ಉಡುಪಿ: ದೆಹಲಿ ರೈತರ ಹೋರಾಟ ಬೆಂಬಲಿಸಿ ಸಿಐಟಿಯುನಿಂದ ಪ್ರತಿಭಟನೆ
ಉಡುಪಿ: ರೈತ ವಿರೋಧಿ ಕೃಷಿ ಮತ್ತು ಭೂಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಮೋದಿ ಸರಕಾರ ನಡೆಸಿರುವ ದಾಳಿಯನ್ನು ಖಂಡಿಸಿ ಹಾಗೂ ರೈತರ ಹೋರಾಟವನ್ನು ಬೆಂಬಲಿಸಿ ಸಿಐಟಿಯು, ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ, ಅಖಿಲ ಭಾರತ ಕಿಸಾನ್ ಸಂಘದ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಿಐಟಿಯು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ […]
ಮಾಜಿ ಸಚಿವನ ಅಪಹರಣ: ₹ 30 ಕೋಟಿ ಬೇಡಿಕೆಯಿಟ್ಟ ದುಷ್ಕರ್ಮಿಗಳು
ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿ ₹30 ಕೋಟಿಗೆ ಬೇಡಿಕೆ ಇಡಲಾಗಿದ್ದು, ಈ ಬಗ್ಗೆ ವರ್ತೂರು ಪ್ರಕಾಶ್ ಅವರೇ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಲಾರದ ಬೆಗ್ಲಹೊಸಹಳ್ಳಿ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ನಿಂದ ಕಾರು ಚಾಲಕ ಸುನೀಲ್ ಸಮೇತ ಪ್ರಕಾಶ್ ಅವರನ್ನು, 8 ದುಷ್ಕರ್ಮಿಗಳ ತಂಡ ಅಪಹರಣ ಮಾಡಿತ್ತು. ನಂತರ, ಹಲ್ಲೆ ಸಹ ಮಾಡಿದೆ. ಬಿಡುಗಡೆಗೆ ₹30 ಕೋಟಿಗೆ ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದರು ಎಂದು ಪ್ರಕಾಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಿತ್ರಹಿಂಸೆ […]
ಕರಾವಳಿಯ ಸಂಸದರಿಂದ ಮೀನುಗಾರರಿಗೆ ಅನ್ಯಾಯ: ರಮೇಶ್ ಕಾಂಚನ್
ಉಡುಪಿ: ಸುವರ್ಣ ತ್ರಿಭುಜ ಬೋಟ್ ದುರಂತ ನಡೆದು ಎರಡು ವರ್ಷ ಸಂದಿದೆ. ಆದರೆ ದುರಂತದಲ್ಲಿ ಮೃತರಾದ ಏಳು ಮಂದಿ ಮೀನುಗಾರರ ಕುಟುಂಬಕ್ಕೆ ಕೇಂದ್ರ ಸರಕಾರದಿಂದ ನಯಾ ಪೈಸೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ತುಟಿಬಿಚ್ಚದ ಕರಾವಳಿಯ ಸಂಸದರ ವಿರುದ್ಧ ಕಾಂಗ್ರೆಸ್ ಮುಖಂಡ, ಉಡುಪಿ ನಗರ ಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೋಟ್ ದುರಂತ ನಡೆದು ಎರಡು ವರ್ಷ ಕಳೆದಿದೆ. ಆದರೆ ಈ ಘಟನೆಯ ಬಗ್ಗೆ ಯಾವುದೇ ಉನ್ನತಮಟ್ಟದ ತನಿಖೆಯಾಗಿಲ್ಲ. ಅಲ್ಲದೆ, ಮೀನುಗಾರರ […]
ಡಾ. ಸುಲತಾ ವಿ. ಭಂಡಾರಿ ಅವರಿಗೆ ಲಯನ್ಸ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಉಡುಪಿ: ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ನೀಡುವ ‘ಲಯನ್ಸ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಣಿಪಾಲ ಕೆಎಂಸಿಯ ನೇತ್ರ ತಜ್ಞೆ ಡಾ. ಸುಲತಾ ವಿ. ಭಂಡಾರಿ ಅವರಿಗೆ ನ. 28ರಂದು ಉಡುಪಿ ಲಯನ್ಸ್ ಭವನದಲ್ಲಿ ಪ್ರದಾನ ಮಾಡಲಾಯಿತು. ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವರ್ವಾಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಅವರು ತಮ್ಮ ಕನ್ನಡ ರಾಜ್ಯೋತ್ಸವ ಆಶಯ ಭಾಷಣದಲ್ಲಿ ಕನ್ನಡ ಭಾಷೆ ಮಾತನಾಡುವವರು ಹೆಮ್ಮೆ ಪಡಬೇಕಾದ ಅಗತ್ಯದ […]
ಬೋಟ್ ಮುಳುಗಡೆ ಪ್ರಕರಣ: ಇಬ್ಬರು ಮೀನುಗಾರರ ಶವ ಪತ್ತೆ, ಇನ್ನುಳಿದ ನಾಲ್ವರಿಗಾಗಿ ಮುಂದುವರಿದ ಶೋಧ
ಮಂಗಳೂರು: ಪಣಂಬೂರು ಸಮುದ್ರ ತೀರದಿಂದ ನಾಟಿಕಲ್ ಮೈಲು ದೂರದಲ್ಲಿ ಸಂಭವಿಸಿದ ಬೋಟ್ ಮುಳುಗಡೆ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರು ಮೀನುಗಾರರ ಮೃತದೇಹ ಮಂಗಳವಾರ ಮಧ್ಯಾಹ್ನದ ವೇಳೆ ಪತ್ತೆಯಾಗಿದೆ. ಉಳಿದ ನಾಲ್ವರಿಗಾಗಿ ಕರಾವಳಿ ಕಾವಲು ಪಡೆ ಹಾಗೂ ಮುಳುಗು ತಜ್ಞರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಶ್ರೀರಕ್ಷಾ ಹೆಸರಿನ ಪರ್ಸೀನ್ ಬೋಟ್ ನಲ್ಲಿ ಇಪ್ಪತ್ತು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಸೋಮವಾರ ತಡರಾತ್ರಿ ಮೀನು ತುಂಬಿಸಿಕೊಂಡು ಬಂದರಿಗೆ ಮರುಳುತ್ತಿದ್ದ ವೇಳೆ ಸಮುದ್ರದ ಮಧ್ಯೆ ಬೋಟ್ ಮುಳುಗಡೆಯಾಗಿ ದುರಂತ […]