ಮಂಚಿ: ಹೊಸ ವಿದ್ಯುತ್ ತಂತಿ ಹಾಕಿಸಿಕೊಟ್ಟು ವೃದ್ಧ ದಂಪತಿಯ ಆತಂಕ ದೂರಾಗಿಸಿದ ಗ್ರಾಪಂ ಸದಸ್ಯ ಸುಧೀರ್ ಪೂಜಾರಿ

ಮಂಚಿ: 80ನೇ ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಅಶಕ್ತ ವೃದ್ಧ ದಂಪತಿಯ ಮನೆಗೆ ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯ ಸುಧೀರ್ ಪೂಜಾರಿಯವರು ಹೊಸ ವಿದ್ಯುತ್ ತಂತಿ (ಸರ್ವಿಸ್ ಲೈನ್) ಯನ್ನು ಹಾಕಿಸಿಕೊಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದಾರೆ. ಈ ವೃದ್ಧ ದಂಪತಿಯ ಮನೆಯ ವಿದ್ಯುತ್ ಸಂಪರ್ಕದ ತಂತಿಯು ತುಂಡಾಗಿ ಬೀಳುವ ಪರಿಸ್ಥಿತಿಗೆ ತಲುಪಿದ್ದು, ಈ ಬಗ್ಗೆ ಹಿಂದಿನ ಸದಸ್ಯರಲ್ಲಿ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ನೂತನವಾಗಿ ಆಯ್ಕೆಗೊಂಡ ಸದಸ್ಯ […]

ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಸಚಿವ ಈಶ್ವರಪ್ಪ ಭೇಟಿ‌

ಉಡುಪಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಶಾಸಕ ಅರವಿಂದ ಲಿಂಬಾವಳಿ ಮಂಗಳವಾರ ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ‌ನೀಡಿ ದೇವರ‌ ದರ್ಶನ‌ ಪಡೆದರು. ಶಾಸಕ‌ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿದರು. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಗಿರಿಧರ ಆಚಾರ್ಯ, ಯಶ್ಪಾಲ್ ಸುವರ್ಣ ಪಾಡಿಗಾರು, ವಾಸುದೇವ ತಂತ್ರಿ, ಪಂಜ ಭಾಸ್ಕರ ಭಟ್, ದಿವಾಕರ ಐತಾಳ್ ರಮೇಶ ಬಾರಿತ್ತಾಯ, ಪೆರಂಪಳ್ಳಿ ವಾಸುದೇವ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಸ್ವರ್ಣಾರತಿ ಅಪೂರ್ವ ಕಾರ್ಯಕ್ರಮ; ಸ್ವರ್ಣಾನದಿಗೆ ಆರತಿ ಬೆಳಗಿದ ಪೇಜಾವರ ಶ್ರೀಪಾದರು

ಉಡುಪಿ: ಮಣಿಪಾಲ ಪೆರಂಪಳ್ಳಿ ಸಮೀಪ ಶೀಂಬ್ರ ಸ್ವರ್ಣಾ ನದಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಆರತಿ ಬೆಳಗಿಸುವ ಮೂಲಕ ಸ್ವರ್ಣಾರತಿ ಅಪೂರ್ವ ಕಾರ್ಯಕ್ರಮ ಇಂದು ನೆರವೇರಿತು. ಸ್ವರ್ಣೆಯ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಘಟಕದ ಚಿಂತನೆಯೊಂದಿಗೆ ನಡೆದ ಸ್ವರ್ಣಾರತಿ ಕಾರ್ಯಕ್ರಮದಲ್ಲಿ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶೇಷ ಆರತಿಗಳನ್ನು ಬೆಳಗಿ ಸ್ವರ್ಣೆಯ ರಕ್ಷಣೆಗೆ ಕಂಕಣಬದ್ಧರಾಗುವಂತೆ ಉಡುಪಿಯ ಸಮಸ್ತ ಜನತೆಗೆ ಕರೆ ನೀಡಿದರು. ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ […]

‘ಕೌನ್ ಬನೇಗಾ ಕರೋಡ್ ಪತಿ’ಗೆ ರವಿ ಕಟಪಾಡಿ ಆಯ್ಕೆ: ಜ.15ಕ್ಕೆ ಕಾರ್ಯಕ್ರಮ ಪ್ರಸಾರ

ಉಡುಪಿ: ಹಿಂದಿಯ ಸೋನಿ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಿ ಅಮಿತಾ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮಕ್ಕೆ ಕರಾವಳಿಯ ಪ್ರತಿಭೆ ರವಿ ಕಟಪಾಡಿ ಅವರು ಆಯ್ಕೆಯಾಗಿದ್ದಾರೆ. ರವಿ ಕಟಪಾಡಿಯ ಮಾನವೀಯ ಕೆಲಸ ಗುರುತಿಸಿ ಅವರನ್ನು ಈ ಕಾರ್ಯಕ್ರಮಕ್ಕೆ ವಾಹಿನಿ ಆಯ್ಕೆಮಾಡಿದೆ. ಜನವರಿ 15ರಂದು ಸೋನಿ ವಾಹಿನಿಯಲ್ಲಿ ರವಿಯವರ ಕಾರ್ಯಕ್ರಮ ಪ್ರಸಾರ ಆಗಲಿದೆ. ಒಂದು ವಾರದ ಹಿಂದೆ ರವಿ ಅವರಿಗೆ ಸೋನಿ ಟಿವಿಯಿಂದ ಕರೆ ಬಂದಿದ್ದು, ಈ ವೇಳೆ ರವಿ ಅವರು ನನ್ನಿಂದ ಆಗಲ್ಲವೆಂದು ಹೇಳಿದ್ದರು. […]

ಪ್ರಧಾನಿ ಮೋದಿಯವರ ಕನಸು ಸಕಾರಗೊಳಿಸಿ: ಜನಸೇವಕ್ ಸಮಾವೇಶದಲ್ಲಿ ಸಿ.ಟಿ. ರವಿ ಕರೆ

ಉಡುಪಿ: ನಾವು ಪ್ರಧಾನಿ ಮೋದಿ ಅವರ ಕನಸು ಸಕಾರಗೊಳಿಸಬೇಕು. ಹಾಗಾಗಿ ಅವರ ಪ್ರತಿರೂಪದಂತೆ ನಾವು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಇಂದು ನಡೆದ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದರು. ಪಕ್ಷದ ಸಿದ್ದಾಂತಕ್ಕೆ ನಾವು ಬದ್ಧರಾಗಿರಬೇಕು. ಜನರು ನಮ್ಮ ಕರ್ತವ್ಯದ ಮೂಲಕ ಮೋದಿ ಅವರನ್ನು ನೋಡುತ್ತಾರೆ. ಹಾಗಾಗಿ ನಾವು ಮೋದಿ ಅವರ ಪ್ರತಿರೂಪವಾಗಿ ಕೆಲಸ ಮಾಡಬೇಕು ಎಂದು […]