ರಾಜಕೀಯ ಪ್ರವೇಶದಿಂದ ಹಿಂದೆ ಸರಿದ ಸೂಪರ್ ಸ್ಟಾರ್ ರಜನಿಕಾಂತ್.!

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭಿಸುವ ಮುನ್ಸೂಚನೆ ನೀಡಿದ್ದ ಸೂಪರ್​ಸ್ಟಾರ್​ ರಜನಿಕಾಂತ್​ ಅವರು ದಿಢೀರ್ ಆಗಿ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ರಜನಿ ಸದ್ಯಕ್ಕೆ ರಾಜಕೀಯ ಪ್ರವೇಶ ಇಲ್ಲ. ಹೊಸ ಪಕ್ಷ ಸ್ಥಾಪನೆಯನ್ನು‌ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿ: ಬಾಲಕನೊಬ್ಬನ ಮೇಲೆ ಹೆಜ್ಜೇನು ದಾಳಿ

ಉಡುಪಿ: ಬಾಲಕನೊಬ್ಬನಿಗೆ ಜೇನು ನೊಣ ದಾಳಿ ನಡೆಸಿದ ಘಟನೆ ಇಂದು ಉಡುಪಿಯ ಚಿಟ್ಪಾಡಿ ಎಂಬಲ್ಲಿ ಸಂಭವಿಸಿದ್ದು, ಜೇನು ನೊಣಗಳ ದಾಳಿಯಿಂದ ಬಾಲಕ ಅಸ್ವಸ್ಥಗೊಂಡಿದ್ದಾನೆ ಎನ್ನಲಾಗಿದೆ. ಬಾಗಲಕೋಟೆ ಮೂಲದ ಪುಂಡಲೀಕ ಎಂಬಾತ ಜೇನು ನೊಣಗಳ‌ ದಾಳಿಗೆ ಒಳಗಾದ ಬಾಲಕ. ಈತ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಜೇನು ನೊಣಗಳ ದಾಳಿಯಿಂದ ಅಸ್ವಸ್ಥಗೊಂಡಿದ್ದ ಆತನನ್ನು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  

ಎರಡನೇ ಟೆಸ್ಟ್: ಭಾರತಕ್ಕೆ 8 ವಿಕೇಟ್ ಗಳ ಭರ್ಜರಿ ಜಯ; ಸರಣಿ ಸಮಬಲ

ಮೇಲ್ಬರ್ನ್: ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ. ನಾಲ್ಕನೇ ದಿನದಾಟದ ಅಂತಿಮ ಇನ್ನಿಂಗ್ಸ್ ನಲ್ಲಿ 70 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಆರಂಭದಲ್ಲೇ ಮಯಾಂಕ್ ಅಗರ್ ವಾಲ್ (5) ಮತ್ತು ಚೇತೇಶ್ವರ ಪೂಜಾರ (3) ರನ್ ಗಳಿಗೆ ಓಟ್ ಆಗುವ ಮೂಲಕ ಆರಂಭಿಕ ಆಘಾತ […]

ಉಡುಪಿ: ಬಹುದಿನಗಳ ನಂತರ ಮತ್ತೆ ರಂಗ ಚಟುವಟಿಕೆ ಆರಂಭ

ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ ಸ್ತಬ್ದವಾಗಿದ್ದ ರಂಗ ಚಟುವಟಿಕೆ ಉಡುಪಿಯಲ್ಲಿ ಮತ್ತೆ ಆರಂಭವಾಯಿತು. ಮಣಿಪಾಲದ ನಿರ್ಮಿತಿ ಕೇಂದ್ರದ ಸುಂದರ ಪರಿಸರದಲ್ಲಿ ಭಾನುವಾರ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಪರ್ಕಳ, ನಿರ್ಮಿತಿ ಕೇಂದ್ರ, ಮಣಿಪಾಲ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಸಹಕಾರ ದೊಂದಿಗೆ ಶಿಲ್ಪಾ ಜೋಶಿಯವರ ಏಕವ್ಯಕ್ತಿ ರಂಗಪ್ರಯೋಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಭಾವಗೀತೆಗಳ ಭಾವಸಂಜೆಯಲ್ಲಿ ಉಡುಪಿಯ ಕಲಾವಿದರಾದ ರೇಖಾ ಸಾಮಗ, ಡಾ. ಪ್ರತಿಮಾ, ಡಾ. ಪ್ರಜ್ಞಾ ಮಾರ್ಪಳ್ಳಿ ಹಾಗೂ ರಂಜನಿ ಸುಂದರ […]

ರಾಜ್ಯಕ್ಕೂ ಎಂಟ್ರಿ ಕೊಟ್ಟ ರೂಪಾಂತರಿ ವೈರಸ್

ಬೆಂಗಳೂರು: ರಾಜ್ಯಕ್ಕೂ ರೂಪಾಂತರಿ ವೈರಸ್ ಎಂಟ್ರಿಕೊಟ್ಟಿದೆ. ಬೆಂಗಳೂರಿನಲ್ಲಿ ಮೂವರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ. ಬ್ರಿಟನ್ ನಿಂದ ಬಂದಿರುವ ಮೂರು ಮಂದಿಯಲ್ಲಿ ಹೊಸ ಪ್ರಭೇದದ ಸೋಂಕು ಕಾಣಿಸಿಕೊಂಡಿದೆ. ದೇಶಾದ್ಯಂತ ಒಟ್ಟು ಆರು ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಮೂರು, ಹೈದರಾಬಾದ್ ನಲ್ಲಿ ಎರಡು ಹಾಗೂ ಪುಣೆಯಲ್ಲಿ ಒಂದು ಕೇಸ್ ಪತ್ತೆಯಾಗಿದೆ.