ಉಡುಪಿಯಲ್ಲಿ ಅಕಾಲಿಕ ಮಳೆ: ಜನರ ಪರದಾಟ

ಉಡುಪಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಇಂದು ಉಡುಪಿಯಲ್ಲಿ ದಿಢೀರ್ ಆಗಿ ಮಳೆ ಸುರಿದಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಮಳೆಯೂ ಒಂದು ತಾಸುಗಳ ಕಾಲ ಎಡೆಬಿಡದೆ ಸುರಿದಿದೆ. ಏಕಾಏಕಿಯಾಗಿ ಸುರಿದ ಮಳೆಯಿಂದ ಸಾರ್ವಜನಿಕರು ಪರದಾಡುವಂತಾಯಿತು. ಭಾನುವಾರ ಆಗಿದ್ದರಿಂದ ಸಭೆ, ಸಮಾರಂಭ, ಶಾಪಿಂಗ್ ಗಳಿಗೆ ಹೋಗಿದ್ದ ಜನರಿಗೆ ವರುಣನ ಕಾಟ ಎದುರಿಸುವಂತಾಯಿತು. ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರು‌ ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿರುವ ದಶ್ಯ ನಗರದ ಅಲ್ಲಾಲ್ಲಿ ಕಂಡುಬಂತು. ಕಳೆದ ಎರಡು ದಿನಗಳಿಂದಲೂ ರಾಜ್ಯದ ಹಲವು […]

ಕೋಟ: ಸಾಲದ ಬಾಧೆ ತಾಳಲಾರದೆ ಓಮಿನಿ ಚಾಲಕ ಆತ್ಮಹತ್ಯೆ

ಕೋಟ: ಸಾಲ ಬಾಧೆ ತಾಳಲಾರದೆ ಓಮಿನಿ ಚಾಲಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಹೆರೆ ಜಡ್ಡು ಎಂಬಲ್ಲಿ ನಡೆದಿದೆ. ಮಣೂರು ಗ್ರಾಮದ ಶೇಖರ (37) ಆತ್ಮಹತ್ಯೆ ಮಾಡಿಕೊಂಡ ಓಮಿನಿ ಚಾಲಕ. ಶೇಖರ ವಿಪರೀತ ಕುಡಿತದ ಚಟ ಬೆಳೆಸಿಕೊಂಡಿದ್ದು, ಇದೇ ಕಾರಣಕ್ಕೆ ಮೈ ತುಂಬಾ ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಸೊಸೈಟಿ ಬ್ಯಾಂಕಿನಲ್ಲಿ ಸಾಲ ತೆಗೆದಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಫೆ. 19ರಂದು ರಾತ್ರಿ 11.30ರಿಂದ ಫೆ. 20ರ ಸಂಜೆ 4 ಗಂಟೆ […]

ಅಂಬಲಪಾಡಿ: ಗುರುರಾಘವೇಂದ್ರ ಸನ್ನಿಧಿ ನವೀಕರಣಕ್ಕೆ ಶಿಲಾನ್ಯಾಸ

ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಪೂರ್ವಜರು ಅಂಬಲಪಾಡಿಯ ಸ್ವಗೃಹ ಈಶಾವಾಸ್ಯಮ್ ನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಶಿಲಾವೃಂದಾವನವನ್ನು ಆಚಾರ್ಯರ ಕುಟುಂಬಸ್ಥರು ನವೀಕರಣಗೊಳಿಸಲು ಉದ್ದೇಶಿಸಿದ್ದು, ಈ ಪ್ರಯುಕ್ತ ಭಾನುವಾರ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು. ನೂತನ ಗುಡಿ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಿ ನವೀಕೃತ ಗುಡಿಯಲ್ಲಿ ಪುನಃ ಪ್ರತಿಷ್ಠೆಗೊಳ್ಳುವ ವೃಂದಾವನದಲ್ಲಿ ಗುರುರಾಯರು ಸನ್ನಿಹಿತರಾಗಿದ್ದುಕೊಂಡು ನಮ್ಮೆಲ್ಲರನ್ನು ನಿರಂತರವಾಗಿ ಅನುಗ್ರಹಿಸಲಿ ಎಂದು ಸಂದೇಶ ನೀಡಿದರು. ಜ್ಯೋತಿರ್ವಿದ್ವಾನ್ ಪಾವಂಜೆ ವಾಸುದೇವ ಭಟ್ಟರ ಮಾರ್ಗದರ್ಶನದಲ್ಲಿ ವಿದ್ವಾನ್ […]

ಉಡುಪಿ: ಅಪಾಯ ಆಹ್ವಾನಿಸುತ್ತಿವೆ ಕಬ್ಬಿಣದ ಸರಳುಗಳು; ದುರಸ್ತಿಗೆ ಆಗ್ರಹ

ಉಡುಪಿ: ಇಲ್ಲಿನ ಕಲ್ಸಂಕ ಜಂಕ್ಷನ್ ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿ ಕಲ್ಲುಗಳೆಲ್ಲ ಕಿತ್ತುಹೋಗಿದ್ದು, ರಸ್ತೆಯ ಒಳಗಿದ್ದ ಕಬ್ಬಿಣದ ಸರಳುಗಳು ಮೇಲೆದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಕಳಪೆ ಗುಣಮಟ್ಟದ ಕಾಮಗಾರಿಯೇ ಈ ರೀತಿಯ ಸಮಸ್ಯೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮುಖ್ಯ ರಸ್ತೆಯಲ್ಲಿ ನಸುಕಿನ ಜಾವ ವಾಯು ವಿಹಾರಿಗಳು, ಯಾತ್ರಿಕರು, ಪಾದಚಾರಿಗಳು, ಸಂಚರಿಸುತ್ತಾರೆ. ಕಬ್ವಿಣದ ಸರಳುಗಳು ಕಾಲಿಗೆ ತಾಗಿ ಪಾದಚಾರಿಗಳು ಎಡವಿಬಿದ್ದು ಗಾಯಾಳುಗಳಾದ […]

ಕುಂದಾಪುರದ ಕೋಡಿಯಲ್ಲಿ ಕಡಲಾಮೆಗಳ ಸಂರಕ್ಷಣೆ, ಚಿಕಿತ್ಸಾ ಕೇಂದ್ರ ಸ್ಥಾಪನೆ- ಅನಂತ ಹೆಗಡೆ ಅಶಿಸರ

ಉಡುಪಿ: ಕಡಲಾಮೆಗಳನ್ನು ಸಂರಕ್ಷಣೆ ಮಾಡಿ ಅವುಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಕುಂದಾಪುರದ ಕೋಡಿಯಲ್ಲಿ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ತಿಳಿಸಿದರು. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು. ಕುಂದಾಪುರ, ಕೋಡಿಯಲ್ಲಿ ಕಡಲಾಮೆ ಮೊಟ್ಟೆ ಇಡುವ ಪ್ರದೇಶಕ್ಕೆ ಭೇಟಿ ನೀಡಿದ್ದೇವೆ. ಕೆಲವು ಕಡಲಾಮೆಗಳು ದಡಕ್ಕೆ ಬಂದಾಗ ಗಾಯಗೊಂಡಿರುತ್ತವೆ. ಹಾಗಾಗಿ ಇವುಗಳಿಗೆ ಚಿಕಿತ್ಸೆ ನೀಡುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗುವುದು ಎಂದರು. ಕುಂದಾಪುರ, ಪಂಚಗಂಗಾವಳಿ […]