ಕಾರ್ಕಳ ತಾಲೂಕು ರಾಜಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಕಡ್ತಲ ಸದಾಶಿವ ಪ್ರಭು ಆಯ್ಕೆ
ಕಾರ್ಕಳ: ಕಾರ್ಕಳ ತಾಲೂಕು ರಾಜಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿ ಕಡ್ತಲ ಸದಾಶಿವ ಪ್ರಭು ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸತೀಶ್ ಅಂಬೆಲ್ಕರ್ ಹಾಗೂ ಮಾಣಿಬೆಟ್ಟು ಪ್ರಕಾಶ್ ಪ್ರಭು ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಬಾಲಕೃಷ್ಣ ನಾಯಕ್, ಜತೆ ಕಾರ್ಯದರ್ಶಿಯಾಗಿ ನಿತ್ಯಾನಂದ ನಾಯಕ್, ಕೋಶಾಧಿಕಾರಿಯಾಗಿ ರೂಪೇಶ್ ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ಸುಧೀರ್ ನಾಯಕ್, ಮಹೇಂದ್ರ ಕಾಮತ್, ಶಶಿಧರ್ ವಾಗ್ಳೆ, ಪ್ರದೀಪ್ ನಾಯಕ್, ಕ್ರೀಡಾ ಕಾರ್ಯದರ್ಶಿಯಾಗಿ ವಿದ್ಯಾನಂದ ನಾಯಕ್, ಲಕ್ಷ್ಮಣ ನಾಯಕ್, ಹರೀಶ್ ಕಂಗಿತ್ಲು. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಶ್ವನಾಥ, ರಾಧಾಕೃಷ್ಣ ಭಟ್, […]
ಸುರತ್ಕಲ್: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರ ದಾಳಿ; ಇಬ್ಬರ ಬಂಧನ
ಸುರತ್ಕಲ್: ಇಲ್ಲಿನ ಬಾಳ ಗ್ರಾಮದ ಸಮೀಪದ ವಸತಿಗೃಹವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಳೆಯಂಗಡಿಯ ತೋಕುರು ನಿವಾಸಿ ತೋಕೂರು ಹರೀಶ್ ಹಾಗೂ ಬಂಟ್ವಾಳದ ದಡ್ಡಲ್ ಕಾಡ್, ಮೂಡ ನಡಗೋಡು ಗ್ರಾಮದ ನಿವಾಸಿ ಲೋಕನಾಥ್ ಫೂಜಾರಿ ಬಂಧಿತ ಆರೋಪಿಗಳು. ಬಂಧಿತರು ಬಾಳ ಗ್ರಾಮದ ಬಿಎಎಸ್ಎಫ್ ಫ್ಯಾಕ್ಟರಿಯ ಎದುರುಗಡೆಯ ಫೆರಾವೊ ಕಾಂಪ್ಲೆಕ್ಸ್ ನಲ್ಲಿರುವ ಫೆರಾವೊ ಲಾಡ್ಜಿಂಗ್ ಆ್ಯಂಡ್ ಬೋರ್ಡಿಂಗ್ ನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ […]
ಬ್ರಹ್ಮಾವರ: ಗೇರುಬೀಜ ಸಾಗಿಸುತ್ತಿದ್ದ ಲಾರಿ ಪಲ್ಟಿ; ಕಾರ್ಮಿಕ ಮೃತ್ಯು
ಬ್ರಹ್ಮಾವರ: ಗೇರುಬೀಜ ಸಾಗಿಸುತ್ತಿದ್ದ ಲಾರಿಯೊಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಕಾರ್ಮಿಕನೋರ್ವನಿಗೆ ಡಿಕ್ಕಿ ಹೊಡೆದು ಹತ್ತು ಮೀಟರ್ ಆಳದ ಗದ್ದೆಗೆ ಉರುಳಿಬಿದ್ದ ಘಟನೆ ಬ್ರಹ್ಮಾವರ ಕರ್ಜೆ ಸಮೀಪದ ದಾರಣ ಕಂಬಳ ಕ್ರಾಸ್ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕರ್ಜೆ ಸಮೀಪದ ದಾರಣ ಕಂಬಳ ಕ್ರಾಸ್ ನಿವಾಸಿ ಕೃಷ್ಣ ಪುತ್ರನ್ (51) ಎಂಬವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಲಾರಿ ಚಾಲಕ ಬಜ್ಪೆಯ ಅಶ್ರಫ್ ಎಂಬಾತ ಸಣ್ಣಪುಟ್ಟ ಗಾಯದೊಂದಿಗೆ ಬಚಾವಾಗಿದ್ದಾನೆ. ಲಾರಿ ಗದ್ದೆಗೆ […]
ಉಡುಪಿ: ಹೆಚ್ಚುತ್ತಿದೆ ಎಟಿಎಂ ಸ್ಕಿಮ್ಮಿಂಗ್ ವಂಚನೆ ಪ್ರಕರಣ
ಉಡುಪಿ: ಉಡುಪಿಯಲ್ಲಿ ಬ್ಯಾಂಕ್ ಖಾತೆಗಳಿಂದ ಸ್ಕಿಮ್ಮಿಂಗ್ ನಡೆಸಿ ಹಣ ವಂಚಿಸಿರುವ ಮತ್ತಷ್ಟು ಪ್ರಕರಣ ಬೆಳಕಿಗೆ ಬಂದಿದ್ದು, ಇದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಕೊಡವೂರು ಮಧ್ವನಗರದ ಪ್ರೀತಿ ಎಂ. ಎಚ್‌ಡಿಎಫ್‌ಸಿ ಬ್ಯಾಂಕ್ ಉಡುಪಿ ಶಾಖೆಯ ಖಾತೆಯಿಂದ 2020ರ ನ.17ರಂದು 28,500ರೂ., ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ನಿವಾಸಿ ಮಸೂದ ಎಂಬವರ ಕೆನರಾ ಬ್ಯಾಂಕ್ ಬಾಳೆಹೊನ್ನೂರು ಶಾಖೆಯ ಖಾತೆಯಿಂದ 2020ರ ನ.17ರಂದು 10500 ರೂ., ಅಂಬಲಪಾಡಿಯ ಶ್ರೀಪತಿ ಬಲ್ಲಾಳ್ ಎಂಬವರು ಸಿಂಡಿಕೇಟ್ ಬ್ಯಾಂಕ್ ಆದಿಉಡುಪಿ ಶಾಖೆಯ ಖಾತೆಯಿಂದ 2020ರ ನ.17ರಂದು 20,500ರೂ. […]