ರಾಜ್ಯಮಟ್ಟದ ಪವರ್ ಲಿಫ್ಟಿಂಗ್: ಸತೀಶ್ ಖಾರ್ವಿಗೆ ಚಿನ್ನದ ಪದಕ

ಕುಂದಾಪುರ: ಸಾಲಿಗ್ರಾಮದಲ್ಲಿ ಇಂದು ನಡೆದ ರಾಜ್ಯಮಟ್ಟದ ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 540 ಕೆಜಿ ಭಾರವನ್ನು ಎತ್ತುವ ಮೂಲಕ ಕುಂದಾಪುರ ಹರ್ಕ್ಯುಲೆಸ್ ಜಿಮ್ ನ ವ್ಯವಸ್ಥಾಪಕ ಸತೀಶ್ ಖಾರ್ವಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆ ಮೂಲಕ ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಉಡುಪಿ: ರಿಕ್ಷಾ ಚಾಲಕರ- ಮಾಲೀಕರ ಸಂಘಟನೆಯಿಂದ 5 ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯಧನ ವಿತರಣೆ

ಉಡುಪಿ: ಉಡುಪಿಯ ಕೋರ್ಟ್ ಹಿಂಬದಿ ರಸ್ತೆಯ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘಟನೆ ವತಿಯಿಂದ ರಿಕ್ಷಾ ಚಾಲಕರ ಸಂಘಟನೆಯ ಕ್ಷೇಮ ನಿಧಿ ಪ್ರಯುಕ್ತ ಲಕ್ಕಿ ಡ್ರಾ ಕಾರ್ಯಕ್ರಮ ಉಡುಪಿಯ ಚಿತ್ತ ರಂಜನ್ ಸರ್ಕಲ್ ಸಮೀಪದ ಹಿಂದಿ ಪ್ರಚಾರ ಸಮಿತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ 5 ಮಕ್ಕಳಿಗೆ ಸಹಾಯಧನವನ್ನು ವಿತರಿಸಲಾಯಿತು. ರಿಕ್ಷಾ ಚಾಲಕರ ಸಂಘಟನೆಯ ಗೌರವಾಧ್ಯಕ್ಷ  ಹಾಗೂ ಮಂಗಳೂರು ವಿಭಾಗದ ಬಜೆಪಿ ವಿಭಾಗ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ನಿರ್ದಿಷ್ಟ ಉದ್ದೇಶದಿಂದ ಆರಂಭಗೊಂಡ […]

ಉಡುಪಿ: ಮಾ. 1ಕ್ಕೆ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ವರ್ಧಂತಿ ಮಹೋತ್ಸವ

ಉಡುಪಿ: ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರ್ಣಿಕ ಕ್ಷೇತ್ರದ ಷಟ ಶಿರ ಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗ ಸನ್ನಿಧಾನದ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 1ರಂದು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ನೆರವೇರಲಿದೆ. ಆ ಪ್ರಯುಕ್ತ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ನಾಗರಾಜ ನಾಗ ರಾಣಿಯರ ಸನ್ನಿಧಾನದಲ್ಲಿ ಪಂಚವಿಂಶತಿ ಕಳಶಾರಾಧನೆ, ಕಲಶಾಭಿಷೇಕ, ಪ್ರಧಾನ ಯಾಗ ಜರಗಲಿದೆ. ಬ್ರಹ್ಮ ದೇವರ ಸನ್ನಿಧಾನದಲ್ಲಿ ನವಕ ಕಲಷ ಪ್ರಧಾನ ಹೋಮ ಕಲಶಾಭಿಷೇಕ, ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ […]

ಕೋರ್ಟ್ ಆವರಣದಲ್ಲೇ ವಕೀಲನ ಬರ್ಬರ ಹತ್ಯೆ

ವಿಜಯನಗರ (ಹೊಸಪೇಟೆ): ಕೋರ್ಟ್ ಆವರಣದಲ್ಲಿಯೇ ವಕೀಲನೊಬ್ಬರನ್ನು ಯುವಕ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಹೊಸಪೇಟೆ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದಿದೆ. ಮೃತರನ್ನು ವಕೀಲ, ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ (48) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾರಿಹಳ್ಳಿ ಅವರ ಸಂಬಂಧಿ ಮನೋಜ್ (22)ಎಂಬಾತ ಮಚ್ಚಿನಿಂದ ಕುತ್ತಿಗೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ವೆಂಕಟೇಶ್ ಕುರ್ಚಿ ಮೇಲೆ  ಕುಳಿತುಕೊಂಡು ನೋಟರಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಬಂದ […]