ಹಿಂದೂಗಳನ್ನು ಅವಮಾನಿಸುವುದು ಈಗ ಫ್ಯಾಷನ್ ಆಗಿದೆ: ‘ಪೊಗರು’ ಚಿತ್ರದ ವಿರುದ್ಧ ಸಂಸದೆ ಶೋಭಾ ಕಿಡಿ
ಬೆಂಗಳೂರು: ಸಿನಿಮಾದವರಿಗೆ ಹಿಂದೂ ದೇವರು-ದೇವತೆಗಳನ್ನು ಅವಮಾನಿಸುವುದು ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಫ್ಯಾಷನ್ ಆಗಿ ಬಿಟ್ಟಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ‘ಪೊಗರು’ ಸಿನಿಮಾದ ವಿರುದ್ಧ ವಾಗ್ದಾಳಿ ನಡೆಸಿದರು. ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನಕಾರಿ ದೃಶ್ಯಗಳ ಆರೋಪದ ವಿವಾದದ ಕುರಿತು ಟ್ವೀಟ್ ಮಾಡಿರುವ ಕರಂದ್ಲಾಜೆ, ಇದೇ ರೀತಿ ಬೇರೆ ಧರ್ಮಗಳನ್ನು ಅಪಮಾನ ಮಾಡುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿದ ಅವರು, ಹಿಂದೂ ಧರ್ಮಗಳ ಭಾವನೆಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ವಿವಾದಾತ್ಮಕ ದೃಶ್ಯಗಳನ್ನು […]
ಹೃದಯಾಘಾತದಿಂದ ಕಾರಿನಲ್ಲೇ ಕೊನೆಯುಸಿರೆಳೆದ ಉಡುಪಿಯ ಕಾರು ಚಾಲಕ
ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಡಿಗೆ ಹೋಗಿ ವಾಪಾಸ್ಸು ಬರುತ್ತಿದ್ದ ಕಾರು ಚಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಸಮೀಪ ಇಂದು ಬೆಳಿಗ್ಗೆ 9.30ರ ವೇಳೆಗೆ ಸಂಭವಿಸಿದೆ. ಉಡುಪಿ ಲಕ್ಷ್ಮೀಂದ್ರನಗರ ನಿವಾಸಿ ದಯಾನಂದ ನಾಯಕ್ ಎಂಬವರು ಮೃತ ಕಾರು ಚಾಲಕ. ಕಟೀಲಿನ ಹೆದ್ದಾರಿ ಪಕ್ಕದಲ್ಲಿ ಕಾರೊಂದು ನಿಂತಿದ್ದನ್ನು ಗಮನಿಸಿದ ಸ್ಥಳೀಯರು, ಕಾರಿನ ಪಕ್ಕಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಬ್ರಹ್ಮಾವರ: ನೀರು ತರಲು ಹೋದ ಮಹಿಳೆ ಹೊಳೆಯಲ್ಲಿ ಮುಳುಗಿ ಮೃತ್ಯು
ಬ್ರಹ್ಮಾವರ: ಮನೆಯ ಸಮೀಪದ ಹೊಳೆಯಿಂದ ನೀರು ತರಲು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದ ಸೂರಾಲು ಸೊಳ್ಳೆಕಟ್ಟು ಕಂಬಳಗದ್ದೆ ಎಂಬಲ್ಲಿ ನಡೆದಿದೆ. ಪೆಜಮಂಗೂರು ಗ್ರಾಮದ ಸೂರಾಲು ಸೊಳ್ಳೆಕಟ್ಟು ಕಂಬಳಗದ್ದೆ ಮನೆಯ ನಿವಾಸಿ ಚಂದು ಮರಕಾಲ್ತಿ (60) ಮೃತ ಮಹಿಳೆ. ಇವರು ಫೆ. 22ರಂದು ಬೆಳಿಗ್ಗೆ 9.15ರ ಸುಮಾರಿಗೆ ಮನೆಯ ಹತ್ತಿರದಲ್ಲಿರುವ ಹೊಳೆಯಿಂದ ನೀರು ತರಲು ಕೊಡಪಾನ ಹಿಡಿದುಕೊಂಡು ಹೋಗಿದ್ದರು. ನೀರು ತೆಗೆಯಲು ಹೊಳೆಗೆ ಇಳಿದಾಗ ಆಕಸ್ಮಿಕವಾಗಿ […]
ಕೊಡವೂರು: ದೊಂದಿ ಬೆಳಕಿನ ರಾಶಿಪೂಜಾ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ: ರಾಶಿಪೂಜಾ ಮಹೋತ್ಸವದ ಸಂಭ್ರಮವನ್ನು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ದಾಖಲೀಕರಿಸಿ, ಮಹೋತ್ಸವದ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಕೊಡವೂರು ಶಂಕರನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊಡವೂರು ಪ್ರಕಾಶ್ ಜಿ ಹೇಳಿದರು. ಅವರು ಸೋಮವಾರ ಕೊಡವೂರು ಶಂಕರನಾರಾಯಣ ದೇವಸ್ಥಾನದ ರಾಶಿ ಪೂಜಾ ಮಹೋತ್ಸವದ ಅಂಗವಾಗಿ ರಾಶಿ ಪೂಜಾ ಮಹೋತ್ಸವ ಸೇವಾ ಸಮಿತಿ ಶ್ರೀ ಶಂಕರ ನಾರಾಯಣ ದೇವಸ್ಥಾನ ಕೊಡವೂರು ಹಾಗೂ ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಷಿಯೇಶನ್ ಉಡುಪಿ ವಲಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ‘ದೊಂದಿ ಬೆಳಕಿನ ರಾಶಿಪೂಜಾ […]
ಶಿವಮೊಗ್ಗದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ: ಜಿಲೆಟಿನ್ ಸ್ಫೋಟಗೊಂಡು ಆರು ಜನ ಮೃತ್ಯು
ಚಿಕ್ಕಬಳ್ಳಾಪುರ: ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣ ಮಾಸುವ ಮುನ್ನವೇ ಮತ್ತೆ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಪ್ರಕರಣ ನಡೆದಿದ್ದು, ಸ್ಫೋಟದ ತೀವ್ರತೆಗೆ ಆರು ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ರಾತ್ರಿ 12.45ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಆರೋಗ್ಯ ಸಚಿವ ಸುಧಾಕರ್ ತವರು ಕ್ಷೇತ್ರದಲ್ಲಿ ಇಂತಹದೊಂದು ದುರಂತ ನಡೆದಿದ್ದು, ಸ್ಫೋಟದ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿದೆ. ಜಿಲೆಟಿನ್ […]