ಮಂಗಳೂರು: 9 ವರ್ಷದ ಬಾಲಕ ಸಹಿತ ಕಾರನ್ನು ಹೊತ್ತೊಯ್ದ ಸಂಚಾರಿ ಪೊಲೀಸರು.!

ಮಂಗಳೂರು: 9 ವರ್ಷದ ಬಾಲಕ ಸಹಿತ ಕಾರನ್ನು ಎತ್ತುಕೊಂಡು ಹೋದ (ಟೋಯಿಂಗ್ ) ಘಟನೆ ಮಂಗಳೂರು ನಗರದಲ್ಲಿ ಗುರುವಾರ ನಡೆದಿದೆ. ಮಿಜಾರಿನ ದಿವ್ಯಾ ಅವರ 9 ವರ್ಷದ ಮಗ ಪ್ರಖ್ಯಾತ್ ಹಾಗೂ ಕಾರನ್ನು ಸಂಚಾರಿ ಪೊಲೀಸರು ಟೋಯಿಂಗ್ ಮಾಡಿದ್ದರು. ದಿವ್ಯಾ ಅವರು ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಲ್ಲಿಕಟ್ಟೆಗೆ ಬಂದಿದ್ದರು. ಕಾರನ್ನು ವಸತಿ ಸಮುಚ್ಚಯವೊಂದರ ಪಕ್ಕದಲ್ಲಿ ನಿಲ್ಲಿಸಿ ದಿವ್ಯಾ ಮತ್ತು ಅವರ ಓರ್ವ ಮಗ ಅಂಗಡಿಗೆ ತೆರಳಿದ್ದರು. ಚಾಲಕ ಮತ್ತು ದಿವ್ಯಾ ಅವರ ಕಿರಿಯ ಪುತ್ರ […]
ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿ ನಾಪತ್ತೆ

ಕಡಬ: ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ನಾಪತ್ತೆ ಆದ ಘಟನೆ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದ ಬಾಲಕಿಯನ್ನು ಐತ್ತೂರು ಗ್ರಾಮದ ಬೆತ್ತೋಡಿ ನಿವಾಸಿ ಜಗದೀಶ ಎಂಬವರ ಪುತ್ರಿ ನರ್ಮದಾ ಬಿ.ಜೆ (16) ಎಂದು ಗುರುತಿಸಲಾಗಿದೆ. ಈಕೆ ಮರ್ದಾಳದ ಹೈಸ್ಕೂಲ್ ವಿದ್ಯಾರ್ಥಿನಿ. ಬುಧವಾರ ಶಾಲೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ತೆರಳಿದ್ದಳು. ಆದರೆ ಮನೆಗೆ ಬಾರದೆ ಇದ್ದಾಗ ಮನೆಯವರು ಶಾಲೆ ಅಧ್ಯಾಪಕರನ್ನು ವಿಚಾರಿಸಿದ್ದಾರೆ. ಆಗ ಅಧ್ಯಾಪಕರು ಶಾಲೆಗೆ […]
ಕಾಪು: ದನದ ಕೊಟ್ಟಿಗೆಯಲ್ಲಿ ಭಾರಿ ಗಾತ್ರದ ಮೂರು ಹೆಬ್ಬಾವು ಪತ್ತೆ

ಕಾಪು: ಇಲ್ಲಿನ ಪಾಂಗಾಳದ ನಿವಾಸಿ ಆಲ್ವಿನ್ ಪ್ರಕಾಶ್ ಮನೆಯ ದನದ ಕೊಟ್ಟಿಗೆಯಲ್ಲಿ ನಿನ್ನೆ ಸಂಜೆ ಮೂರು ಹೆಬ್ಬಾವುಗಳು ಪತ್ತೆಯಾಗಿವೆ. ಮನೆಯವರು ಕೂಡಲೇ ಮುನ್ನ ಕಾಪು ಅವರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಮುನ್ನ ನೇತೃತ್ವದ ತಂಡದವರು ಹೆಬ್ಬಾವುಗಳನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಮಾಧವ ಪೂಜಾರಿ, ಸತೀಶ್, ಸಂದೀಪ್, ಉಮೇಶ್, ಪ್ರಕಾಶ್ ಅಲ್ವಿನ್, ಜಾರ್ಜ್ ಮತ್ತು ರವಿ ಬಿಂದಾಸ್, ಅಲ್ವಿನ್ ಹೆಬ್ಬಾವುಗಳನ್ನು ಹಿಡಿಯಲು ಸಹಕರಿಸಿದರು.