿಜೆಪಿಯಿಂದ ಗ್ರಾಮ ವಾಸ್ತವ್ಯ; ಕುಯಿಲಾಡಿ
ಉಡುಪಿ: ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಮಾ. 20ರಿಂದ ಗ್ರಾಮಾಂತರ ಪ್ರದೇಶದ 32 ಮಹಾಶಕ್ತಿ ಕೇಂದ್ರದಲ್ಲಿ ಗ್ರಾಮ ವಾಸ್ತವ್ಯ ಹೂಡಲು ಜಿಲ್ಲಾ ಬಿಜೆಪಿ ತೀರ್ಮಾನಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿದಿನ 3 ಗಂಟೆಗೆ 5ರಿಂದ 6 ಮಂದಿಯ ತಂಡ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದು, ಸಂಜೆ 5ಗಂಟೆಗೆ ಸಭಾ ಕಾರ್ಯಕ್ರಮ, ನಂತರ ಪೇಜ್ ಪ್ರಮುಖ್, ಸಕ್ರಿಯ ಕಾರ್ಯಕರ್ತರೊಂದಿಗೆ ಸಮಾಲೋಚನೆ, ಬೂತ್ […]
ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಐದು ರಂಗ ಸಾಧಕರು ಆಯ್ಕೆ
ಲಕ್ಷ್ಮಣ್ ಕುಮಾರ್ ಮಲ್ಲೂರು ಮಂಗಳೂರು ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ ಇವರ ಜಂಟಿ ಆಶ್ರಯದಲ್ಲಿ ಕೊಡಮಾಡುವ ‘ಮಲಬಾರ್ ವಿಶ್ವರಂಗ ಪುರಸ್ಕಾರ-2021’ ಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಐದು ಹಿರಿಯ ಕನ್ನಡ ರಂಗಕರ್ಮಿಗಳನ್ನು ಆಯ್ಕೆ ಮಾಡಲಾಗಿದೆ. ಎನ್ . ರಾಜಗೋಪಾಲ್ ಬಲ್ಲಾಳ್ ಉಡುಪಿ ಅಹಲ್ಯಾ ಬಲ್ಲಾಳ್ ಮುಂಬೈ ಉಡುಪಿಯ ಎನ್.ರಾಜಗೋಪಾಲ್ ಬಲ್ಲಾಳ್ (ನಟ, ಸಂಘಟಕ), ಮಂಗಳೂರಿನ ಲಕ್ಷ್ಮಣ್ ಕುಮಾರ್ ಮಲ್ಲೂರು (ನಟ), ಮುಂಬಯಿ ಕನ್ನಡ ರಂಗಭೂಮಿಯ […]
ಶಿವಮೊಗ್ಗದಲ್ಲಿ ದ. ಆಫ್ರಿಕಾ ರೂಪಾಂತರಿ ವೈರಸ್ ಪತ್ತೆ: ಜನತೆಯಲ್ಲಿ ಆತಂಕ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಶುರುವಾಗಿದೆ. ದುಬೈನಿಂದ ಶಿವಮೊಗ್ಗಕ್ಕೆ ಇತ್ತೀಚೆಗೆ ಬಂದಿದ್ದ 53 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಇವರು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ಬಳಿಕ ಅವರಲ್ಲಿ ಆಫ್ರಿಕಾದ ವೈರಸ್ ಕಾಣಿಸಿಕೊಂಡಿದೆ ಎಂದು ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಈ ವ್ಯಕ್ತಿ 18 ದಿನಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದರು. ಆಗ ಇವರ ಸ್ಯಾಂಪಲ್ ಪರೀಕ್ಷೆ ನಡೆಸಿದ್ದು, ಯಾವುದೇ ರೋಗಲಕ್ಷಣ […]
‘ನೀವು ಮಾತನಾಡಿದ್ರೆ ನಮ್ಗೆ ಮಾತಾಡ್ಲಿಕೆ ಆಗುವುದಿಲ್ಲಾ ಪುಟ ಇಲ್ಲಿ’; ರಂಗಸ್ಥಳದಿಂದಲೇ ಕಲಾವಿದನಿಂದ ಮಕ್ಕಳಿಗೆ ತರಾಟೆ
ಉಡುಪಿ: ಬಡಗುತಿಟ್ಟುವಿನ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಹಾಲಾಡಿ ಮೇಳದ ಯಕ್ಷಗಾನ ಪ್ರದರ್ಶನ ಆಗುತ್ತಿರುವ ವೇಳೆ ತಾಳ್ಮೆ ಕಳೆದುಕೊಂಡ ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳಲ್ಲೇ ಎದುರಿನ ಸಾಲಿನಲ್ಲಿ ಕುಳಿತ ಮಕ್ಕಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ತುಣುಕೊಂದು ಭಾರಿ ವೈರಲ್ ಆಗಿದೆ. ಯಕ್ಷಗಾನ ಕಲಾವಿದರು ಸಂಭಾಷಣೆ ನಡೆಸುತ್ತಿರುವ ವೇಳೆ ಎದುರಿನಲ್ಲಿ ಕುಳಿತ್ತಿದ್ದ ಮಕ್ಕಳು ಮೊಬೈಲ್ ನೋಡಿಕೊಂಡು ಜೋರಾಗಿ ಮಾತಾಡುತ್ತಿದ್ದರು. ಇದರಿಂದ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದ ವಿಜಯ ಗಾಣಿಗ ಬೀಜಮಕ್ಕಿ ಅವರಿಗೆ ಸಂಭಾಷಣೆ ನುಡಿಯಲು ಅಡಚಣೆಯಾಗಿದೆ. ಇದರಿಂದ ತಾಳ್ಮೆ […]
ಪವರ್ ಸಂಸ್ಥೆಯ ಪದಗ್ರಹಣ ಸಮಾರಂಭ, ಮಹಿಳಾ ದಿನಾಚರಣೆ
ಉಡುಪಿ: ಫ್ಲಾಟ್‌ಫಾರಂ ಆಫ್ ವುಮೆನ್ ಎಂಟರ್‌ಪ್ರೆನರ್ಸ್ (ಪವರ್) ಸಂಸ್ಥೆ ನೂತನ ಪದಗ್ರಹಣ ಸಮಾರಂಭವು ಮಣಿಪಾಲ ಹೋಟೆಲ್ ಸೆಂಟ್ರಲ್ ಪಾರ್ಕ್ ಸಭಾಂಗಣದಲ್ಲಿ ನಡೆಯಿತು. ಸಿಡಿಪಿಒ ವೀಣಾ ವಿವೇಕಾನಂದ, ಉಬುಂಟು ಸಂಸ್ಥೆ ಜೊತೆ ಕಾರ್ಯದರ್ಶಿ ದೇವಕಿ ಯೋಗಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪವರ್ ಸಂಸ್ಥೆ ಅಧ್ಯಕ್ಷೆ ಪುಷ್ಪಾ ಜಿ. ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕಿಯರಾದ ಕಲ್ಪ ಟ್ರಸ್ಟ್ ಸ್ಥಾಪಕಿ ಪ್ರಮೀಳ ರಾವ್, ಅನಿಮಲ್ ಕ್ಯಾರ್ ಟ್ರಸ್ಟ್ ಗೌರವ ಟ್ರಸ್ಟಿ ಸುಮಾ ನಾಯಕ್ ಅವರನ್ನು […]