ಉಡುಪಿಯ ಖ್ಯಾತ ಛಾಯಾಗ್ರಾಹಕ ಫೋಕಸ್ ರಾಘು ಅವರಿಗೆ ಅಂತಾರಾಷ್ಟ್ರೀಯ EFIAP  Distinction ಗೌರವ

ಉಡುಪಿ: ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದಲ್ಲಿ 85ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಂಗ ಸಂಸ್ಥೆಯನ್ನು ಹೊಂದಿರುವ UNESCO ಮಾನ್ಯತೆ ಪಡೆದ ವಿಶ್ವದ ಏಕೈಕ ಸಂಸ್ಥೆಯಾದ FIAP (Federation International de l’Art Photographique ) ವತಿಯಿಂದ ಕೊಡಲ್ಪಡುವ ‘ಅಂತಾರಾಷ್ಟ್ರೀಯ EFIAP  Distinction ಗೌರವ’ ಉಡುಪಿಯ ಖ್ಯಾತ ಛಾಯಾಗ್ರಾಹಕ ಫೋಕಸ್ ರಾಘು ಅವರಿಗೆ ಲಭಿಸಿದೆ. ಈ ಗೌರವ ಲಭಿಸಲು 20ಕ್ಕೂ ಅಧಿಕ ದೇಶಗಳಲ್ಲಿ ಚಿತ್ರಗಳು ಪ್ರದರ್ಶನಗೊಂಡಿರಬೇಕು. ಕನಿಷ್ಠ ಹೊರಗಿನ 2 ದೇಶಗಳಲ್ಲಾದರೂ ಪ್ರಶಸ್ತಿ ಬಂದಿರಬೇಕು ಮತ್ತು ಕನಿಷ್ಠ 250 ಚಿತ್ರಗಳು […]

ಅಂತರ್ಧಮೀಯ ಯುವತಿಯೊಂದಿಗೆ ಪಾದ್ರಿ ಪರಾರಿ.!

ಬಳ್ಳಾರಿ: ಚರ್ಚ್ ವೊಂದರ ಧರ್ಮ ಸಂದೇಶ ನೀಡಬೇಕಿದ್ದ ಪಾದ್ರಿಯೊಬ್ಬರು ಅಂತರ್ಧಮೀಯ ಯುವತಿಯೊಂದಿಗೆ ಪರಾರಿಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಯುವತಿಯೊಂದಿಗೆ ಪರಾರಿಯಾದ ಪಾದ್ರಿಯನ್ನು ರವಿಕುಮಾರ್ (54) ಎಂದು ಗುರುತಿಸಲಾಗಿದ್ದು, ಈತ 24 ವರ್ಷದ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಅನ್ಯ ಧರ್ಮದ ಯುವತಿ ಇಂಜಿನಿಯರಿಂಗ್ ಮುಗಿಸಿದ್ದಳು. ಧರ್ಮ ಬೇರೆ ಆದರೂ ಸ್ನೇಹಿತೆ ಜೊತೆ ಪ್ರತಿ ಭಾನುವಾರ ಚರ್ಚ್​ಗೆ ಹೋಗುತ್ತಿದ್ದಳು ಎನ್ನಲಾಗಿದೆ. ಆಗ ಪಾದ್ರಿಯೊಂದಿಗೆ ಯುವತಿಗೆ ಆತ್ಮೀಯತೆ ಬೆಳೆದಿದ್ದು, ಈ ಸ್ನೇಹವನ್ನೆ ಎನ್ ಕ್ಯಾಶ್ ಮಾಡಿಕೊಂಡ ಪಾದ್ರಿ ಮದುವೆಯಾಗುವುದಾಗಿ […]

ಕನಸು ಕ್ರಿಯೇಷನ್ಸ್ ನ ತುಳುಲಿಪಿ ಲಾಂಛನ ಬಿಡುಗಡೆ

ಉಡುಪಿ: ಕನಸು ಕ್ರಿಯೇಷನ್ಸ್ ಸಂಸ್ಥೆಗೆ ಆರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಸ್ಥೆಯ ತುಳುಲಿಪಿ ಲಾಂಛನವನ್ನು ‘ಶಕಲಕ ಬೂಮ್ ಬೂಮ್’ ತುಳು ಮತ್ತು ಕನ್ನಡ ಚಿತ್ರದ ನಿರ್ಮಾಪಕ ನಿತ್ಯಾನಂದ ನರಸಿಂಗೆ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಸಂಸ್ಥೆಯ ಮುಂದಿನ ಯೋಜನೆಗಳು ಯಶಸ್ಸು ಕೀರ್ತಿಯನ್ನು ಸಾಧಿಸಲಿ ಎಂದು ತಂಡದ ಸದಸ್ಯರೆಲ್ಲರಿಗೂ ಶುಭಾಶಯ ಕೋರಿದರು.

ಸ್ವ ಉದ್ಯೋಗದಿಂದ ಉತ್ತಮ ಬದುಕು ರೂಪಿಸಲು ಸಾಧ್ಯ: ಮಂಜುನಾಥ್ ಮಣಿಪಾಲ

ಉಡುಪಿ: ದೇಶದಲ್ಲಿ ತಾಂತ್ರಿಕ ಕೌಶಲ್ಯತೆಗೆ ಭವಿಷ್ಯ ಉಜ್ವಲವಾಗಿದ್ದು, ದುಡಿಯುವ ಕೈಗಳಿಗೆ ಪ್ರಸ್ತುತ ನೂರಾರು ಕ್ಷೇತ್ರಗಳು ಕೈ ಬೀಸಿ ಕರೆಯುತ್ತಿವೆ ಎಂದು ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಹೇಳಿದರು. ಅವರು ಶುಕ್ರವಾರ ಮಣಿಪಾಲ ಕೆನರಾ ಬ್ಯಾಂಕ್ ಗ್ರಾಮೀಣ ತರಬೇತಿ ಸಂಸ್ಥೆಯಲ್ಲಿ ಮೊಬೈಲ್ ಫೋನ್ ರಿಪೇರಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಸರಕಾರಗಳು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಹೊಸ ಉದ್ದಿಮೆಗಳನ್ನು ಸ್ಥಾಪಿಸಬಹುದು. ಆ ಮೂಲಕ ತಮ್ಮ ಬದುಕನ್ನು […]

ವಾಜಪೇಯಿ ದೇಶದ ಪ್ರಗತಿಗೆ ಶ್ರಮಿಸಿದ ಮಹಾನ್ ನಾಯಕ: ಕುಯಿಲಾಡಿ

ಉಡುಪಿ: ಜಾಗತಿಕವಾಗಿ ಭಾರತವು ತನ್ನ ಛಾಪನ್ನು ವಿಶೇಷವಾಗಿ ಮೂಡಿಸಬೇಕಾದರೆ ಆರ್ಥಿಕ ಹಾಗೂ ರಾಜಕೀಯದ ಜೊತೆಗೆ ಸಾಮಾಜಿಕವಾಗಿ ಕೂಡ ಅಭಿವೃದ್ಧಿ ಹೊಂದುವ ಅವಶ್ಯಕತೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರು ಮನಗಂಡಿದ್ದರು. ತಮ್ಮ ಸುದೀರ್ಘ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಜೀವನದಲ್ಲಿ ದೇಶವನ್ನು ಸಾಮಾಜಿಕವಾಗಿ ಪ್ರಗತಿ ಪಥದತ್ತ ಕೊಂಡೊಯ್ಯುವ ಚಿಂತನೆಗಳನ್ನು ಅಳವಡಿಸಿಕೊಂಡಿದ್ದರು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆಯ ಅಂಗವಾಗಿ […]