ಕಾರ್ಕಳ: ಅಷ್ಟಮಂಗಲದಲ್ಲಿ ಪರ್ಪಲೆಗಿರಿ ಬೆಟ್ಟದ ಪೂರ್ವದಲ್ಲಿನ ಪುರಾತನ ಗುಹೆಯ ಉಲ್ಲೇಖ
ಕಾರ್ಕಳ: ಹಿಂದೂ ಜಾಗರಣ ವೇದಿಕೆ ಕಾರ್ಕಳ ಹಾಗೂ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿ ಪುನರುತ್ಥಾನದ ಅಂಗವಾಗಿ ಖ್ಯಾತ ದೈವಜ್ಞರಾದ ನಾರಾಯಣ ಪೊದುವಾಳ್ ಮತ್ತು ಹಿರಿಯ ಧಾರ್ಮಿಕ ಚಿಂತಕರಾದ ಹಿರಣ್ಯ ವೆಂಕಟೇಶ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಬೆಟ್ಟದ ಪೂರ್ವದಲ್ಲಿ ಇರುವ ಪುರಾತನ ಗುಹೆಯ ಉಲ್ಲೇಖವಾಗಿದೆ. ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಉಲ್ಲೇಖವಾದ ಬೆಟ್ಟದ ಪೂರ್ವ ಭಾಗದಲ್ಲಿರುವ ಗುಹೆಯ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಇಂದು ಭೇಟಿ ನೀಡಿದರು. ಅಷ್ಟಮಂಗಲದಲ್ಲಿ […]
ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಯುಗದ ಋಷಿ: ಯೋಗಗುರು ಬಾಬಾ ರಾಮ್ ದೇವ್
ಉಡುಪಿ: ಭಾರತದ ಧೀಮಂತ ಅಧ್ಯಾತ್ಮಿಕ ಪರಂಪರೆ ಮತ್ತು ಆರ್ಷ ಸಂಸ್ಕೃತಿಯ ಎಲ್ಲ ಶ್ರೇಷ್ಠ ಗುಣ ವಿಶೇಷಗಳ ಅಪೂರ್ವ ಸಂಗಮವಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇವಲ ಓರ್ವ ಸಾಮಾನ್ಯ ಸಂತರಾಗಿರದೇ ಯುಗದ ಋಷಿಗಳಾಗಿದ್ದರು ಎಂದು ಯೋಗ ಗುರು ಬಾಬಾ ರಾಮ್ ದೇವ್ ಬಣ್ಣಿಸಿದ್ದಾರೆ. ಶ್ರೀ ವಿಶ್ವೇಶತೀರ್ಥ ಸೇವಾ ಸಂಘದ ಸಂಯೋಜನೆಯಲ್ಲಿ ನಾಡಿನ ಅನೇಕ ಗಣ್ಯರಿಂದ ಶ್ರೀಗಳವರ ಒಡನಾಟಗಳನ್ನು ಸ್ಮರಿಸಿಕೊಳ್ಳುವ ಪ್ರಯುಕ್ತ ನಡೆಯುತ್ತಿರುವ ಶ್ರೀ ವಿಶ್ವೇಶ ವಿಶ್ವದರ್ಶನ ಎಂಬ ಆನ್ ಲೈನ್ ಉಪನ್ಯಾಸ ಸರಣಿಯಲ್ಲಿ ರಾಮ್ ದೇವ್ ಜೀ […]
ಕೋಟ: ಸ್ಕೂಟಿಗೆ ಕಾರು ಡಿಕ್ಕಿ; ಯುವತಿ ಮೃತ್ಯು
ಕೋಟ: ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದು, ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಕೋಟ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಭವನ ಹೋಟೆಲ್ ಬಳಿ ಶನಿವಾರ ಸಂಭವಿಸಿದೆ. ಮೃತಳನ್ನು ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ (24) ಎಂದು ಗುರುತಿಸಲಾಗಿದೆ. ಆಕೆಯ ಸ್ನೇಹಿತೆ ಕುಂದಾಪುರ ಕೋಡಿಯ ಪ್ರಜ್ಞಾ (25) ಗಂಭೀರ ಗಾಯಗೊಂಡಿದ್ದು, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದುಬಂದಿದೆ. ಇವರಿಬ್ಬರು ಕುಂದಾಪುರದಿಂದ ಉಡುಪಿ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ […]
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ನ ಶಕ್ತಿ: ಅಶೋಕ್ ಕುಮಾರ್ ಕೊಡವೂರು
ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ನ ಶಕ್ತಿ. ಅವರು ಓರ್ವ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದು, ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ ಪಾಲಿಗೆ “ಟ್ರಬಲ್ ಶೂಟರ್” ಎಂದೇ ಖ್ಯಾತರಾದವರು. ಪಕ್ಷವು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲೆಲ್ಲಾ ತನ್ನ ಹಿತವನ್ನು ಬದಿಗಿರಿಸಿ ಪಕ್ಷವನ್ನು ಗೆಲುವಿನ ಪಥದತ್ತ ಮುನ್ನಡೆಸುವ ಧೀಮಂತ ವ್ಯಕ್ತಿತ್ವ ಇವರದ್ದು. ಅಧಿಕಾರ ಇರಲಿ ಇಲ್ಲದಿರಲಿ ಡಿ.ಕೆ. ಶಿವಕುಮಾರ್ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುತ್ತಾರೆ. ತನ್ನ ಮೂರುವರೆ ದಶಕಗಳ ರಾಜಕೀಯ ಜೀವನದುದ್ದಕ್ಕೂ ಪಕ್ಷವಹಿಸಿದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ಶ್ರೇಯಸ್ಸು ಇವರದ್ದಾಗಿದೆ. […]
ಉಡುಪಿ: ನಾಳೆ (ನ. 29) ಕುಂಜಿಬೆಟ್ಟುವಿನಲ್ಲಿ ‘ಬಿಸಿನೆಸ್ ಬೇ ಸೆಂಟರ್’ ಕಾಂಪ್ಲೆಕ್ಸ್ ಉದ್ಘಾಟನೆ
ಉಡುಪಿ: ಇಲ್ಲಿನ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣಗೊಂಡ ಬಹು ಅಂತಸ್ತಿನ ‘ಬಿಸಿನೆಸ್ ಬೇ ಸೆಂಟರ್’ ಕಾಂಪ್ಲೆಕ್ಸ್ ನಾಳೆ (ನ. 29) ಶುಭಾರಂಭಗೊಳ್ಳಲಿದೆ. ಉಡುಪಿ ಶಾಸಕ ಕೆ. ರಘುಪತಿ ಭಟ್ ಬೆಳಿಗ್ಗೆ 11 ಗಂಟೆಗೆ ಕಾಂಪ್ಲೆಕ್ಸ್ ಅನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಉಜ್ವಲ್ ಡೆವಲಪರ್ಸ್ ನ ಪಿ. ಪುರುಷೋತ್ತಮ ಶೆಟ್ಟಿ, ಕ್ರೆಡೈ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್, ನಿವೃತ್ತ ಪೊಲೀಸ್ ಅಧಿಕಾರಿ ಎಂ.ಐ. ಜಮೀಲ್, ಮಂಗಳೂರು […]