ಕೊಲ್ಲೂರು ದೇಗುಲದಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರ: ದೇವಸ್ಥಾನ-ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆರೋಪ

ಕೊಲ್ಲೂರು: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆಯುತ್ತಿದ್ದು, ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರಕಾರಿ ಅಧಿಕಾರಿ ಸೇರಿ ದೇವಳದ ಹಣ, ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಗಂಭೀರ ಆರೋಪ ಮಾಡಿದೆ. ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರರಾದ ಗುರುಪ್ರಸಾದ್ ಗೌಡ ಮಾಹಿತಿ ನೀಡಿದ್ದು, ದೇವಸ್ಥಾನದಲ್ಲಿ ದೇಣಿಗೆ ರೂಪದಲ್ಲಿ ದೊರೆತ ಬಂಗಾರ […]
ಮರ ಬಿದ್ದು ಮೂವರು ಯುವಕರ ದಾರುಣ ಸಾವು

ಬೆಳ್ತಂಗಡಿ: ಮರ ಕಡಿಯುತ್ತಿರುವ ಸಂದರ್ಭದಲ್ಲಿ ಮರದಡಿ ಸಿಲುಕಿ ಮೂವರು ಯುವಕರು ದಾರುಣವಾಗಿ ಮೃತಪಟ್ಟ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಗ್ರಾಮದ ಅನಾರು ಬಳಿ ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಪಟ್ರಮೆ ರಾಮಣ್ಣ ಕುಂಬಾರ ಅವರ ಪುತ್ರ ಪ್ರಶಾಂತ್ (21), ಸೇಸಪ್ಪ ಪೂಜಾರಿ ಅವರ ಪುತ್ರ ಸ್ವಸ್ತಿಕ್ (23) ಹಾಗೂ ಮತ್ತೋರ್ವ ಉಪ್ಪಿನಂಗಡಿ ನಿವಾಸಿ ಸುರೇಶ್ ಎಂದು ಗುರುತಿಸಲಾಗಿದೆ. ಅನಾರು ಕಾಯಿಲ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿದ್ದ ಧೂಪದ ಮರವನ್ನು ಕಡಿದು ಉರುಳಿಸುವ ವೇಳೆ ಈ ದುರ್ಘಟನೆ […]
ಕೊರಂಗ್ರಪಾಡಿ: ವಾರದ ಸಂತೆಗೆ ಚಾಲನೆ

ಉಡುಪಿ: ಗುಣಮಟ್ಟದ ವಸ್ತುಗಳನ್ನು ನ್ಯಾಯೋಚಿತ ಬೆಲೆಗೆ ಸಂತೆಗೆ ಬರುವ ಗ್ರಾಹಕರಿಗೆ ನೀಡಿ ವಿಶ್ವಾಸಗಳಿಸಿ ಎಂದು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ವ್ಯಾಪಾರಿಗಳಿಗೆ ಸಲಹೆ ನೀಡಿದರು. ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಂಗ್ರಪಾಡಿ ವಿಜಯ ಬ್ಯಾಂಕ್ ಬಳಿ ಪ್ರತಿ ಮಂಗಳವಾರ ನಡೆಯಲಿರುವ ವಾರದ ಸಂತೆಯನ್ನು ಇಂದು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಕೊರಂಗ್ರಪಾಡಿ ಗ್ರಾಮದಲ್ಲಿ ಗ್ರಾಪಂ ನೂತನ ಆಡಳಿತ ಇನ್ನಷ್ಟು ಮಾದರಿ, ಜನಪರ […]
ಉಡುಪಿ ಮಲಬಾರ್ ಗೋಲ್ಡ್‌ನಿಂದ ಸಾಧಕ ಮಹಿಳೆಯರಿಗೆ ಸನ್ಮಾನ

ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮವನ್ನು ಭಾನುವಾರ ಉಡುಪಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಬ್ರಹ್ಮಾವರ ತಾಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರಬೇಕು. ಇದರಿಂದ ರಾಜಕೀಯವನ್ನು ಸ್ವಾರ್ಥ ರಹಿತ ಸೇವಾ ಕ್ಷೇತ್ರವನ್ನಾಗಿ ಮಾಡಬಹುದಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಡುಪಿ ನಗರಸಭೆ […]
ಉಡುಪಿ: ಅಧಿಕಾರಿಯ ಮನೆಗೆ ಎಸಿಬಿ ದಾಳಿ

ಉಡುಪಿ: ಈ ಹಿಂದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ವಡ್ಡಾರು ಅವರ ಉಡುಪಿಯ ಪುತ್ತೂರು ಬಳಿಯ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ಮನೆಯನ್ನು ಜಾಲಾಡಿದ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಸುಬ್ರಹ್ಮಣ್ಯ ವಡ್ಡಾರು ಅವರು ಉಡುಪಿಯಿಂದ ವರ್ಗಾವಣೆಗೊಂಡು ಮ್ಯೆಸೂರಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮ್ಯೆಸೂರಿನಲ್ಲಿ ಮನೆ, ಕಚೇರಿ, ಕಾರವಾರದಲ್ಲಿರುವ ಮನೆ, ಸಹಿತ ಅವರ ನಿವೇಶನ ಹೊಂದಿದ್ದಾರೆ ಎನ್ನಲಾದ ಒಟ್ಟು […]