ಕೇಂದ್ರ ಸರ್ಕಾರ ಬಡವರ ಹಕ್ಕು ಕಸಿದುಕೊಂಡಿದೆ: ರಾಹುಲ್ ಗಾಂಧಿ ಆರೋಪ
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಇದು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಕಿಡಿಕಾರಿದ್ದಾರೆ. ದೇಶದ ಉತ್ತಮ ಭವಿಷ್ಯಕ್ಕಾಗಿ, ನಾವು ಎಲ್ಲ ವರ್ಗದ ಜನರ ಹಕ್ಕುಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ನೂತನ ಸಂಸತ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಪ್ರಧಾನಿ
ನವದೆಹಲಿ: ದೆಹಲಿಯಲ್ಲಿ ನಿರ್ಮಿಸಲಾಗುವ ನೂತನ ಸಂಸತ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೂಮಿಪೂಜೆ ನೆರವೇರಿಸಿದರು. ಶೃಂಗೇರಿ ಮಠದ ಪುರೋಹಿತರು ಭೂಮಿಪೂಜೆಗೆ ಸಂಬಂಧಿಸಿದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸಂಪುಟದ ಸಚಿವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಹಲವು ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 900 ರಿಂದ 1200 ಸಂಸತ್ ಸದಸ್ಯರು ಕುಳಿತುಕೊಳ್ಳುವಂತಹ ಸಾಮರ್ಥ್ಯವಿರುವ ಈ ಭವನದ ಒಟ್ಟು ವಿಸ್ತೀರ್ಣ 64,500 ಚದರ ಮೀಟರ್. ₹971 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸಂಸತ್ ಭವನದ ನಿರ್ಮಾಣ […]
ಅಂಬಲಪಾಡಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ನಡೆದ ಗ್ರಾಮ ಪಂಚಾಯತ್ ಚುನಾವಣೆ ಸಮಾಲೋಚನಾ ಸಭೆಯಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಪೂಜಾರಿ ಅಂಬಲಪಾಡಿ ಸದಾನಂದ ಕಾಂಚನ್ ಬಂಕರ್‍ಕಟ್ಟೆ, ದಾಮೋದರ್ ಕುಂದರ್, ದಯಾನಂದ ಪೂಜಾರಿ, ಕರುಣಾಕರ್, ಚಂದ್ರಶೇಖರ್ ಇವರ ನೇತೃತ್ವದಲ್ಲಿ ಸಾಯಿನಾಥ್ ಕೋಟ್ಯಾನ್, ನವೀನ್ ಸುವರ್ಣ, ಶ್ರೀಧರ್, ಗಣೇಶ್ ಪೂಜಾರಿ, ಅಶೋಕ್ ಆಚಾರ್ಯ, ಪ್ರಶಾಂತ್ ಕುಂದರ್, ವಿವೇಕಾನಂದ, ರಾಜೇಶ್ ಆಚಾರ್ಯ, ವಿನ್ಯಾಸ, ವಿನುತ್, ಪ್ರಜ್ವಲ್, ಪ್ರಸನ್ನ, […]
ಶಿರೂರು ಶ್ರೀಗಳು ತೆರಿಗೆ ವಂಚಿಸಿಲ್ಲ; ಸೋದೆ ಶ್ರೀಗಳ ಆರೋಪ ನಿರಾಧಾರ- ಭಕ್ತ ಸಮಿತಿ ಸ್ಪಷ್ಟನೆ
ಉಡುಪಿ: ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರು ಯಾವುದೇ ತೆರಿಗೆ ವಂಚನೆ ಮಾಡಿಲ್ಲ. ಶಿರೂರು ಶ್ರೀಗಳು ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಇಟ್ಟಿದ್ದರು ಎಂಬ ಸೋದೆ ಮಠದ ವಿಶ್ವವಲ್ಲಭ ಶ್ರೀಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಸತ್ಯಕ್ಕೆ ದೂರವಾದುದು ಎಂದು ಶಿರೂರು ಮಠದ ಭಕ್ತ ಸಮಿತಿ ಹೇಳಿದೆ. ಶಿರೂರು ಶ್ರೀಗಳ ಆಡಳಿತ ಅವಧಿಯಲ್ಲಿ 2017-2018ರ ವರೆಗೆ ಎಲ್ಲಾ ರೀತಿಯ ತೆರಿಗೆ ಪಾವತಿಯ ವಿವರ ಮತ್ತು ಪ್ರತಿಗಳು ಲಭ್ಯವಿದೆ. ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ ಕೂಡಲೇ […]
ನೂತನ ವೈದ್ಯಕೀಯ ಪದ್ದತಿಗೆ ವೈದ್ಯರ ವಿರೋಧ: ಡಿ. 11ರಂದು ಓಪಿಡಿ ಸೇವೆ ಬಂದ್
ಉಡುಪಿ: ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅವಕಾಶ ನೀಡಿ ಕೇಂದ್ರ ಸರಕಾರ ಗಜೆಟ್ ನೋಟಿಫಿಕೇಶನ್ ಹೊರಡಿಸಿರುವುದನ್ನು ವಿರೋಧಿಸಿ ಅಲೋಪತಿ ವೈದ್ಯರು ಡಿಸೆಂಬರ್ 11ರಂದು ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲಾ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ. ವೈದ್ಯಕೀಯ ವ್ಯವಸ್ಥೆಯನ್ನು ಮಿಶ್ರಗೊಳಿಸುವುದನ್ನು ಭಾರತೀಯ ವೈದ್ಯಕೀಯ ಸಂಘ ತೀವ್ರವಾಗಿ ಖಂಡಿಸುತ್ತದೆ. ಇದು ಕೇವಲ ವೃತ್ತಿಯ ವಿಷಯವಲ್ಲ. ಇದು ಆರೋಗ್ಯ ರಕ್ಷಣೆ ಮತ್ತು ವಿತರಣಾ ವ್ಯವಸ್ಥೆಯ ಮೇಲೆ ಗಂಭೀರವಾದ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಸಂಘ […]