ಗೋ ಹತ್ಯೆ ನಿಷೇಧ, ಲವ್‌ ಜಿಹಾದ್‌ ತಡೆ ಕಾನೂನು ಜಾರಿಗೆ ಬಿಜೆಪಿ ಕಾರ್ಯಕಾರಣಿಯಲ್ಲಿ ನಿರ್ಣಯ: ನಳಿನ್

ಬೆಳಗಾವಿ: ಲವ್‌ ಜಿಹಾದ್‌ ತಡೆ ಕಾನೂನು ಜಾರಿಗೊಳಿಸುವುದರ ಜತೆಗೆ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ತರಲು ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮುಂದಿನ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ತಿಳಿಸಿದರು. ಬೆಳಗಾವಿಯಲ್ಲಿ ಶನಿವಾರ ನಡೆದ ಕಾರ್ಯಕಾರಿಣಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲವ್ ಜಿಹಾದ್ ಎನ್ನುವುದು ಬಹಳ ಆತಂಕದ ವಿಷಯ. ಪ್ರೀತಿ–ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡಿದ ಹಲವು ಪ್ರಕರಣಗಳು ವರದಿಯಾಗಿವೆ. ಹೀಗಾಗಿ, […]

ಮುಂದಿನ ಉತ್ತರಾಯಣದಲ್ಲಿ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ: ಸೋದೆ ಶ್ರೀ

ಉಡುಪಿ: ಮುಂದಿನ ಉತ್ತರಾಯಣದಲ್ಲಿ ಶಿರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಸೋದೆ ಮಠಾಧೀಶ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಿರೂರು ಮಠಕ್ಕೆ ಯೋಗ್ಯ ವಟುವನ್ನು ಆಯ್ಕೆ ಮಾಡಿದ್ದೇವೆ. ಆತನಿಗೆ ವೇದಾಭಾಸ್ಯಗಳ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಅಷ್ಟಮಠಗಳ ಹಿರಿಯ ಮಠಾಧೀಶರ ಪ್ರೋತ್ಸಾಹ, ಸಹಕಾರವಿದೆ. ಎಲ್ಲರೂ ಮನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಶಿರೂರು ಮಠ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನವೃಸ್ಥರಾದ ಮೇಲೆ ಮಠದ […]

ಶಿರೂರು ಮಠದ ಯಾವುದೇ ಸೊತ್ತು, ಆಸ್ತಿ ಮಾರಾಟ ಮಾಡಿಲ್ಲ: ಸೋದೆ ಶ್ರೀಪಾದರು

ಉಡುಪಿ: ಶಿರೂರು ಮಠದ ಯಾವುದೇ ಸೊತ್ತು, ಆಸ್ತಿಯನ್ನು ಮಾರಾಟ ಮಾಡಿಲ್ಲ ಅಥವಾ ಪರಭಾರೆ ಮಾಡಿಲ್ಲ. ಮಠಕ್ಕೆ ಬರುವ ಆದಾಯದಿಂದಲೇ ಎಲ್ಲ ಖರ್ಚುವೆಚ್ಚಗಳನ್ನು ಸರಿದೂಗಿಸಲಾಗುತ್ತಿದೆ. ಇದರಲ್ಲಿ ಪೂರ್ತಿ ಪಾರದರ್ಶಕವಿದೆ. ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲ ಎಂದು ಸೋದೆ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ‌ ಹೇಳಿದರು. ಉಡುಪಿ ಶಿರೂರು ಮಠದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠಕ್ಕೆ ಸಂಬಂಧಿಸಿದ ಈ ಎಲ್ಲ ಕಾರ್ಯಗಳಿಗೆ ತಗುಲುವ ಖರ್ಚುವೆಚ್ಚಗಳನ್ನು ಶಿರೂರು ಮಠದ ಮಣಿಪಾಲದ ಕಟ್ಟಡ ಹಾಗೂ ಮಠದ ಸಮೀಪ ಇರುವ ವಾಣಿಜ್ಯ ಅಂಗಡಿಗಳಿಂದ […]

ಕಲ್ಸಂಕ ‘ಕನಕ ಮಾಲ್’ ವಿವಾದ ಸುಖಾಂತ್ಯ: ಜಂಟಿ ಅಭಿವೃದ್ಧಿ ಒಪ್ಪಂದದ ಆಧಾರದಲ್ಲಿ ಮಾಲ್ ಕಾಮಗಾರಿ ಪೂರ್ಣ

ಉಡುಪಿ: ಲಕ್ಷ್ಮೀವರರ್ತೀರ್ಥ ಶ್ರೀಪಾದರ ಕನಸಿನ ಯೋಜನೆಯಾಗಿದ್ದ ಕಲ್ಸಂಕದ ಕನಕ ಮಾಲ್ ಯೋಜನೆ ಕಡೆಗೂ ಪೂರ್ಣಗೊಳ್ಳುವ ಲಕ್ಷಣ ಗೋಚರಿಸಿದೆ. ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆಯ ಬಳಿಕ ಶಿರೂರು ಮಠದ ಸಂಪೂರ್ಣ ನಿರ್ವಹಣೆಯನ್ನು ವಹಿಸಿಕೊಂಡಿರುವ ಜಂಟಿ ಮಠ ಸೋದೆ ಮಠವು ಕನಕ ಮಾಲ್ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮಕೈಗೊಂಡಿದೆ. ಇಂದು ಉಡುಪಿ ಶಿರೂರು ಮಠದಲ್ಲಿ ಪಲಿಮಾರು ಮಠದ ವಿದ್ಯಾಧೀಶ ಶ್ರೀಪಾದರು ಹಾಗೂ ಸೋದೆ ಮಠದ ವಿಶ್ವವಲ್ಲಭ ಶ್ರೀಪಾದರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಠದ ಲೆಕ್ಕಪರಿಶೋಧಕ ಕೆ. ಗೌತಮ್ ಮಾಹಿತಿ ನೀಡಿದರು. ಮಾಲ್ ಬಗ್ಗೆ […]

ರಸ್ತೆ ದಾಟುತ್ತಿರುವಾಗ ಕಾರು ಡಿಕ್ಕಿ ಹೊಡೆದು ಬಾಲಕ ಮೃತ್ಯು

ಮಂಗಳೂರು: ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಉಳ್ಳಾಲ ಬೈಪಾಸ್ ಹೆದ್ದಾರಿಯಲ್ಲಿ ನಡೆದಿದೆ. ಉಳ್ಳಾಲದ ನಿವಾಸಿ ಬಶೀರ್ ಅಹ್ಮದ್ ಅವರ ಪುತ್ರ ಅಯಾನ್ ಮೃತಪಟ್ಟ ಬಾಲಕ. ಈತ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿರುವಾಗ ರಿಡ್ಜ್ ಕಾರು ಬಂದು ಆತನಿಗೆ ಡಿಕ್ಕಿ ಹೊಡೆದಿದೆ. ಅದರ ಪರಿಣಾಮ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.