ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಪಂಕ್ತಿಭೇದ: ಭಕ್ತರ ಆಕ್ರೋಶ

ಕಾರ್ಕಳ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ರಥೋತ್ಸವ, ಜಾತ್ರಾಮಹೋತ್ಸವ ಪ್ರಯುಕ್ತ ಗುರುವಾರ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಪಂಕ್ತಿಭೇದ ಮಾಡಿದೆ ಘಟನೆ ನಡೆದಿದ್ದು, ಇದಕ್ಕೆ ಭಕ್ತಾಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಧ ಸಮುದಾಯದವರಿಗೆ ಪ್ರತ್ಯೇಕ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬ್ರಾಹ್ಮಣ ಸಮುದಾಯದವರಿಗೆ ದೇವಳದ ಅಂಗಣದಲ್ಲಿ ವ್ಯವಸ್ಥೆ ಮಾಡಿದ್ದರೆ, ಗಣ್ಯ ವ್ಯಕ್ತಿಗಳಿಗೆ ಸಭಾಂಗಣದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗೆ ಇತರರಿಗೆ ಹಿಂದುಳಿದ ಸಮಾಜದವರಿಗೆ ದೇವಸ್ಥಾನದ ಹಿಂಭಾಗದ ಗದ್ದೆಯಲ್ಲಿ ಛತ್ರದಲ್ಲಿ ಊಟ […]
ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಣಿಪಾಲ ಮೂಲದ ರಶ್ಮಿ ಸಾಮಂತ್ ರಾಜೀನಾಮೆ

ಉಡುಪಿ: ಲಂಡನ್ ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ (ಎಸ್‌ಯು) ಅಧ್ಯಕ್ಷೆ ಮಣಿಪಾಲ ಮೂಲದ ರಶ್ಮಿ ಸಾಮಂತ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಶ್ಮಿ ಇತ್ತೀಚೆಗೆಷ್ಟೇ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು. ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಕೂಡ ಆಗಿದ್ದರು. ಆದರೆ, ರಶ್ಮಿ ಅವರು ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಜನಾಂಗೀಯ ಮತ್ತು ಸಂವೇದನಾರಹಿತವಾದ ಹೇಳಿಕೆಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಾಪು: ಕಾರು ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಕಾಪು: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಕಾಪು ತಾಲೂಕಿನ ಮಲ್ಲಾರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಯು. ಶಾಬುದ್ದೀನ್ ಸಾಹೇಬ್ ಮೃತ ದುರ್ದೈವಿ. ಇವರು ಫೆ.17ರಂದು ರಸ್ತೆ ದಾಟುತ್ತಿದ್ದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನೆಯಿಂದ ತೀವ್ರಗಾಯಗೊಂಡಿದ್ದ ಶಾಬುದ್ದೀನ್ ಸಾಹೇಬ್ ಅವರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು. ಈ ಬಗ್ಗೆ ಕಾಪು ಪೊಲೀಸ್ […]
ಕಾರ್ಕಳದ ಕದಿಕೆ ಟ್ರಸ್ಟ್ ವತಿಯಿಂದ ಹಿರಿಯ ನೇಕಾರರಿಗೆ ಸನ್ಮಾನ

ಉಡುಪಿ: ದ. ಕ ಮತ್ತು ಉಡುಪಿ ಜಿಲ್ಲೆಗಳ ಹಿರಿಯ ನೇಕಾರರಾದ ಉಡುಪಿ ನೇಕಾರ ಸಂಘದ ಸೋಮಪ್ಪ ಜಥನ್ನ(86) ಮತ್ತು ಶಿವಳ್ಳಿ ಸಂಘದ ಸಂಜೀವ ಶೆಟ್ಟಿಗಾರ್(83) ಅವರನ್ನು ಉಡುಪಿ ಸೀರೆ ನೇಕಾರಿಕೆ ಪುನಶ್ಚೇತನದ ಬಗ್ಗೆ ಕೆಲಸ ಮಾಡುತ್ತಿರುವ ಕಾರ್ಕಳದ ಕದಿಕೆ ಟ್ರಸ್ಟ್ ವತಿಯಿಂದ ಉಡುಪಿಯಲ್ಲಿರುವ ಶಿವಳ್ಳಿ ನೇಕಾರರ ಸಂಘದ ಸಭಾ ಭವನದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತ ರೈ ಅವರು, ಇಂತಹ ಹೆಚ್ಚಿನ ಫಲಾಪೇಕ್ಷೆ ಇಲ್ಲದ ಹಿರಿಯ ನೇಕಾರರಿಂದಾಗಿಯೇ ಉಡುಪಿ ಸೀರೆ ನೇಕಾರಿಕೆ […]
ಉಡುಪಿ: ಹೃದಯಾಘಾತದಿಂದ ಶ್ರೀಲಂಕಾದ ಪ್ರಜೆ ಮೃತ್ಯು

ಉಡುಪಿ: ಉಡುಪಿ ಜಿಲ್ಲೆಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಲಂಕಾದ ಪ್ರಜೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೃತ ವ್ಯಕ್ತಿಯನ್ನು ಶ್ರೀಲಂಕಾ ದೇಶದ ನಿವಾಸಿ ಕಬಿಲನ್ (59) ಎಂದು ಗುರುತಿಸಲಾಗಿದೆ. ಇವರು ಮೀನು ರಪ್ತು ಕೆಲಸ ಮಾಡಿಕೊಂಡಿದ್ದು, 2020ರ ನವೆಂಬರ್ ತಿಂಗಳಿನಲ್ಲಿ ಉಡುಪಿಗೆ ಬಂದಿದ್ದರು. ಖಾಸಗಿ ಲಾಡ್ಜ್ ವೊಂದರಲ್ಲಿ ತಂಗಿದ್ದ ಇವರಿಗೆ ಫೆ.16ರಂದು ರಾತ್ರಿ ದಿಢೀರ್ ಆಗಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ತನ್ನ ಪರಿಚಯಸ್ಥರಾದ ಹರ್ಷವರ್ಧನ್ ಕೆ. ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು […]