ಮೀನುಗಾರಿಕಾ ಬೋಟ್ ದುರಂತ: ಆರು ಮಂದಿ ನಾಪತ್ತೆ

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಳಾರದ ಶ್ರೀರಕ್ಷಾ ಮೀನುಗಾರಿಕಾ ಬೋಟ್ ಸಮುದ್ರದ ದುರಂತಕ್ಕೀಡಾಗಿದ್ದು, ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಬೋಟ್‌ನಲ್ಲಿ 20 ಮೀನುಗಾರರಿದ್ದರು. ದುರಂತ ನಡೆದ ಬಳಿಕ 16 ಮಂದಿ ಡಿಂಗಿಯಲ್ಲಿ ಕುಳಿತು ದಡ ಸೇರಿದ್ದಾರೆ. ಉಳಿದ 6 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಕರಾವಳಿ ಕಾವಲು ಪಡೆಯ ಅಧಿಕಾರಿಗಳ ತಂಡ ಶೋಧ ಕಾರ್ಯ ಆರಂಭಿಸಿದೆ. ಬೋಟ್‌ನಲ್ಲಿ ಮೀನು ಲೋಡ್ ಅಧಿಕವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.ಆದರೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸದ್ದಿಲ್ಲದೆ ಸಮಾಜದ ಕಣ್ತೆರೆಸುತ್ತಿದೆ ‘ಪೊಕಾವಿ’ ತುಳು ಕಿರುಚಿತ್ರ.!

ಉಡುಪಿ: ಕಿರುಚಿತ್ರ ಎನ್ನುವುದು ಯಾವುದೇ ಸಾಮಾಜಿಕ ಸಂದೇಶವನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಪ್ರಬಲ ಮಾಧ್ಯಮವಾಗಿದೆ. ಇಲ್ಲೊಂದು ತಂಡ ಇದೇ ಮಾಧ್ಯಮ ಮೂಲಕ ಸಮಾಜಕ್ಕೆ ಅದ್ಭುತ ಸಂದೇಶ ನೀಡಿದೆ. ಎಸ್, ಧೀರಜ್ ಆಚಾರ್ಯ ಎರ್ಲಪಾಡಿ ಅವರು ನಟಿಸಿ, ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಪೊಕಾವಿ’ ತುಳು ಕಿರುಚಿತ್ರ ಸಮಾಜದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ. ಅಂಗವಿಕಲ ಯುವಕ, ಯುವತಿಯರಿಗೆ ಬದುಕು ನೀಡಿ (ಅಂಗವಿಕಲ ಅಣ್ ಪೊಣ್ಣುಲೆಗ್ ಲೈಫ್ ಕೊರ್ಲೆ) ಎಂಬ ಉದ್ದೇಶದಿಂದ ಈ ಕಿರುಚಿತ್ರವನ್ನು ನಿರ್ಮಿಸಲಾಗಿದೆ. ಸೌಂದರ್ಯ, ಹಣ, […]