ಉಡುಪಿ: ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ನೇಣುಬಿಗಿದುಕೊಂಡು ಆತ್ಮಹತ್ಯೆ
ಉಡುಪಿ: ಅಕೇಶಿಯಾ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದ ಇರ್ಮಾಡಿ ಶೇಡಿಗುಳಿ ಎಂಬಲ್ಲಿನ ವನ್ಯಜೀವಿ ಮೀಸಲು ಅರಣ್ಯದಲ್ಲಿ ಸಂಭವಿಸಿದೆ. ಉಡುಪಿ ಅಂಬಲಪಾಡಿಯ ನಿವಾಸಿ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ ಪದ್ಮನಾಭ ಭಂಡಾರಿ (66) ಎಂಬುವವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಹೃದಯ ಸಂಬಂಧಿ ಮತ್ತು ಮೂತ್ರಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೃದಯದ ಬೈಪಾಸ್ ಸರ್ಜರಿ ಹಾಗೂ ಮೂತ್ರಾಂಗಕ್ಕೆ ಟ್ಯೂಬ್ ಅಳವಡಿಸಿರುವುದರಿಂದ ತುಂಬಾ ಚಿಂತೆಗೆ […]
ಐಪಿಎಲ್ ಹರಾಜು: ಸಚಿನ್ ತೆಂಡೂಲ್ಕರ್ ಪುತ್ರ ಈ ತಂಡದ ಪಾಲು!
ಚೆನ್ನೈ: ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್ 2021 ಹರಾಜು ಪ್ರಕ್ರಿಯೆಗೆ ನೋಂದಣಿ ಮಾಡಿಕೊಂಡಿದ್ದರು. ಹರಾಜಿನಲ್ಲಿ ಅರ್ಜುನ್ ಅವರನ್ನು ಯಾವ ತಂಡ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಇತ್ತು. ಎಲ್ಲರೂ ಊಹಿಸಿದಂತೆ ಅರ್ಜುನ್ ಅವರನ್ನು ಮುಂಬೈ ತಂಡ 20 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ20ಗೆ ಅರ್ಜುನ್ ಕಾಲಿಟ್ಟಿದ್ದರು. ಹರಿಯಾಣ ವಿರುದ್ಧದ ಪಂದ್ಯದಲ್ಲಿ 34 ರನ್ ನೀಡಿ ಒಂದು ವಿಕೆಟ್ ಪಡೆದರೆ, ಪುದುಚೇರಿ ವಿರುದ್ಧ 33 ರನ್ […]
ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸ್ಥಳೀಯ ಕುಚ್ಚಲಕ್ಕಿ ಪಡಿತರವಾಗಿ ನೀಡಿ: ಸಚಿವರಾದ ಕೋಟ, ಅಂಗಾರರಿಂದ ಸಿಎಂಗೆ ಮನವಿ
ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರದ ಮೂಲಕ ವಿತರಿಸುತ್ತಿರುವ ಕುಚ್ಚಲಕ್ಕಿ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಜನಸಾಮಾನ್ಯರು ಅದರಲ್ಲೂ ಬಡವರು ಅಕ್ಕಿಯನ್ನು ಉಪಯೋಗಿಸದೆ ಕಡಿಮೆ ದರಕ್ಕೆ ಮಾರಾಟ ಮಾಡಿ ಹೆಚ್ಚು ದರದ ಕೆಂಪು ಕುಚಲಕ್ಕಿಯನ್ನು ಖರೀದಿಸುತ್ತಿದ್ದಾರೆ. ಕೆಲವು ಕಡೆ ಪಡಿತರ ಅಕ್ಕಿಯನ್ನೇ ಪಡೆಯುತ್ತಿಲ್ಲ. ಹಾಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪಡಿತರದಾರರಿಗೆ ಬೇಕಾಗುವ ಕುಚ್ಚಲಕ್ಕಿಯನ್ನು ಸ್ಥಳೀಯ ರೈತರಿಂದ ಸಂಗ್ರಹಿಸಿ ವಿತರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ […]
ಐಪಿಎಲ್ ಹರಾಜು: ಮಾರಾಟವಾಗದೆ ಉಳಿದ ಆಟಗಾರರ ಪಟ್ಟಿ ಹೀಗಿದೆ.!
ಚೆನ್ನೈ: 2021ಗೆ ನಡೆಯಲಿರುವ ಐಪಿಎಲ್ 14 ಆವೃತ್ತಿಗೆ ಇಂದು ಹರಾಜು ಪ್ರಕ್ರಿಯೆ ನಡೆದಿದೆ. ಸ್ಟಾರ್ ಆಟಗಾರರು ಎನಿಸಿಕೊಂಡ ಅನೇಕರು ಇಂದು ಅನ್ಸೋಲ್ಡ್ ಆಗಿದ್ದಾರೆ. ಅನ್ಸೋಲ್ಡ್ ಆದ ಆಟಗಾರರ ಹೆಸರು ಇಲ್ಲಿದೆ. ಮೊದಲ ಹಂತದಲ್ಲಿ ಮಾರಾಟವಾಗದೆ ಉಳಿದ ಆಟಗಾರರು. ಆರನ್ ಫಿಂಚ್: ಮೂಲ ಬೆಲೆ 1 ಕೋಟಿ ರೂಪಾಯಿ. ಹನುಮ ವಿಹಾರಿ: ಮೂಲ ಬೆಲೆ 1 ಕೋಟಿ ರೂಪಾಯಿ. ಜೇಸನ್ ರಾಯ್: ಮೂಲ ಬೆಲೆ 2 ಕೋಟಿ ರೂಪಾಯಿ. ಎವಿನ್ ಲೂಯಿಸ್:ಮೂಲ ಬೆಲೆ 1 ಕೋಟಿ ರೂಪಾಯಿ. ಹರ್ಭಜನ್ […]
ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಬಿಕರಿಯಾದ ಮೋರಿಸ್: ಫ್ರಾಂಚೈಸಿಗಳು ಖರೀದಿಸಿದ ಆಟಗಾರರ ಪಟ್ಟಿ ಹೀಗಿದೆ?
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14ನೇ ಆವೃತ್ತಿಗಾಗಿ ಆಟಗಾರರ ಹರಾಜು (ಐಪಿಎಲ್ 2021 ಹರಾಜು) ಇಂದು ನಡೆಯುತ್ತಿದ್ದು, ಒಟ್ಟು 291 ಕ್ರಿಕೆಟಿಗರ ಬಿಡ್ಡಿಂಗ್ ನಡೆಯಲಿದೆ 14. 25 ಕೋಟಿಗೆ ಮ್ಯಾಕ್ಸ್ವೆಲ್ ಆರ್ಸಿಬಿ ಪಾಲಾಗಿದ್ದಾರೆ. ಆರಂಭದಿಂದಲೂ ಚೆನ್ನೈ ಮತ್ತು ಬೆಂಗಳೂರು ನಡುವೆ ಭಾರಿ ಪೈಫೋಟಿ ಉಂಟಾಗಿತ್ತು. ಅಂತಿಮವಾಗಿ ಮ್ಯಾಕ್ಸ್ವೆಲ್, ಆರ್ಸಿಬಿ ಸೇರಿದರು. ಹಾಗೆಯೇ 16.25 ಕೋಟಿಗೆ ದಕ್ಷಿಣ ಆಫ್ರಿಕಾದ ಆಟಗಾರ ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಮೋರಿಸ್ಗಾಗಿ ಪಂಜಾಬ್ ಮತ್ತು ರಾಜಸ್ಥಾನ್ ನಡುವೆ ಬಾರಿ […]