ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ದೀಪಕ್ ಕೋಟ್ಯಾನ್ ಇನ್ನಾಗೆ ಭರ್ಜರಿ ಗೆಲುವು

ಉಡುಪಿ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ದೀಪಕ್ ಕೋಟ್ಯಾನ್ ಇನ್ನಾ 1186 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ. ಅಧ್ಯಕ್ಷ ಚುನಾವಣೆಗೆ ದೀಪಕ್ ಕೋಟ್ಯಾನ್ ಇನ್ನಾ, ಹಾಲಿ ಅಧ್ಯಕ್ಷರಾಗಿದ್ದ ವಿಶ್ವಾಸ್ ಅಮೀನ್, ಕೃಷ್ಣ ಶೆಟ್ಟಿ, ಪ್ರದೀಪ್ ಶೆಟ್ಟಿ, ಮಹಮದ್ ಸಲಾಂ, ನಟರಾಜ್ ಹೊಳ್ಳ ಅವರು ಸ್ಪರ್ಧಿಸಿದ್ದರು. ಈ ಪೈಕಿ ದೀಪಕ್ ಕೋಟ್ಯಾನ್ ಅವರಿಗೆ 1186 ಮತ, ವಿಶ್ವಾಸ್ ಅಮೀನ್ 698 ಮತ, ಕೃಷ್ಣ ಶೆಟ್ಟಿ 19, ಪ್ರದೀಪ್ ಶೆಟ್ಟಿ 7, ಮಹಮದ್ ಸಲಾಂ 32, […]
ಮರಕ್ಕೆ ಕಾರು ಡಿಕ್ಕಿ: ಓರ್ವ ಮಹಿಳೆ ಮೃತ್ಯು; ಮೂವರು ಗಂಭೀರ

ಮಂಗಳೂರು: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನೂ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು ನಗರದ ಹೊರವಲಯದ ಕುಳಾಯಿಯಲ್ಲಿ ಇಂದು ಮುಂಜಾನೆ ನಡೆದಿದೆ. ಮೃತಳನ್ನು ಸುಹಾನಾ (26) ಎಂದು ಗುರುತಿಸಲಾಗಿದೆ. ಫಾತಿಮಾ ಶೌರೀನ್, ರಾಹಿಲ್ ಶಮೀಮ್ ಮತ್ತು ರಾಝಿಕ್ ಶಹಾನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಪರಿಣಾಮದಿಂದಾಗಿ ಕಾರು ನುಜ್ಜುಗುಜ್ಜಾಗಿದೆ. ಈ ಸಂಬಂಧ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
ಹಣದಾಸೆಗಾಗಿ ಮನೆ ಒಡತಿಯನ್ನೇ ಕೊಲೆಗೈದ ಕೆಲಸದಾಳು

ಬಂಟ್ವಾಳ: ಜ. 26ರಂದು ಅಮ್ಮುಂಜೆ ಗ್ರಾಮದಲ್ಲಿ ನಡೆದ ಬೆನೆಡಿಕ್ಟ್ ಕಾರ್ಲೋ (72) ಎಂಬ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊದಲು ಅಸಹಜ ಸಾವು ಪ್ರಕರಣವೆಂದು ಪೊಲೀಸರು ದಾಖಲಿಸಿಕೊಂಡಿದ್ದರು. ಆದರೆ ಬಳಿಕ ತನಿಖೆ ನಡೆಸಿದಾಗ ಇದೊಂದು ವ್ಯವಸ್ಥಿತ ಕೊಲೆ ಪ್ರಕರಣ ಎಂದು ಗೊತ್ತಾಗಿತ್ತು. ಹಣದಾಸೆಗಾಗಿ ಮನೆ ಒಡತಿಯನ್ನೇ ಕೆಲಸದಾಳು ಅಮ್ಟಾಡಿ ಗ್ರಾಮದ ಎಲ್ಮಾ ಪ್ರಶ್ಚಿತಾ ಬರೆಟ್ಟೊ (25) ಹಾಗೂ ಆಕೆಯ ಸ್ನೇಹಿತರಾದ ನರಿಕೊಂಬು ನಿವಾಸಿ ಸತೀಶ ಹಾಗೂ ಚರಣ್ ಎಂಬ ಮೂವರು […]
ಕಾಪು: ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಪಲ್ಟಿ: ಚಾಲಕ, ನಿರ್ವಾಹಕ ಪಾರು

ಕಾಪು: ಖಾಲಿ ಸಿಲಿಂಡರ್ ಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯೊಂದು ಮಗುಚಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಲಾರಿಯು ಖಾಲಿ ಸಿಲಿಂಡರ್ ಗಳನ್ನು ತುಂಬಿಸಿಕೊಂಡು ಮಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಪಾಂಗಾಳ ವಿಜಯಾ ಬ್ಯಾಂಕ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರ ಪರಿಣಾಮ ಲಾರಿಯಲ್ಲಿದ್ದ ಸಿಲಿಂಡರ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆದರೆ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು […]
ಕಾಪು: ನಾರಾಯಣಗುರು ಮಂದಿರದಲ್ಲಿ ಕಳವು

ಕಾಪು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಮಂದಿರಕ್ಕೆ ಬುಧವಾರ ತಡರಾತ್ರಿ ಕಳ್ಳರು ನುಗ್ಗಿದ್ದು, ಮಂದಿರದ ಕಾಣಿಕೆ ಡಬ್ಬಿಯನ್ನು ಒಡೆದು ನಗ-ನಗದು ದೋಚಿ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಕಳ್ಳರು ಮಂದಿರದ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ್ದು, ಕಾಣಿಕೆ ಡಬ್ಬಿಯಲ್ಲಿದ್ದ ನಗದನ್ನು ಕಳವು ಮಾಡಿದ್ದಾರೆ. ಅಲ್ಲದೆ ಕಪಾಟಿನ ಬೀಗ ಮುರಿದು ತಡಕಾಡಿದ್ದಾರೆ. ಇಂದು ಬೆಳಿಗ್ಗೆ ಮಂದಿರದ ಅರ್ಚಕರು ಪೂಜೆಗಾಗಿ ಆಗಮಿಸಿದ ವೇಳೆ ಕಳ್ಳತನ ನಡೆದಿರುವ ವಿಚಾರ ಗೊತ್ತಾಗಿದೆ. ಅವರು ಕೂಡಲೇ […]