ಭಾರತ್ ಬಂದ್ ಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ: ಕರಾವಳಿಗೆ ತಟ್ಟದ ಬಂದ್ ಬಿಸಿ
ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತರು ನೀಡಿರುವ ಭಾರತ್ ಬಂದ್‍ಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್, ಜೆಡಿಎಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ,ರೈತರ ಹೋರಾಟಕ್ಕೆ, ಜೆಡಿಎಸ್, ಎನ್ಸಿಪಿ, ಶಿವಸೇನೆ, ಆಮ್ ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್),ಭಾರತೀಯ ರಾಷ್ಟ್ರೀಯ ಲೋಕ ದಳ, ಬಿಎಸ್ ಪಿ ಹಾಗೂ ಎಡ ಪಕ್ಷಗಳು ಬೆಂಬಲ ಸೂಚಿಸಿವೆ. ರೈತ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಬಂದ್ ನಲ್ಲಿ ಭಾಗಿಯಾಗಿವೆ. ಕರ್ನಾಟದ್ಲಲೂ ಭಾರತ್ […]
ಉಡುಪಿ: ಬಾಲಕರಿಬ್ಬರ ಅಪಹರಣದ ಶಂಕೆ; ದೂರು ದಾಖಲು
ಉಡುಪಿ: ಡಿಸೆಂಬರ್ 3ರಂದು ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ಆಡುತ್ತಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿದ್ದು, ಅಪಹರಣಕ್ಕೊಳಗಾಗಿರಬಹುದು ಎಂಬ ಶಂಕೆ ವ್ಯಕ್ತಿವಾಗಿದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾಗಿರುವ ಬಾಲಕರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆಯ ನಿವಾಸಿ ನಾಗರಾಜ ಎಂಬವರ ಮಗ ಸಂತೋಷ (11) ಹಾಗೂ ನಾಗರಾಜ ಅವರ ಪತ್ನಿಯ ತಂಗಿ ಮಂಗಳರ ಎಂಬವರ ಪುತ್ರ ವಿಷ್ಣು (9) ಎಂದು ಗುರುತಿಸಲಾಗಿದೆ. ಶಾಲೆ ರಜೆ ಇದ್ದ ಕಾರಣ ಸಂತೋಷ್, ಮಂಗಳರ ಜೊತೆಗೆ […]
ಉದ್ಯಾವರ: ಮಕ್ಕಳಿಗಾಗಿ ಜಾದೂ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ
ಉದ್ಯಾವರ: ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ನೇತೃತ್ವದಲ್ಲಿ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಭಾಭವನದಲ್ಲಿ ಸುವರ್ಣ ಮಹೋತ್ಸವ ವರ್ಷದ 35ನೇ ಕಾರ್ಯಕ್ರಮ ಮಕ್ಕಳಿಗಾಗಿ ಜಾದೂ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯು ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕಟಪಾಡಿಯ ಬಾಲ ಜಾದೂಗಾರ ಮಾಸ್ಟರ್ ಪ್ರಥಮ್ ಕಾಮತ್ ಜಾದೂ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಧರ್ಮಗುರುಗಳಾದ ರೊಲ್ವಿನ್ ಅರಾನ್ಹ, ಐಸಿವೈಎಂ ಸುವರ್ಣಮಹೋತ್ಸವದ ಅಧ್ಯಕ್ಷರಾದ ಮೈಕಲ್ ಡಿಸೋಜ ಸ್ಟೀವನ್ ಕುಲಸೋ, ಕಾರ್ಯಕ್ರಮದ ಪ್ರಾಯೋಜಕರು […]
ಶಿಕ್ಷಣ ತಜ್ಞ, ಹಿರಿಯ ಪತ್ರಕರ್ತ ಕೆ. ದಾಮೋದರ ಐತಾಳ್ ನಿಧನ
ಉಡುಪಿ: ಶಿಕ್ಷಣ ತಜ್ಞ, ಹಿರಿಯ ಪತ್ರಕರ್ತ, ಬಳಕೆದಾರರ ವೇದಿಕೆಯ ವಿಶ್ವಸ್ಥ ಕೆ. ದಾಮೋದರ ಐತಾಳ್ ನಿಧನ (85) ಅವರು ಇಂದು ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅನೇಕ ವರ್ಷಗಳ ಕಾಲ ನಾಡಿನ ವಿವಿಧ ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಪ್ರಾಧ್ಯಾಪಕ , ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ಕನ್ನಡ ಪ್ರಭ ಪತ್ರಿಕೆಯ ಉಡುಪಿ ಜಿಲ್ಲಾ ವರದಿಗಾರರಾಗಿ, ಹೊಸದಿಗಂತ ಪತ್ರಿಕೆಯಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಉಡುಪಿ ಬಳಕೆದಾರ ವೇದಿಕೆ ವಿಶ್ವಸ್ಥ, […]