ಉಡುಪಿ: ನಾಳೆ ಕರಂಬಳ್ಳಿ ವೆಂಕಟರಮಣ ದೇಗುಲದ ಬ್ರಹ್ಮಕಲಶೋತ್ಸವ; ಮುಖ್ಯಮಂತ್ರಿ ಭೇಟಿ
ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿ ತಾಲ್ಲೂಕಿನ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಳೆ (ಜ. 18) ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಭಾಗವಹಿಸಲಿದ್ದಾರೆ ಎಂದು ದೇವಳದ ಆಡಳಿತ ಮೊಕ್ತೇಸರ ಹಾಗೂ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ. ದೇಗುಲದದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ಕ್ಕೆ ಧರ್ಮಸಭೆ ನಡೆಯಲಿದೆ. ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಆಶೀರ್ವಚನ ನೀಡಲಿದ್ದಾರೆ. ದೇವಳದ ತಂತ್ರಿ ಪಾಡಿಗಾರು ವಾಸುದೇವ ತಂತ್ರಿ ಶುಭಸಂದೇಶ ನೀಡುವರು. ಧಾರ್ಮಿಕ […]
ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಚಕ್ರಾಬ್ಜ ಮಂಡಲ ಪೂಜೆ
ಉಡುಪಿ: ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ಪಾಡಿಗಾರು ವಾಸುದೇವ ತಂತ್ರಿ ಮತ್ತು ಕುಕ್ಕಿಕಟ್ಟೆ ರಾಮಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಚಕ್ರಾಬ್ಜ ಮಂಡಲ ಪೂಜೆ ನೆರವೇರಿತು. ಆಡಳಿತ ಮೊಕ್ತೇಸರ ಶಾಸಕ ರಘುಪತಿ ಭಟ್ ಸಂಕಲ್ಪ ನೆರವೇರಿಸಿದರು.
ಉಡುಪಿ: ನಾಳೆ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ; ಮುಖ್ಯಮಂತ್ರಿ ಯಡಿಯೂರಪ್ಪ ಆಗಮನ
ಉಡುಪಿ: ಉಡುಪಿಯ ಅತ್ಯಂತ ಪ್ರಾಚೀನ ದೇಗುಲಗಳಗಳಲ್ಲಿ ಒಂದಾಗಿರುವ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ (ಜ. 18) ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಗಮಿಸಲಿದ್ದು, ಅಂದು ಸಂಜೆ ದೇಗುಲದ ಆವರಣದಲ್ಲಿ ನಡೆಯುವ ಧರ್ಮಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿರುವರು. ಈ ಹಿಂದೆ 2004 ರಲ್ಲಿ ಮತ್ತು2010 ರಲ್ಲಿ ವಿವಿಧ ಜೀರ್ಣೋದ್ಧಾರ ಕಾರ್ಯಗಳನ್ನು ರಾಜ್ಯ ಸರಕಾರ ಮತ್ತು ಊರ ಪರವೂರ ಭಕ್ತಾಭಿಮಾನಿಗಳ ಸಹಕಾರದಲ್ಲಿ ನೆರವೇರಿಸಿ ವೈಭವದ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಗಿತ್ತು . ಅದರಲ್ಲೂ 2010 ರಲ್ಲಿ ಬ್ರಹ್ಮಕಲಶೋತ್ಸವದೊಂದಿಗೆ ನಡೆದ […]
ಬೈರಂಪಳ್ಳಿ: ಶ್ರಮಿಕ ತರುಣರ ತಂಡದ ಉದ್ಘಾಟನಾ ಸಮಾರಂಭ
ಉಡುಪಿ: ಶ್ರಮಿಕ ತರುಣರ ತಂಡದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಸರಕಾರಿ ಕಿರಿಯ ಶಾಲೆಯ ನ್ಯು ಕಲ್ಲಾಳ ಬೈರಂಪಳ್ಳಿಯಲ್ಲಿ ನಡೆಯಿತು. ಮುಖ್ಯ ಮಹಾಲಸ ನಾರಾಯಣಿ ದೇವಸ್ಥಾನದ ಧರ್ಮದರ್ಶಿ ಸುರೇಶ್ ಪೈ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ,ಶಶಿಕಲಾ ಪೂಜಾರಿ ಶಾಲಾ ಮುಖ್ಯೋಪಾಧ್ಯಾಯ ಉಮೇಶ್ ನಾಯಕ್ ಗ್ರಾ.ಪಂ ಸದಸ್ಯ ಸಂತೋಷ ಕುಮಾರ್ ಬೈರಂಪಳ್ಳಿ, ಶ್ರಮಿಕ ತರುಣರ ತಂಡದ ವಿಜಯಕುಮಾರ್ ,ರಾಜು ಪೂಜಾರಿ, ಬೈರಂಪಳ್ಳಿಯ ಗ್ರಾ.ಪಂ ಮಾಜಿ ಅಧ್ಯಕ್ಷೆ ವಿಜಯ ಭಟ್ ಉಪಸ್ಥಿತರಿದ್ದರು. ಆನಂದ ಪೂಜಾರಿ ಸ್ವಾಗತಿಸಿ […]
ಶ್ರವಣದೋಷವುಳ್ಳ ವಿಕಲಚೇತನ ವ್ಯಕ್ತಿಗಳಿಗೆ ಹೊಲಿಗೆ ಯಂತ್ರ ವಿತರಣೆ: ಅರ್ಜಿ ಆಹ್ವಾನ
ಉಡುಪಿ, ಜ.15: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ, ಜಿಲ್ಲೆಯಲ್ಲಿ ಕನಿಷ್ಟ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡಿರುವ ಹಾಗೂ ವೃತ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿರುವ ಶೇ.40 ಮತ್ತು ಅದಕ್ಕಿಂತ ಹೆಚ್ಚಿನ ಶ್ರವಣದೋಷವುಳ್ಳ ವಿಕಲಚೇತನ ವ್ಯಕ್ತಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜನವರಿ 30 ರ ಒಳಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ ರಜತಾದ್ರಿ, ಮಣಿಪಾಲ ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ […]