ಟೆರೇಸ್ ಮೇಲಿಂದ ಬಿದ್ದು ಯುವಕ ಮೃತ್ಯು
ವಿಟ್ಲ: ಇಲ್ಲಿನ ಕೇಪು ಕುಕ್ಕೆಬೆಟ್ಟು ಎಂಬಲ್ಲಿ ಟೆರೇಸ್ ನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಕೊತ್ತಲಮಜಲು ನಿವಾಸಿ ದಿ. ವಿಶ್ವನಾಥ ಆಚಾರ್ಯ ಅವರ ಪುತ್ರ ಪ್ರಸಾದ್ ಆಚಾರ್ಯ ಎಂದು ಗುರುತಿಸಲಾಗಿದೆ. ಈತ ಕುಕ್ಕೆಬೆಟ್ಟುವಿನ ಸಂಬಂಧಿಕಯೊಬ್ಬರ ಮನೆಯಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದನು. ನಿನ್ನೆ ತಡರಾತ್ರಿ ಮನೆಯ ಟೆರೇಸ್ ಮೇಲೆ ಫೋನ್ ನಲ್ಲಿ ಮಾತನಾಡುತ್ತಿದ್ದು, ಈ ವೇಳೆ ಏಕಾಏಕಿಯಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಇದರಿಂದ ತಲೆಗೆ ಗಂಭೀರ ಗಾಯವಾಗಿದ್ದು, […]
ಡಿ. 26ರಂದು ಮೀನು ಮಾರಾಟ ಫೆಡರೇಷನ್ ವತಿಯಿಂದ ಪ್ರತಿಭಾ ಪುರಸ್ಕಾರ-ಅಭಿನಂದನಾ ಸಮಾರಂಭ: ಯಶ್‍ಪಾಲ್ ಸುವರ್ಣ
ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ವತಿಯಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗರ ಸಭೆ, ತಾಲೂಕು ಪಂಚಾಯತ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಡಿಸೆಂಬರ್ 26ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಮಲ್ಪೆ ಏಳೂರು ಮೊಗವೀರ ಸಭಾಭವನದಲ್ಲಿ ನಡೆಯಲಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಮಾರಂಭವನ್ನು ಉದ್ಘಾಟಿಸುವರು. ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ […]
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ವೃದ್ಧಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ
ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿಯಿಂದ ಬ್ರಹ್ಮಾವರ ಕರುಣಾಲಯ ವೃದ್ಧಾಶ್ರಮದಲ್ಲಿ ಗುರುವಾರ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಕೇಕ್ ಕತ್ತರಿಸುವುದರ ಮೂಲಕ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ರೊಬರ್ಟ್ ಮಿನೇಜಸ್ ನೆರವೇರಿಸಿ ಮಾತನಾಡಿ, ದೇವರು ಮನುಷ್ಯ ರೂಪದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಅವರ ಜನನ ಅಸಾ ಮಾನ್ಯ. ಅವರು ಹುಟ್ಟಿ ಬೆಳೆ ದ ರೀತಿ ಅವರ ನಡೆ ನುಡಿ, ವ್ಯಕ್ತಿತ್ವ ಯುಗಾ ಯುಗಾಂತರಕ್ಕೂ ಪ್ರೇರಣೆಯಾಗಿದೆ. ಅವರ ಸಂಪೂರ್ಣ ಜೀವನ ಬಡಬಗ್ಗರ, ದೀನ ದಲಿತರ, ಶೋಷಿತ ವರ್ಗದ ಜನರಿಗೋಸ್ಮರ […]
ಶೃಂಗೇರಿ ಹುಡುಗಿ ಶಾಶ್ವತಿ ಹೆಚ್ ಎಸ್ ಬಿಡಿಸಿದ ರಂಗು ರಂಗಿನ ಚಿತ್ರಗಳು
ಶಾಶ್ವತಿ ಹೆಚ್.ಎಸ್, ಮಲೆನಾಡಿನ ಚೆಂದದ ಊರಾದ ಶೃಂಗೇರಿಯ ಹುಡುಗಿ. ಇವರಿಗೆ ಚಿತ್ರ ಬಿಡಿಸುವುದೆಂದರೆ ನೆಚ್ಚಿನ ಹವ್ಯಾಸ. ಇವರು ಬಿಡಿಸಿದ ಚಿತ್ರಗಳಲ್ಲಿ ನಿಸರ್ಗದ ಸಹಜ, ಸರಳ ಮಾಧುರ್ಯವಿದೆ. ಆಡಂಬರವಿಲ್ಲದೆ ಅತ್ಯಂತ ಸಹಜತೆಯಿಂದ ಕಂಗೊಳಿಸುವ ಶಾಶ್ವತಿ ಬಿಡಿಸಿದ ಚಿತ್ರಗಳು ಶಾಶ್ವತವಾಗಿ ಕಲಾರಸಿಕರ ಗಮನ ಸೆಳೆಯುವಂತಿದೆ. ಸದ್ಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಶಾಶ್ವತಿ ಅವರಿಗೆ ಚಿತ್ರಕಲೆಯ ಜೊತೆಗೆ ಸಂಗೀತ,ಗಾರ್ಡನಿಂಗ್ ಮತ್ತು ಫೋಟೋಗ್ರಫಿ ಖುಷಿ ಕೊಡುವ ಹವ್ಯಾಸಗಳು.ಇವರ ಕೈಯಲ್ಲರಳಿದ ಕೆಲವು ಚಿತ್ರಗಳ ಸ್ಯಾಂಪಲ್ಲು ಇಲ್ಲಿದೆ ನೋಡಿ.
ಕುಂದಾಪುರ: ಕಾರಿನೊಂದಿಗೆ ಚಾಲಕ ನಾಪತ್ತೆ
ಕುಂದಾಪುರ: ಇಲ್ಲಿನ ಕುಂಭಾಶಿ ಗ್ರಾಮದ ವಕ್ವಾಡಿ ರಸ್ತೆ ನಿವಾಸಿ ಅರುಣ್ ಕಲ್ಗುಜ್ಜಿಕರ್ ಅವರ ಕಾರು ಚಾಲಕ ಭರತ್ ಡಿಸೆಂಬರ್ 22ರಿಂದ ಕಾರಿನೊಂದಿಗೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಅರುಣ್ ಅವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭರತ್ ಡಿ.22 ರಂದು ಯಾರಿಗೂ ಮಾಹಿತಿ ನೀಡದೆ ಕುಂಬಾಶಿಯ ತಮ್ಮ ಮನೆಯಿಂದ ಕಾರಿನೊಂದಿಗೆ ತೆರಳಿದ್ದು, ಈವರೆಗೂ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.