ಸಪ್ತೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅದಮಾರು ಶ್ರೀ ಚಾಲನೆ
ಉಡುಪಿ: ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ಸಪ್ತೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪರ್ಯಾಯ ಅದಮಾರು ಈಶಪ್ರಿಯತೀರ್ಥ ಶ್ರೀಪಾದರು ಚಾಲನೆ ನೀಡಿದರು. ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಕೊರಂಗ್ರಪಾಡಿ ವಿದ್ವಾನ್ ಸೀತಾರಾಮ ಆಚಾರ್ಯ, ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ನಾಗರತ್ನ ರಾವ್, […]
ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ನ ನವೀಕೃತ ಉಚ್ಚಿಲ ಶಾಖೆ ಉದ್ಘಾಟನೆ; ಎಟಿಎಂ ಅನಾವರಣ
ಉಡುಪಿ: ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಉಡುಪಿ ಇದರ ನವೀಕೃತ ಉಚ್ಚಿಲ ಶಾಖೆ ಹಾಗೂ ನೂತನ ಎಟಿಎಂ ಶನಿವಾರ ಉದ್ಘಾಟನೆಗೊಂಡಿತು. ಭಾರತೀಯ ರಿಸರ್ವ್ ಬ್ಯಾಂಕಿನ ನಿದೇರ್ಶಕ ಸತೀಶ್ ಕಾಶೀನಾಥ ಮರಾಠೆ ನವೀಕೃತ ಶಾಖೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಕನಸು ನನಸುಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಅದರ ಮೊದಲ ಭಾಗವಾಗಿ ಮೀನುಗಾರಿಕಾ […]
ಮಹಿಳೆಯರಿಗೊಂದು ಆಶಾಕಿರಣ ಉಡುಪಿಯ ಈ ತರಬೇತಿ ಸಂಸ್ಥೆ :ಆಸಕ್ತರು ಇಂದೇ ಇಲ್ಲಿ ಸೇರಿ
ಉಡುಪಿಯ ಶ್ರೀ ಶಾರದ ಟೀಚರ್ ಟ್ರೈನಿಂಗ್ಇನ್ಸ್ಟಿಟ್ಯೂಟ್ ಮಹಿಳೆಯರ ಪಾಲಿಗೆ ಆಶಾಕಿರಣ, ಮಹಿಳೆಯರ ಬದುಕಿಗೊಂದು ಸ್ಪೂರ್ತಿ. ಹೌದು ವಿದ್ಯಾರ್ಥಿನಿಯರ, ಯುವತಿಯರ/ಮಹಿಳೆಯರ ಉಜ್ವಲ ಭವಿಷ್ಯದ ಆಶಾಕಿರಣವಾದ ನರ್ಸರಿ / ಮಾಂಟೆಸ್ಸರಿ ಶಿಕ್ಷಕಿಯರ ಒಂದು ವರ್ಷದ ತರಬೇತಿಯನ್ನು ಉಡುಪಿಯ ಶ್ರೀ ಶಾರದ ಟೀಚರ್ ಟ್ರೈನಿಂಗ್ಇನ್ಸ್ಟಿಟ್ಯೂಟ್ ಭಾರತ್ ಸೇವಕ್ ಸಮಾಜದ ಆಶ್ರಯದಲ್ಲಿ ನಡೆಸುತ್ತಿದೆ. ಈ ಅವಧಿಯಲ್ಲಿ, ಪ್ರಾಯೋಗಿಕಜ್ಞಾನ, ಸುಸ್ಥಾಪಿತ ಶಾಲೆಯಲ್ಲಿ ತರಬೇತಿ, ಪಠ್ಯಕ್ರಮದ ಯೋಜನೆ, ಧ್ವನಿಶಾಸ್ತ್ರ, ಮಲ್ಟಿಮೀಡಿಯಾ ಆಧಾರಿತ ಬೋಧನೆಯ ತರಬೇತಿ, ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿ ಮುಂತಾದ ವಿಷಯಗಳ ಬಗ್ಗೆ […]
ಇಂಡೋನೇಷ್ಯಾದ ಶ್ರೀವಿಜಯ ಡೊಮೆಸ್ಟಿಕ್ ವಿಮಾನ ಪತನ: 62 ಮಂದಿ ದುರ್ಮರಣ
ನವದೆಹಲಿ: 62 ಮಂದಿ ಪ್ರಯಾಣಿಸುತ್ತಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್ ಎಸ್ ಜಿ 182 ಎಂಬ ಡೊಮೆಸ್ಟಿಕ್ ವಿಮಾನವು ಪತನಗೊಂಡಿದೆ. ಶನಿವಾರ ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಿಂದ ಟೇಕ್ಆಫ್ ಆದ ಕೆಲ ಹೊತ್ತಿನಲ್ಲೇ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಇದೀಗ ಆ ವಿಮಾನ ಸಮುದ್ರದಲ್ಲಿ ಪತನಗೊಂಡಿದೆ ಎಂದು ತಿಳಿದುಬಂದಿದೆ. ಆರು ಮಕ್ಕಳು ಸಹಿತ 62 ಮಂದಿ ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಹಂತದ ಮಾಹಿತಿ ಲಭಿಸಿದೆ. ವಿಮಾನವು ಸ್ಫೋಟಗೊಂಡಿದ್ದು, ಅದರ ಭಾಗಗಳು ಛಿದ್ರಗೊಂಡಿದೆ. ರಕ್ಷಣಾ ಪಡೆಯ ಸಿಬ್ಬಂದಿಗೆ ಅದರ ಅವಷೇಶಗಳು […]
ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ: ಕುಂದಾಪುರ ಮೂಲದ ದಂಪತಿ ಸಹಿತ ಮೂವರು ದುರ್ಮರಣ
ಶಿವಮೊಗ್ಗ: ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ದಂಪತಿ ಸಹಿತ ಮೂವರು ಮೃತಪಟ್ಟಿದ್ದು, ಒಂದೂವರೆ ವರ್ಷದ ಮಗು ಪವಾಡ ಸದೃಶವಾಗಿ ಬದುಕುಳಿದ ಘಟನೆ ತರೀಕೆರೆ ತಾಲೂಕಿನ ರಂಗೇನಹಳ್ಳಿ ಎಂಬಲ್ಲಿ ಇಂದು ಸಂಭವಿಸಿದೆ. ಮೃತರನ್ನು ಕಾರಿನ ಮಾಲೀಕ ಕುಂದಾಪುರ ಕಸಬಾಕೋಡಿಯ ನಾಗೆಂದ್ರ (28) ಹಾಗೂ ಅವರ ಸಂಬಂಧಿಕರಾದ ಅನಿಲ್ಕುಮಾರ್ ಹಾಗೂ ಅಶ್ವಿನಿ ದಂಪತಿ. ಅವರ ಒಂದೂವರೆ ವರ್ಷದ ಮಗು ಪವಾಡ ಸದೃಶವಾಗಿ ಬದುಕುಳಿದಿದೆ. ಇವರು ನಾಗೇಂದ್ರ ಅವರ ಕಾರಿನಲ್ಲಿ ಕುಂದಾಪುರದಿಂದ ಬೆಂಗಳೂರಿಗೆ ಹೊರಟಿದ್ದರು. ತರೀಕೆರೆ ತಾಲೂಕಿನ […]