ಶಂಕರ ಶಾಂತಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ: ಆಗ್ರಹ
ಉಡುಪಿ: ಆರ್‌ಟಿಐ ಕಾರ್ಯಕರ್ತ ಶಂಕರ ಶಾಂತಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ, ಮಾ.15ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಾನು ಹಾಗೂ ನನ್ನ ಮಕ್ಕಳು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಶಂಕರ ಶಾಂತಿ ಅವರ ಪತ್ನಿ ಪೂರ್ಣಿಮ ಶಂಕರ ಶಾಂತಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಡನನ್ನು ಕಾಳಿಕಾಂಬ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಈಗಾಗಲೇ ಮೂರು ವಾರ ಕಳೆದಿದೆ. ಆದರೂ […]
ಬ್ರಹ್ಮಾಕುಮಾರಿ ಮುಖ್ಯ ಆಡಳಿತಾಧಿಕಾರಿಣಿ ದಾದಿ ಹೃದಯಮೋಹಿನಿ ಇನ್ನಿಲ್ಲ
ಮುಂಬೈ: ಬ್ರಹ್ಮಕುಮಾರಿ ಮುಖ್ಯ ಆಡಳಿತಾಧಿಕಾರಿಣಿಯಾಗಿದ್ದ ದಾದಿ ಹೃದಯಮೋಹಿನಿಯವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಗಾವದೇವಿ ಸೇವಾಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು. ಮಹಾತಪಸ್ವಿನಿ ರಾಜಯೋಗಿನಿ ದಾದಿ ಹೃದಯಮೋಹಿನಿಜಿಯವರು 8 ವರ್ಷದವರಿದ್ದಾಗ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಾಪನೆಯ ಸಮಯದಲ್ಲಿ ಸಂಪರ್ಕಕ್ಕೆ ಬಂದರು. 1928 ರಲ್ಲಿ ಸಿಂಧಪ್ರಾಂತ್ಯದ ಹೈದರಾಬಾದಿನಲ್ಲಿ ಇವರ ಜನ್ಮ ಆಯಿತು. ಇವರ ಲೌಕಿಕ ಹೆಸರು ಶೋಭ. ಓಂ ಮಂಡಳಿಗೆ ಬಂದಾಗ ಪ್ರಜಾಪಿತ ಬ್ರಹ್ಮಾರವರು ‘ಗುಲ್ಜಾರ್’ ಎಂದು ನಾಮಕರಣ ಮಾಡಿದರು. ಶಿವ ಪರಮಾತ್ಮನಿಂದ ಪಡೆದ […]
ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗದ ಉದ್ಘಾಟನೆ
ಮಣಿಪಾಲ: ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗದ ಉದ್ಘಾಟನೆ ಮತ್ತು ಮೂತ್ರಪಿಂಡ ರೋಗಿಗಳಿಗೆ ಮೂತ್ರಪಿಂಡ ಕಾಯಿಲೆ ಬಗ್ಗೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ಇಂದು ನಡೆಯಿತು. ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ. ಪುಷ್ಪಾ ಜಿ. ಕಿಣಿ ಮಕ್ಕಳ ಮೂತ್ರಪಿಂಡ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಮತ್ತು ಘಟಕ ಮುಖ್ಯಸ್ಥೆ ಡಾ. ಪುಷ್ಪಾ ಜಿ. ಕಿಣಿ ಮಾತನಾಡಿ, ಮೂತ್ರಪಿಂಡ ಕಾಯಿಲೆ ಇರುವವರು ಉತ್ತಮ ಜೀವನ ನಡೆಸಲು ಈ ಎಂಟು ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. […]
ಕೋವಿಡ್ ಸಂದರ್ಭದಲ್ಲಿ ಕೌಟುಂಬಿಕ ಹಿಂಸೆಗಳು ಶೇ. 100ರಷ್ಟು ಹೆಚ್ಚಾಗಿವೆ: ನ್ಯಾಯಾಧೀಶೆ ಕಾವೇರಿ ಕಳವಳ
ಉಡುಪಿ: ಕೋವಿಡ್ ಸಂದರ್ಭದಲ್ಲಿ ಕೌಟಂಬಿಕ ಹಿಂಸೆಗಳು ಹಾಗೂ ವಿವಾಹ ವಿಚ್ಛೇದನಗಳು ಪ್ರಕರಣಗಳು ಶೇ. 100ರಷ್ಟು ಹೆಚ್ಚಳವಾಗಿವೆ ಎಂದು ಉಡುಪಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಹೇಳಿದರು. ಜಮಾಅತೆ ಇಸ್ಲಾಮಿ ಹಿಂದ್ ಹಮ್ಮಿ ಕೊಂಡಿರುವ ‘ಸುದೃಢ ಕುಟುಂಬ, ಸುಭದ್ರ ಸಮಾಜ’ ವೆಂಬ ಅಭಿಯಾನದ ಅಂಗವಾಗಿ ಸ್ಥಾನೀಯ ಜಮಾಅತ್ ಇಂದು ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. ಸಂಘಟನೆ, ಸಾಮೂಹಿಕ ಜೀವನ ಎಲ್ಲಾ ಜೀವಿಗಳಲ್ಲಿ ಕಾಣಬಹುದು, ನಾವು ಮಾನವರು ಪಡಕೊಂಡ ಒಳ್ಳೆಯ ಸಂಸ್ಕ್ರತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ನಮ್ಮ ಜವಾಬ್ದಾರಿಗಳನ್ನು ಅರಿಯಬೇಕು. ಕೇವಲ […]
ಪೇಜಾವರ ಶ್ರೀಗಳಿಂದ ಸಾವಯವ ತೋಟದಲ್ಲಿ ಒಂದು ಪ್ರದಕ್ಷಿಣೆ
ಮೂಡುಬಿದಿರೆ: ಕಳೆದ ಆರೇಳು ತಿಂಗಳನಿಂದ ಎಡೆಬಿಡದ ದೇಶ ಸಂಚಾರ, ರಾಮಮಂದಿರ ನಿಧಿ ಸಂಗ್ರಹ ಅಭಿಯಾನವೇ ಮೊದಲಾಗಿ ಅತ್ಯಂತ ಒತ್ತಡದಲ್ಲಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಳೆದೆರಡು ದಿನಗಳಿಂದ ಒಂದಿಷ್ಟು ವಿಶ್ರಾಂತಿ ಪಡೆದುಕೊಂಡರು. ಎರಡು ದಿನಗಳ ನಿರ್ಜಲ ಏಕಾದಶಿಯೂ ಬಂದಿದ್ದರಿಂದ ಮೂಡಬಿದಿರೆ ಸಮೀಪದ ಕೆಲ್ಲಪುತ್ತಿಗೆಯ ಪ್ರಸಿದ್ಧ ವೈದಿಕರಾದ ಅನಂತಕೃಷ್ಣ ಅಡಿಗರ ತೋಟದ ಮನೆಯಲ್ಲಿ ಅವರ ಆಹ್ವಾನದ ಮೇರೆಗೆ ವಾಸ್ತವ್ಯವಿದ್ದು, ತಮ್ಮ ವಿದ್ಯಾರ್ಥಿಗಳಿಗೆ ಯಾವುದೇ ಕಾರ್ಯಕ್ರಮಗಳ ಒತ್ತಡವಿಲ್ಲದೇ ಸುಧಾ ಪಾಠ ಮಾಡಿದರು. ಬುಧವಾರ ಸಂಜೆ ಮೂಡಬಿದಿರೆ ಜೈನ ಮಠ ಮತ್ತು […]