ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ: ನಳಿನ್

ಉಡುಪಿ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅವರು ಕೇಂದ್ರದ ನಾಯಕರ ಜತೆ ಸಮಾಲೋಚನೆ ಮಾಡಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಉಡುಪಿಯ ಕಂಟ್ರಿ ಇನ್ ಹೋಟೆಲ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಅನುದಾನ, ಯೋಜನೆ ತರಲು ರಾಜ್ಯದ ಮಂತ್ರಿಗಳು ದೆಹಲಿಗೆ ನಿರಂತರ ಭೇಟಿ ನೀಡುವುದು ಸಹಜ. ಅಲ್ಲಿಗೆ ಹೋದಾಗ ಕೇಂದ್ರ ನಾಯಕರನ್ನು ಭೇಟಿಯಾಗುವುದು ಕೂಡ […]

ಮಂಗಳೂರು: ಆತಂಕ ಸೃಷ್ಟಿಸಿದ ‘ಲಷ್ಕರ್ ಜಿಂದಾಬಾದ್’ ಗೋಡೆ ಬರಹ

ಮಂಗಳೂರು: ಇಲ್ಲಿನ ಅಪಾರ್ಟ್‌ ಮೆಂಟ್‌ ಕಟ್ಟಡವೊಂದರ ಕಂಪೌಂಡ್‌ ಗೋಡೆ ಮೇಲೆ ‘ ಲಷ್ಕರ್ ಜಿಂದಾಬಾದ್’ ಎಂಬ ಉಗ್ರ ಸಂಘಟನೆಯನ್ನು ಬೆಂಬಲಿಸುವ ಬರಹಗಳು ಇಂದು ಕಂಡುಬಂದಿದ್ದು, ಆ ಮೂಲಕ‌ ಮತಾಂಧರು ಮತ್ತೆ ಮಂಗಳೂರಿನಲ್ಲಿ ಶಾಂತಿ ಕದಡಲು ಸಂಚು ರೂಪಿಸುತ್ತಿದ್ದಾರ ಎಂಬ ಶಂಕೆ ಮೂಡಿದೆ. ಮಂಗಳೂರಿನ ಸರ್ಕ್ಯೂಟ್‌ ಹೌಸ್‌ ಬಳಿ ಇರುವ ಅಪಾರ್ಟ್‌ ಮೆಂಟ್‌ ಗೋಡೆ ಮೇಲೆ ‘ಲಷ್ಕರ್‌ ಜಿಂದಾಬಾದ್‌ do not force us to invite lashkar e toiba’ ಎಂಬ ಪ್ರಚೋದನಕಾರಿ ಬರಹ ಕಾಣಿಸಿಕೊಂಡಿದೆ. ಇದು […]