ಮಣಿಪಾಲ: ಸ್ವಾಮೀಜಿಗಳಿಂದ ಪವಿತ್ರ ಸ್ವರ್ಣಾ ನದಿ ಸ್ನಾನ

ಉಡುಪಿ: ಮಣಿಪಾಲ ಪೆರಂಪಳ್ಳಿ ಸಮೀಪದ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಇಂದು ಪವಿತ್ರ ಸ್ವರ್ಣಾ ನದಿ ಸ್ನಾನ ನೆರವೇರಿತು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಲಿಮಾರು ವಿದ್ಯಾಧೀಶತೀರ್ಥ ಶ್ರೀಪಾದರು, ಸೋದೆ ಮಠದ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀಪಾದರು ತೀರ್ಥಸ್ನಾನ ಮಾಡಿ ಸ್ವರ್ಣಾರತಿ ಬೆಳಗಿದರು. ಬೆಳಗ್ಗಿನಿಂದಲೇ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಮಂಡ್ಯ , ಚಿತ್ತೂರು ( ಆಂಧ್ರ) ಕೋಲಾರ ಪ್ರದೇಶಗಳಿಂದ ಆಗಮಿಸಿದ ನೂರಾರು ಭಕ್ತರು ಹಾಗೂ ಸ್ಥಳೀಯರು ಪವಿತ್ರ ನದೀ ಸ್ನಾನದಲ್ಲಿ […]
ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಯಾರಿಗೆಲ್ಲ ಒಲಿಯಲಿದೆ ಮಂತ್ರಿಪಟ್ಟ?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ (ಜ. 13) ಸಂಜೆ 4 ಗಂಟೆಯೊಳಗೆ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾಗುವವರಿಗೆ ಇಂದು ಸಂಜೆಯೊಳಗೆ ಮಾಹಿತಿ ನೀಡುತ್ತೇವೆ. ನಾಳೆ ಸಂಜೆ 4ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಸರ್ಕಾರ ರಚನೆಯಲ್ಲಿ ನಿರ್ಣಯಕ ಪಾತ್ರ ನಿರ್ವಹಿಸಿದ ನೀಡಿದ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ […]
ಕಾರು ಅಪಘಾತ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಪತ್ನಿ, ಪಿಎ ಮೃತ್ಯು: ಸಚಿವರು ಸಹಿತ ನಾಲ್ವರಿಗೆ ಗಂಭೀರ ಗಾಯ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಸಮೀಪ ಸೋಮವಾರ ಸಂಭವಿಸಿರುವ ಭೀಕರ ಅಪಘಾತದಲ್ಲಿ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯಾ ನಾಯಕ್ ಹಾಗೂ ಆಪ್ತ ಕಾರ್ಯದರ್ಶಿ ದೀಪಕ್ ದುಬೆ ಮೃತಪಟ್ಟಿದ್ದು, ಸಚಿವ ಶ್ರೀಪಾದ್ ಸಹಿತ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿ ಶ್ರೀಪಾದ ನಾಯಕ್, ಅವರ ಪತ್ನಿ ವಿಜಯಾ ನಾಯಕ್, ದೀಪಕ್ ದುಬೆ, ಗನ್‌ಮ್ಯಾನ್ ತುಕಾರಾಂ ಪಾಟೀಲ, ಸಾಯಿ ಕಿರಣ ಶೇಟಿಯಾ ಪ್ರಯಾಣಿಸುತ್ತಿದ್ದರು. ಸೂರಜ್ ನಾಯ್ಕ ಕಾರು ಚಲಾಯಿಸುತ್ತಿದ್ದರು. ಯಲ್ಲಾಪುರದ […]
ಉಡುಪಿ: ಬಿಜೆಪಿ ‘ಜನಸೇವಕ ಸಮಾವೇಶ’ ಇಂದು

ಉಡುಪಿ: ರಾಜ್ಯ ಬಿಜೆಪಿಯ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಉಡುಪಿ ಜಿಲ್ಲಾಮಟ್ಟದ ‘ಜನಸೇವಕ ಸಮಾವೇಶ’ ಇಂದು (ಜ.12) ಬೆಳಿಗ್ಗೆ 10.30ಕ್ಕೆ ಉಡುಪಿಯ ಪುತ್ತೂರು-ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜನಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್, ರಾಜ್ಯ ರೈತ ಮೋರ್ಚಾ […]