ವಿದ್ಯುತ್ ಪ್ರವಹಿಸಿ ಕಂಬದಲ್ಲೇ ವ್ಯಕ್ತಿ ಮೃತ್ಯು; ಇಬ್ಬರು ಕಾರ್ಮಿಕರು ಗಂಭೀರ
ಬೆಳ್ತಂಗಡಿ: ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವ ಕಂಬದಲ್ಲೇ ಮೃತಪಟ್ಟು, ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಎಂಬಲ್ಲಿ ಇಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಮೂಡಬಿದಿರೆಯ ಕುಮಾರ್ ಎಲೆಕ್ಟ್ರಿಕಲ್ಸ್ ನ ಸಿಬ್ಬಂದಿ ಪ್ರತಾಪ್ ಮೂಡಬಿದಿರೆ (20) ಎಂದು ಗುರುತಿಸಲಾಗಿದೆ. ಇದೇ ಗುತ್ತಿಗೆದಾರ ಕಂಪೆನಿಯ ನೌಕರರಾದ ನಾಗಪ್ಪ ಮೂಡಬಿದಿರೆ ಮತ್ತು ಕಿಶೋರ್ ಮೂಡಬಿದಿರೆ ವಿದ್ಯುತ್ ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆಂಜದ ಶಾಲೆತ್ತಡ್ಕ ಜಂಕ್ಷನ್ ನಲ್ಲಿ ವಿದ್ಯುತ್ ಕಂಬ […]
ಪರ್ಪಲೆಗಿರಿಯಲ್ಲಿ ಕಲ್ಕುಡ ದೈವ, ವಿಷ್ಣುದೇಗುಲ ಇತ್ತು: ಅಷ್ಟಮಂಗಲದಲ್ಲಿ ಮಾಹಿತಿ ಲಭ್ಯ
ಕಾರ್ಕಳ: ಪರ್ಪಲೆ ಗಿರಿ ಶತಶತಮಾನಗಳ ಪುರಾತನ ಕಾಲದಲ್ಲಿ ವಿಸ್ತಾರವಾದ ವ್ಯಾಪ್ತಿ ಹೊಂದಿದ್ದು, ಹಲವಾರು ದೇವಸ್ಥಾನಗಳ ನೇರ ಸಂಬಂಧವನ್ನು ಹೊಂದಿರುವ ಬಗ್ಗೆ ಮೊದಲ ದಿನದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ತಿಳಿದುಬಂದಿದೆ. ಪರ್ಪಲೆ ಗಿರಿಯಲ್ಲಿ ಪ್ರಧಾನವಾಗಿ ಕಾರ್ಣಿಕದೊಡೆಯ ಕಲ್ಕುಡ ದೈವವು ಶತಶತಮಾನಗಳ ತನ್ನ ಸನ್ನಿಧಾನ ಚೈತನ್ಯದ ಇರುವಿಕೆಯ ಬಗ್ಗೆ ಊರ ಜನತೆಯನ್ನು ವಿವಿಧ ರೀತಿಯಲ್ಲಿ ಬಡಿದೆಚ್ಚರಿಸುತ್ತಾ, ತನ್ನ ಪುನರುತ್ಥಾನದ ಸಮಯವನ್ನು ಸಹ ನಿಗದಿ ಮಾಡಿಕೊಂಡಿದೆ ಎಂಬ ವಿಚಾರವೂ ಸ್ಪಷ್ಟವಾಗಿದೆ. ಹಾಗೆ ಪರ್ಪಲೆಗುಡ್ಡದ ತಪ್ಪಲಿನಲ್ಲಿ ಹಿಂದೆ ಪುರಾತನ ವಿಷ್ಣು ದೇಗುಲವಿತ್ತು. ಕಾಲಕ್ರಮೇಣ ಈ […]
ನಾಪತ್ತೆಯಾಗಿದ್ದ ಅಂಗನವಾಡಿ ಟೀಚರ್ ಲಾಡ್ಜವೊಂದರಲ್ಲಿ ಶವವಾಗಿ ಪತ್ತೆ
ಬೆಂಗಳೂರು: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈಕೆಯನ್ನು ಪ್ರಿಯತಮ ಕೊಲೆ ಮಾಡಿ ಪರಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಯನ್ನು ಅಂಗನವಾಡಿ ಟೀಚರ್ ಸಿದ್ದಾಪುರದ ಕಮಲಾ ಎಂದು ಗುರುತಿಸಲಾಗಿದೆ. ಈಕೆಯನ್ನು ಪ್ರಿಯಕರ ದಿಲೀಪ್ ಎಂಬಾತ ಕಲಾಸಿಪಾಳ್ಯದ ಅರ್ಚನಾ ಲಾಡ್ಜ್ ಗೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿ ದಿಲೀಪ್ ಲಾಡ್ಜ್ ನಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
ಯೋಗೀಶ್ವರ್ ಗೂ ಸಚಿವ ಸ್ಥಾನ ಸಿಗಬೇಕು: ಡಿಸಿಎಂ ಅಶ್ವಥ್ ನಾರಾಯಣ್
ಉಡುಪಿ: ಬಿಜೆಪಿ ಸರ್ಕಾರ ರಚನೆಯಲ್ಲಿ ಸಿ.ಪಿ. ಯೋಗೀಶ್ವರ್ ಪಾತ್ರ ಕೂಡ ಪ್ರಮುಖವಾಗಿದೆ. ಹಾಗಾಗಿ ಅವರಿಗೂ ಸಚಿವ ಸ್ಥಾನ ಸಿಗಬೇಕು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೀಶ್ವರ್ ಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಒತ್ತಾಯವಿದೆ. ನಮ್ಮ ಅಭಿಪ್ರಾಯ ಕೂಡ ಅದೇ ಆಗಿದೆ. ಆದರೆ ಈ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು. ಪಕ್ಷದಲ್ಲಿ ಮೂಲ, ವಲಸಿಗ ಎಂಬ ವಿಚಾರ ಬರುವುದಿಲ್ಲ. ಈಗ ಎಲ್ಲರೂ […]
ಶೇ. 80ರಷ್ಟು ಗ್ರಾಪಂ ಗೆಲ್ಲುವ ಗುರಿ ಹೊಂದಲಾಗಿದೆ: ಕಟೀಲ್
ಉಡುಪಿ: ಈ ಬಾರಿ ಶೇ. 80ರಷ್ಟು ಗ್ರಾಂ ಪಂಚಾಯತ್ ಗಳನ್ನು ಗೆಲ್ಲುವ ಗುರಿ ಹೊಂದಲಾಗಿದ್ದು, ಆ ನಿಟ್ಟಿನಲ್ಲಿ ಗ್ರಾಪಂ ಚುನಾವಣೆಗೆ ಪೂರ್ವತಯಾರಿ ಆಗಿ ಜಿಲ್ಲೆಗೆ ತಲಾ ಎರಡರಂತೆ ಒಟ್ಟು 62 ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಸ್ವರಾಜ್ಯ ಸಮಾವೇಶಕ್ಕಾಗಿ ರಾಜ್ಯದಲ್ಲಿ ಆರು ತಂಡಗಳನ್ನು ರಚನೆ ಮಾಡಲಾಗಿದೆ. ಒಂದೊಂದು ತಂಡಕ್ಕೆ ಐದು ಜಿಲ್ಲೆಗಳು ಬರುತ್ತವೆ. […]