ಆಸ್ಟ್ರೇಲಿಯಾದ ರಾಜ್ಯ ಆಡಳಿತ ಮಂಡಳಿಗೆ ಉಡುಪಿ ಮೂಲದ ಯುವತಿ ಆಯ್ಕೆ

ಉಡುಪಿ: ಆಸ್ಟ್ರೇಲಿಯಾದ ಪ್ರಧಾನಿ ಸ್ಕೋಟ್ ಮೋರಿಸನ್ ಅವರ ನೇತೃತ್ವದ ಲಿಬರಲ್ ಪಾರ್ಟಿಯ ವಿಕ್ಟೋರಿಯ ರಾಜ್ಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಪೆರ್ಡೂರು ಮೂಲದ ಶಿಲ್ಪಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಶಿಲ್ಪಾ ಮೂಲತಃ ಉಡುಪಿ ಜಿಲ್ಲೆಯ ಪೆರ್ಡೂರು ನಿವಾಸಿ. ಪೆರ್ಡೂರಿನ ಮೋಹನ್ ದಾಸ್ ಹೆಗ್ಡೆ ಮತ್ತು ಶಶಿಕಲಾ ಹೆಗ್ಡೆ ದಂಪತಿಯ ಪುತ್ರಿಯಾಗಿದ್ದಾರೆ. ಇವರು ನಿಟ್ಟೆಯಲ್ಲಿ ಇಂಜಿನಿಯರಿಂಗ್ ಮುಗಿಸಿ 2001ರಿಂದ ಆಸ್ಟ್ರೇಲಿಯಾದಲ್ಲಿ ಸಾಫ್ಟ್ ವೇರ್ ಕನ್ಸಲ್ಟೆನ್ಸಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಕ್ತದಾನಕ್ಕೆ ಯುವಜನತೆಯ ಸ್ಪಂದನೆ ಅನುಕರಣೀಯ: ಮಹೇಶ್ ಠಾಕೂರ್

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಯುತ್ತಿದ್ದು, ಹಲವಾರು ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿವೆ. ರಕ್ತದಾನ ಮಾಡುವ ಯುವಜನತೆಯ ಸಾಮಾಜಿಕ ಚಿಂತನೆ ಅನುಕರಣೀಯವಾದುದು ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅಭಿಪ್ರಾಯಪಟ್ಟರು. ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ಗುರುವಾರ ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಲಯನ್ಸ್ ಕ್ಲಬ್ ಉಡುಪಿ ಚೇತನ, ರೋಟರಿ ಕ್ಲಬ್ ಉಡುಪಿ ರಾಯಲ್, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ […]
ಉಡುಪಿ: ಅಂಬಲಪಾಡಿ ನಿವಾಸಿ ಕಾಣೆ

ಉಡುಪಿ: ಅಂಗಡಿಗೆ ಹೋಗಿಬರುತ್ತೇನೆಂದು ಮನೆಯಿಂದ ತೆರಳಿದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಬಲಪಾಡಿಯ ನಿವಾಸಿ ಪದ್ಮನಾಭ ಭಂಡಾರಿ (63) ಕಾಣೆಯಾದ ವ್ಯಕ್ತಿ. ಇವರು ಫೆ. 17ರಂದು ಬೆಳಿಗ್ಗೆ 11.45ಕ್ಕೆ ಅಣ್ಣನ ಅಂಗಡಿಗೆ ತನ್ನ ಕಾರಿನಲ್ಲಿ ಬಂದು ಹೋಗಿದ್ದು, ಬಳಿಕ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದಾರೆ.
ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ರಾಹುಲ್ ಗಾಂಧಿ ಆಗ್ರಹ

ನವದೆಹಲಿ: ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಪುದುಚೇರಿಯಲ್ಲಿ ಮೀನುಗಾರರೊಡನೆ ಸಂವಾದ ನಡೆಸಿದ ಅವರು, ಮೀನುಗಾರರು ಕಡಲ ರೈತರು ಎಂದು ಬಣ್ಣಿಸಿದರು. ದೆಹಲಿಯಲ್ಲಿ ರೈತರಿಗಾಗಿ ಪ್ರತ್ಯೇಕ ಸಚಿವಾಲಯ ಇದೆ. ಆದರೆ ಕಡಲಿನ ರೈತರಿಗೆ ಏನಾದರೂ ಸಮಸ್ಯೆಯಾದರೆ ಅದಕ್ಕಾಗಿ ಪ್ರತ್ಯೇಕ ಇಲಾಖೆ ಇಲ್ಲ. ರೈತರು ಸಮಸ್ಯೆಯಾದರೆ ಕೃಷಿ ಸಚಿವಾಲಯಕ್ಕೆ ಹೋಗುತ್ತಾರೆ. ಅದಕ್ಕಾಗಿ ಮೀನುಗಾರಿಕೆಗೆ ಸಂಬಂಧಿಸಿ ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂದು ಹೇಳಿದ್ದಾರೆ.
ಹಿಂದೂ ಯುವತಿಯರೊಂದಿಗೆ ಅನ್ಯಕೋಮಿನ ಯುವಕರ ಮೋಜುಮಸ್ತಿ: ಯುವಕ ಯುವತಿಯರನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

ಮಂಗಳೂರು: ಅನ್ಯಕೋಮಿನ ಮೂರು ಯುವಕರೊಂದಿಗೆ ಪಾರ್ಟಿ ಮಾಡಲು ಬಂದಿದ್ದ ಇಬ್ಬರು ಹಿಂದೂ ಯುವತಿಯರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರು ಎಕ್ಕಾರು ಸಮೀಪದ ಕಲ್ಲಿನ ಕೋರೆಯೊಂದರಲ್ಲಿ ನಡೆದಿದೆ. ಯುವಕರು ಮಂಗಳೂರು ಮೂಲದವರಾಗಿದ್ದು, ಯುವತಿಯರು ಬೆಂಗಳೂರಿನವರೆಂದು ತಿಳಿದು ಬಂದಿದೆ. ಅನ್ಯಕೋಮಿನ ಯುವಕರ ಜೊತೆ ಯುವತಿಯರು ಇರುವ ವಿಚಾರ ಹಿಂದೂ ಸಂಘಟನೆ ಕಾರ್ಯಕರ್ತರ ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು, ಘಟನಾಸ್ಥಳಕ್ಕೆ ತೆರಳಿ ಬಜ್ಪೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.