ಉಡುಪಿ: ಫೆ. 5ಕ್ಕೆ ಡಿಸಿ ಕಚೇರಿ ಮುಂಭಾಗ ಮನೆ ನಿವೇಶನದಾರರಿಂದ ಪ್ರತಿಭಟನೆ
ಉಡುಪಿ: ನಗರಸಭೆ ಹಾಗೂ ಪ್ರಾಧಿಕಾರದ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವರು ಕೃಷಿಭೂಮಿ ಹಿಡುವಳಿಗಳನ್ನು ಖರೀದಿಸಿ ಭೂಪರಿವರ್ತನೆ ಮಾಡಿ ವಸತಿ ಬಡಾವಣೆಗಳನ್ನಾಗಿ ಮಾರ್ಪಡಿಸಿದ್ದಾರೆ. ಅದನ್ನು ಖರೀದಿಸಿದವರಿಗೆ ಮನೆಕಟ್ಟಲು ಕಳೆದ 15 ವರ್ಷಗಳಿಂದ ಒಂದಲ್ಲ ಒಂದು ಕಾನೂನು ತೊಡಕು ಉಂಟಾಗುತ್ತಿದೆ. ಇದನ್ನು ಪರಿಹರಿಸುವಂತೆ ಒತ್ತಾಯಿಸಿ ಫೆಬ್ರವರಿ 5ರ ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಮತ್ತು ಪ್ರಾಧಿಕಾರ ವ್ಯಾಪ್ತಿಯ ಸಂತ್ರಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ಕು ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದ ತಂದೆ
ರಾಯಚೂರು: ತಂದೆಯೇ ಮಗನನ್ನು ಕತ್ತು ಹಿಸುಕಿ ಕೊಂದ ಪೈಶಾಚಿಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಎಲೆಕೂಡ್ಲಗಿ ಗ್ರಾಮದ ಬಳಿ ನಡೆದಿದೆ. ಎಲೆಕೂಡ್ಲಗಿ ಗ್ರಾಮದ ಯಲ್ಲಪ್ಪ ಎಂಬಾತ ಮಗನನ್ನು ಕೊಂದ ಕ್ರೂರಿ ತಂದೆ. ತವರು ಮನೆಗೆ ತೆರಳಿದ್ದ ಪತ್ನಿ ವಾಪಸ್ಸು ಬರದೇ ಇರುವುದಕ್ಕೆ ಪತ್ನಿ ಜೊತೆಗೆ ಜಗಳವಾಡಿದ ಯಲ್ಲಪ್ಪ ಕೋಪದಲ್ಲಿ ತನ್ನ ಮಗ ಮಹೇಶ್ (4)ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೃತ ಬಾಲಕನ ತಾಯಿ ಸದ್ಯ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಸಿಂಧನೂರ ಗ್ರಾಮೀಣ […]
ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಇದ್ದರೆ ಪಾಸ್ ಪೋರ್ಟ್ ಸಿಗಲ್ಲ
ಡೆಹ್ರಾಡೂನ್: ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಹಾಕುವವರಿಗೆ ಪಾಸ್ ಪೋರ್ಟ್ ನೀಡದಿರಲು ಉತ್ತರಾಖಂಡ್ ಪೊಲೀಸರು ಚಿಂತಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ, ಸಮಾಜ ವಿರೋಧಿ ಪೋಸ್ಟ್ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ್ ಪೊಲೀಸರು ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ವ್ಯಕ್ತಿಯೋರ್ವನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಗಳು ಪದೇ ಪದೇ ಕಂಡುಬಂದಲ್ಲಿ ಅಂತಹ ವ್ಯಕ್ತಿಗೆ ಇನ್ನು ಮುಂದೆ ಪಾಸ್ಪೋರ್ಟ್ ಪಡೆಯುವುದು, ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದು ಕಷ್ಟವಾಗಲಿದೆ. ರಾಜ್ಯ ಪೊಲೀಸ್ ಅಧಿಕಾರಿಗಳ […]