ಬಾಗಿಲು ಮುಚ್ಚಿದ ಸಹಕಾರಿ ಬ್ಯಾಂಕ್

ಮುಂಬೈ: ಅಗತ್ಯ ಪ್ರಮಾಣದ ಬಂಡವಾಳ ಇಲ್ಲದ ಕಾರಣ ‘ದಿ ಕರಾಡ್ ಜನತಾ ಸಹಕಾರಿ ಬ್ಯಾಂಕ್ ‘ಗೆ ನೀಡಿದ್ದ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ರದ್ದು ಮಾಡಿದೆ. ಪರವಾನಗಿ ರದ್ದಾಗಿರುವ ಕಾರಣ ಈ ಬ್ಯಾಂಕ್ ಇನ್ನು ಮುಂದೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ಬ್ಯಾಂಕ್‌ನಲ್ಲಿ ಹಣ ಠೇವಣಿ ಇರಿಸಿದ್ದ ಶೇ. 99ಕ್ಕಿಂತ ಹೆಚ್ಚಿನವರಿಗೆ ಪೂರ್ಣ ಮೊತ್ತವು ವಾಪಸ್ ಸಿಗಲಿದೆ ಎಂದು ಆರ್‌ಬಿಐ ತಿಳಿಸಿದೆ. ಈ ಬ್ಯಾಂಕ್ ಅಸ್ತಿತ್ವದಲ್ಲಿ ಇರುವುದು ಠೇವಣಿದಾರರ ಹಿತಕ್ಕೆ ಮಾರಕ. ಇದಕ್ಕೆ ಬ್ಯಾಂಕಿಂಗ್ […]
ತಮಿಳಿನ ಖ್ಯಾತ ನಟಿ ನೇಣಿಗೆ ಶರಣು

ಚೆನ್ನೈ: ತಮಿಳಿನ ಖ್ಯಾತ ನಟಿ ವಿಜೆ ಚಿತ್ರಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೂನಮಲ್ಲೆ ಠಾಣಾ ವ್ಯಾಪ್ತಿಯ ಹೋಟೆಲ್ ವೊಂದರ ಕೊಠಡಿಯಲ್ಲಿ ಚಿತ್ರಾ ಮೃತದೇಹ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಚಿತ್ರಾಗೆ ಚೆನ್ನೈ ಮೂಲದ ಹೇಮಂತ್ ಎಂಬುವವರ ಜೊತೆ ವಿವಾಹ ನಿಶ್ಚಯವಾಗಿತ್ತು. ಅಲ್ಲದೆ, ಮದುವೆ ನಿಶ್ಚಯವಾದಾಗಿನಿಂದ ಚಿತ್ರಾ ಹೇಮಂತ್ ಜೊತೆಯಲ್ಲೇ ಇದ್ದರು ಎನ್ನಲಾಗಿದೆ. ತಮಿಳು ಸಿನಿಮಾ ಹಾಗೂ ಕೆಲವು ಧಾರಾವಾಹಿಗಳಲ್ಲಿ ಚಿತ್ರಾ ನಟಿಸಿದ್ದಾರೆ. ಪೂನಮಲ್ಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳಿಗೆ ಬಿಸಿಯೂಟದ ಬದಲು ಅಡುಗೆ ಎಣ್ಣೆ, ತೊಗರಿ ಬೇಳೆ ವಿತರಣೆ

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟದ ಬದಲು ಮಕ್ಕಳಿಗೆ ಆಹಾರ ಧಾನ್ಯ ಒದಗಿಸಲು ಡಿಸೆಂಬರ್ 5ರಂದೇ ಆದೇಶ ಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದು ಕೆಜಿ ಅಯೊಡೈಸ್ಡ್ ಉಪ್ಪು, ತೊಗರಿ ಬೇಳೆ ಮತ್ತು ಅಡುಗೆ ಎಣ್ಣೆಯನ್ನು ಐದು ತಿಂಗಳ ಲೆಕ್ಕಾಚಾರದಲ್ಲಿ (ಆಗಸ್ಟ್– 2020ರಿಂದ ಏಪ್ರಿಲ್–2021 ತನಕ ಅನ್ವಯವಾಗಲಿದೆ) ವಿತರಿಸಲಾಗುವುದು ಎಂದು ತಿಳಿಸಿದೆ. ಕೋವಿಡ್ ಕಾರಣದಿಂದ ಆರು ತಿಂಗಳ ಕಾಲ ಮಕ್ಕಳು ಈ ಯೋಜನೆಯಿಂದ ವಂಚಿತರಾಗಿದ್ದು, ಅದನ್ನು ಸರಿದೂಗಿಸಲು ಸೂಕ್ತ […]