ಶೀಘ್ರದಲ್ಲೇ ಮರಳು ಗಣಿಗಾರಿಕೆ ನಿಯಮ ಸರಳೀಕೃತವಾಗಲಿದೆ: ಎತ್ತಿನಗಾಡಿ, ಟ್ರ್ಯಾಕ್ಟರ್ ನಲ್ಲಿಯೂ ಮರಳು ಸಾಗಿಸಬಹುದು-ಸಚಿವ ನಿರಾಣಿ
ಬೆಂಗಳೂರು: ಮರಳು ಗಣಿಗಾರಿಕೆಯ ನಿಯಮಗಳನ್ನು ಸರಳಗೊಳಿಸಲಾಗಿದೆ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಮರಳು ಸುಲಭವಾಗಿ ಸಿಗಲು 2021ರ ನೂತನ ಗಣಿ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಹೇಳಿದರು. ಹಳ್ಳಕೊಳ್ಳಗಳಲ್ಲಿ ಸಿಗುವ ಮರಳನ್ನು ತರಲು ಕಡಿವಾಣ ಹಾಕಲಾಗಿತ್ತು. ಇದರಿಂದ ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಗುತ್ತಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಮರಳಿನ ಸಮಸ್ಯೆ ಎದುರಾಗಿತ್ತು. ಆದರೆ ಈಗ ಹಳ್ಳಕೊಳ್ಳಗಳಲ್ಲಿ ಸಿಗುವ ಮರಳನ್ನು ಬಳಸಲು ಅವಕಾಶ […]
ಮಲ್ಪೆ: ಮೆಟ್ಟಿಲು ಹತ್ತುವಾಗ ಜಾರಿ ಬಿದ್ದು ಮಹಿಳೆ ಮೃತ್ಯು
ಮಲ್ಪೆ: ಮನೆಯ ಮಹಡಿ ಮೆಟ್ಟಿಲು ಹತ್ತುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ತೆಂಕನಿಡಿಯೂರುವಿನಲ್ಲಿ ನಡೆದಿದೆ. ಮೃತರನ್ನು ಸುಮತಿ ಭಟ್ (56) ಎಂದು ಗುರುತಿಸಲಾಗಿದೆ. ಎಂದಿನಂತೆ ಮಂಗಳವಾರ ಬೆಳಿಗ್ಗೆ ಎದ್ದು ಹಾಸಿಗೆಯನ್ನು ಮನೆಯ ಮಹಡಿಯ ಮೇಲೆ ಇಡಲು ಮೆಟ್ಟಿಲು ಹತ್ತುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹಾಸಿಗೆ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತು. ಆದರೆ ಚಿಕಿತ್ಸೆ […]
ಫೆ. 22ರಂದು ಮಿಯ್ಯಾರು ದೊಡ್ಮನೆ ಕುಟುಂಬಸ್ಥರ ಚತುಃಪವಿತ್ರ ನಾಗಮಂಡಲೋತ್ಸವ
ಉಡುಪಿ: ಬ್ರಹ್ಮಾವರದ ಮಿಯ್ಯಾರು ದೊಡ್ಮನೆ ಕುಟುಂಬಸ್ಥರ ಮೂಲ ನಾಗಬನದ ಚತುಃಪವಿತ್ರ ನಾಗಮಂಡಲೋತ್ಸವವು ಫೆ. 22ರಂದು ನಾಗದೇವರ ಸನ್ನಿಧಿಯಲ್ಲಿ ನಡೆಯಲಿದೆ ಎಂದು ಮಿಯಾರು ಪ್ರವೀಣ ಕುಮಾರ್ ಶೆಟ್ಟಿ ಹೇಳಿದರು. ಚೇರ್ಕಾಡಿ ವೇದಮೂರ್ತಿ ಸುದರ್ಶನ ಸೂರ್ಯ ನಾಗಯಕ್ಷಿ ಪಾತ್ರಿಗಳ ನೇತೃತ್ವದಲ್ಲಿ ಹರಿಕೃಷ್ಣ ಉಡುಪರ ಮಾರ್ಗದರ್ಶನದಲ್ಲಿ ಚತುಃಪವಿತ್ರ ನಾಗಮಂಡಲ ಸೇವೆಯನ್ನು ಹಾಗೂ ವಿವಿಧ ವೈದಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನಾಗ ಮಂಡಲದ ಅಂಗವಾಗಿ ಫೆ. 20 ರಿಂದ ಫೆ 22 ರ ವರೆಗೆ ಮೂರು ದಿನಗಳ ಕಾಲ ಸಾಮೂಹಿಕ ಪ್ರಾರ್ಥನೆ, […]
ಉಡುಪಿ ಶಾಸಕ ಕೆ. ರಘುಪತಿ ಭಟ್ ಗೆ ಭ್ರಾತೃ ವಿಯೋಗ
ಉಡುಪಿ: ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ಸಹೋದರ ಸಾಂಗ್ಲಿಯ ಹೋಟೆಲ್ ಉದ್ಯಮಿ ಕೆ. ರವೀಂದ್ರ ಬಾರಿತ್ತಾಯ (60) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಸುಕಿನಲ್ಲಿ ಸಾಂಗ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಮೂವರು ಸಹೋದರರು, ಪತ್ನಿ , ಇಬ್ಬರು ಪುತ್ರಿಯರು ಓರ್ವ ಪುತ್ರನನ್ನು ಅಗಲಿದ್ದಾರೆ . ಶ್ರೀಯುತರು ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಸಂದರ್ಭ ವಿಶೇಷ ಸೇವೆ ಸಲ್ಲಿಸಿದ್ದರು. ರವೀಂದ್ರ ಬಾರಿತ್ತಾಯರ ನಿಧನಕ್ಕೆ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ, […]