ಹೆಬ್ರಿಯ ಗಿಲ್ಲಾಳಿಯಲ್ಲಿ ಪೇಜಾವರ ಮಠದ ನಾಲ್ಕನೇ ಗೋಶಾಲೆ ಆರಂಭಿಸಲು ಭರದ ಸಿದ್ಧತೆ
ಉಡುಪಿ: ಗೋರಕ್ಷಣೆಯ ಮೌನಕ್ರಾಂತಿಯನ್ನು ನಡೆಸುತ್ತಿರುವ ಶ್ರೀ ಪೇಜಾವರ ಮಠವು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಗಿಲ್ಲಾಳಿಯಲ್ಲಿ ತನ್ನ ನಾಲ್ಕನೇ ಗೋಶಾಲೆ ಆರಂಭಿಸಲು ಸಿದ್ಧತೆ ನಡೆಸಿದೆ. ಹೆಬ್ರಿಯ ಪ್ರಸಿದ್ಧ ವೈದಿಕ ಮನೆತನವಾಗಿರುವ ರಾಘವೇಂದ್ರ ಆಚಾರ್ಯ ಮತ್ತು ಕುಟುಂಬಸ್ಥರು ದಾನವಾಗಿ ನೀಡಿರುವ 7 ಎಕರೆ ಮತ್ತು ರಾಮಕೃಷ್ಣ ಆಚಾರ್ಯ ಎಂಬವರು ನೀಡಿರುವ 2 ಎಕರೆ ಸೇರಿ ಒಟ್ಟು 9 ಎಕರೆ ಸುಂದರ ಪ್ರಾಕೃತಿಕ ಸೊಬಗಿನ ಭೂಮಿಯಲ್ಲಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯನ್ನು ಆರಂಭಿಸಲು ಸಕಲ ಸಿದ್ಧತೆ ಭರದಿಂದ ಸಾಗಿದೆ. ಈ ಸಂಬಂಧ […]
ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ವಾಜಪೇಯಿ ಜನ್ಮ ದಿನಾಚರಣೆ
ಕಾರ್ಕಳ: ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಮಾಜಿ ಪ್ರದಾನಿ ಅಟಿಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಡಿ. 25ರಂದು ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ವಹಿಸಿ ಅಟಲ್ ಅವರು ತಮಗೆ ಸ್ಪೂರ್ತಿಯಾಗಿರುವ ಕುರಿತು ಮಾತನಾಡಿದರು. ಪೂರ್ಣಿಮಾ ಸಿಲ್ಕ್ ನ ರವಿ ಪ್ರಕಾಶ್ ಪ್ರಭು ದಂಪತಿ ಅವರ ಕಾರ್ಯವನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಉದ್ಯಮಿ ಟಿ. ರಾಮಚಂದ್ರ ನಾಯಕ್ ಅವರು ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿಯವರು ಕಾರ್ಕಳಕ್ಕೆ […]
ಯುವಕರಿಬ್ಬರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು
ಉಳ್ಳಾಲ: ಇಲ್ಲಿನ ಕುತ್ತಾರು ಕೃಷ್ಣಕೋಡಿ ಎಂಬಲ್ಲಿ ನಿನ್ನೆ ತಡರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಹಾಗೂ ಪಂಡಿತ್ ಹೌಸ್ ನಿವಾಸಿ ಪವನ್(27) ಎಂದು ಗುರುತಿಸಲಾಗಿದೆ. ಈ ಇಬ್ಬರು ತಮ್ಮ ಸಹೋದರರನ್ನು ಕರೆತರಲು ಬೈಕ್ ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳಿಬ್ಬರು ಬೈಕ್ ಡಿಕ್ಕಿ ಹೊಡೆದು ಬಳಿಕ ಯುವಕರಿಗೆ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ […]
ಕಾರ್ಕಳ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ವಾಜಪೇಯಿ ಜನ್ಮದಿನಾಚರಣೆ
ಕಾರ್ಕಳ: ಇಲ್ಲಿನ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಸಚೇತಕ ಹಾಗೂ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ವಾಜಪೇಯಿ ಅವರ ಆಡಳಿತ ಭಾರತದ ಸುವರ್ಣ ಯುಗ. ಅವರು ಜಾರಿಗೆ ತಂದ ಗ್ರಾಮ ಸಡಕ್ ಯೋಜನೆ, ಸುಜಲಧಾರ ಯೋಜನೆ ಮೂಲಕ ದೇಶದ ಹಳ್ಳಿ ಹಳ್ಳಿಗಳನ್ನು ಅಭಿವೃದ್ಧಿಪಡಿಸಿದರು. ಎಲ್ಲ ಪಕ್ಷದವರನ್ನು ಗೌರವದಿಂದ ಕಾಣುತ್ತಿದ್ದ […]
ಬಾಕ್ಸಿಂಗ್ ಡೇ ಟೆಸ್ಟ್: ಭಾರತದ ಮಾರಕ ದಾಳಿಗೆ ಆಸ್ಟ್ರೇಲಿಯಾ ತತ್ತರ
ಮೆಲ್ಬರ್ನ್: ಭಾರತದ ಬೌಲರ್ ಗಳ ಮಾರಕ ದಾಳಿಗೆ ಆತಿಥೇಯ ಆಸ್ಟ್ರೇಲಿಯಾ ತಂಡ ತತ್ತರಿಸಿದ್ದು, 195 ರನ್ ಗೆ ತನ್ನ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿದೆ. ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಮೂರು, ವೇಗಿ ಜಸ್‌ಪ್ರೀತ್ ಬೂಮ್ರಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಭಾರತದ ಎದುರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 72.3 ಓವರ್‌ಗಳಲ್ಲಿ 195 ರನ್ ಗಳಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ […]