ಐಪಿಎಲ್ 14ನೇ ಆವೃತ್ತಿ: 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ.!

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನೆರವೇರಿದೆ. ಐಪಿಎಲ್ 2021: 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು: ಉಳಿಸಿಕೊಂಡ ಆಟಗಾರರು: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆ್ಯಡಂ ಜಾಂಪಾ, ಜೋಶ್ ಪಿಲಿಪ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ. ಹರಾಜಿನಲ್ಲಿ ಖರೀದಿಸಿದ […]
ಕುಂದಾಪುರ: ಬೈಕ್ ಗೆ ಬಸ್ ಡಿಕ್ಕಿ; ಸವಾರ ಮೃತ್ಯು

ಕುಂದಾಪುರ: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಕೊಟೇಶ್ವರ- ಹಾಲಾಡಿ ರಸ್ತೆಯ ಪ್ರೀತಮ್ ಬಾರ್ ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಮೃತ ಬೈಕ್ ಸವಾರನನ್ನು ಪ್ರವೀಣ್ ಎಂದು ಗುರುತಿಸಲಾಗಿದೆ. ಇವರು ಕೋಣಿ-ಕಟ್ಗೇರಿ ಕಡೆಯಿಂದ ಕೊಟೇಶ್ವರ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಕೊಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ […]
ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ ನೇಣಿಗೆ ಶರಣು

ಹಾಸನ: ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದು ಬಳಿಕ ಪತಿರಾಯ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶಾಂತಿಗ್ರಾಮದ ಮನೆಯಲ್ಲಿ ನಡೆದಿದೆ. ಪತ್ನಿ ಅನ್ನಪೂರ್ಣ(23) ಎಂಬ ಮಹಿಳೆಯನ್ನು ಆಕೆಯ ಪತಿ ತುಳಸಿದಾಸ್(40) ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ತಾನು ನೇಣಿಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರು ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಕ್ಷರಂಗದ ಸಿಡಿಲಮರಿ ಡಾ.ಶ್ರೀಧರ ಭಂಡಾರಿ ಇನ್ನಿಲ್ಲ

ಪುತ್ತೂರು: ಧರ್ಮಸ್ಥಳ ಮೇಳದ ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಡಾ. ಶ್ರೀಧರ ಭಂಡಾರಿ (73) ಪುತ್ತೂರು ಅವರು ನಿಧನರಾಗಿದ್ದಾರೆ. ತಂದೆ ಸಂಘಟಕ, ಕಲಾವಿದ ದಿ. ಪುತ್ತೂರು ಶೀನಪ್ಪ ಭಂಡಾರಿ ಅವರಿಂದ ಯಕ್ಷಗಾನವನ್ನು ಅಭ್ಯಸಿಸಿದ್ದ ಶ್ರೀಧರ ಭಂಡಾರಿ ಅವರು, ನಂತರದಲ್ಲಿ ಕುರಿಯ ವಿಠ್ಠಲ ಶಾಸ್ತ್ರಿ, ಹೊಸಹಿತ್ಲು ಮಾಲಿಂಗ ಭಟ್ಟರು, ಕೆ.ಗೋವಿಂದ ಭಟ್ ಸೇರಿದಂತೆ ಹಲವರಿಂದ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡರು. ಸಂಘಟಕರೂ ಆಗಿದ್ದ ಅವರು ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳಗಳನ್ನು ನಡೆಸಿದ್ದರು. […]
ವಿದ್ಯುತ್ ತಗುಲಿ ಯುವಕ ಮೃತ್ಯು

ಬೆಳ್ತಂಗಡಿ: ಇಲ್ಲಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಎಂಬಲ್ಲಿ ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕೌಡಂಗೆ ಮನೆಯ ಚನನ ಗೌಡ ಎಂಬವರ ಪುತ್ರ ಅವಿನಾಶ್ ಗೌಡ (23) ಮೃತ ಯುವಕ. ಅವಿನಾಶ್ ಮೇಸ್ತ್ರಿ ಹಾಗೂ ಇಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದರು. ವಿದ್ಯುತ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.